ಪತ್ನಿಯ ಸೀಮಂತದ ದಿನವೇ ಕುಸಿದು ಬಿದ್ದು ಪತಿ ಸಾವು..!!

ವಿಟ್ಲ: ಪತ್ನಿಯ ಸೀಮಂತದ ದಿನವೇ ಕುಸಿದು ಬಿದ್ದು ಪತಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕನ್ಯಾನದಲ್ಲಿ ನಡೆದಿದೆ. ಕನ್ಯಾನ ಮಿತ್ತನಡ್ಕ ನಿವಾಸಿ ಪಿಕಪ್ ಚಾಲಕ ಸತೀಶ್ (33) ಮೃತ ವ್ಯಕ್ತಿ.ಪತ್ನಿಯ ಸೀಮಂತದ ದಿನ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಬಳಿಕಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಮೃತರು ತಂದೆ, ತಾಯಿ, ಪತ್ನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸೀಮಂತದ ಸಂಭ್ರದಲ್ಲಿ ಕುಟುಂಬದಲ್ಲಿ ಈಗ ಆಕ್ರಂದನ ಮುಗಿಲು…

Read More

ಸದ್ಬಳಕೆ ಆಗದ 1 ಕೋಟಿ 30 ಲಕ್ಷ ರೂಪಾಯಿ ಅನುದಾನ ನೆನೆಗುದಿಗೆ ಬಿದ್ದ ಸುರುಮಾ ತೋಡು ಶುದ್ದೀಕರಣ

ಮಂಜೇಶ್ವರ, ಮೇ 23: ಮಂಜೇಶ್ವರ ಗ್ರಾಮ ಪಂಚಾಯತಿಯ 3ನೇ ವಾರ್ಡಿನ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭವಾಗುವ ಮುನ್ನ ಸುರುಮ ತೋಡನ್ನು ಶುದ್ಧೀಕರಣ ಮಾಡುವ ಕೆಲಸಕ್ಕೆ ಸಂಬಂಧಪಟ್ಟ ಉದ್ದೇಶಿತ ಕಾರ್ಯಗಳು ಇಲ್ಲಿಯವರೆಗೆ ಆರಂಭವಾಗಿಲ್ಲ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಈ ನಿರ್ಲಕ್ಷ್ಯದ ಪರಿಣಾಮವಾಗಿ, ತೋಡಿನಲ್ಲಿ ತುಂಬಿ ಕೊಂಡಿರುವ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳು ಕೃಷಿಕರ ಹೊಲಗಳಿಗೆ ನುಗ್ಗಿ ಬೆಳೆ ಹಾನಿಗೆ ಕಾರಣವಾಗುತ್ತಿದೆ. ಸ್ಥಳೀಯ ರೈತರು ಹಾಗೂ ಪರಿಸರವಾಸಿಗಳು ನೀಡಿರುವ ಮಾಹಿತಿಯಂತೆ, ತೋಡಿನ ನವೀಕರಣಕ್ಕಾಗಿ ಸರಕಾರದಿಂದ ಸುಮಾರು ಒಂದು ಕೋಟಿ…

Read More

ಮಂಗಳೂರು ವಿಶ್ವವಿದ್ಯಾಲಯ ಯಕ್ಷ ಮಂಗಳ ಪ್ರಶಸ್ತಿಗೆ ಡಾ. ರಮಾನಂದ ಬನಾರಿ, ಪ್ರೊಫೆಸರ್ ಎಂಎಲ್ ಸಾಮಗ, ಸಿದಕಟ್ಟೆ ಸದಾಶಿವ ಶೆಟ್ಟಿಗಾರ್ ಗೆ. ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಗ್ರಂಥಕ್ಕೆ ಅತ್ಯುತ್ತಮ ಕೃತಿ ಪ್ರಶಸ್ತಿ.

ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಬಿ ದಯಾನಂದ ಪೈ ಮತ್ತು ಶ್ರೀ ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2023 24 ನೇ ಸಾಲಿನ ಯಕ್ಷಮಂಗಲ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಅರ್ಥದಾರಿ ಲೇಖಕ, ಸಾಹಿತಿ ರಮಾನಂದ ಬನಾರಿ, ಹಿರಿಯ ಯಕ್ಷಗಾನ ಕಲಾವಿದ ವಿದ್ವಾಂಸ ಪ್ರೊಫೆಸರ್ ಎಂಎಲ್ ಸಾಮಗ, ಹಿರಿಯ ಬಣ್ಣದ ವೇಷ ದಾರಿ ಸದಾಶಿವ ಶೆಟ್ಟಿ ಸಿದ್ದಕಟ್ಟೆ ಅವರು ಆಯ್ಕೆಯಾಗಿದ್ದಾರೆ ಹಿರಿಯ ಜಾನಪದ ವಿದ್ವಾಂಸರಾದ ಪ್ರೂ. ಚನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಪ್ರೊ. ಪಾದೆ ಕಲ್ಲು…

Read More

ಚೆರ್ಕಳ ಬೇವಿಂಜೆಯಲ್ಲಿ ಚಲಿಸುತ್ತಿದ್ದ ಕಾರು ಅಗ್ನಿಗೆ ಆಹುತಿ : ಕಾರಿನಲ್ಲಿದ್ದ ಐವರು ಅಪಾಯದಿಂದ ಪಾರು

ಕಾಸರಗೋಡು: ಇಲ್ಲಿನ ಚೆರ್ಕಳ ಬೇವಿಂಜೆ ಗುಡ್ಡೆಯಲ್ಲಿ ಚಲಿಸುತ್ತಿದ್ದ ಕಾರೊಂದು ಇಂದು ಬೆಳಿಗ್ಗೆ ಹೊತ್ತಿ ಉರಿದಿದೆ.ಕಾರಿನಲ್ಲಿದ್ದ ಐವರ ತಂಡ ಅದೃಷ್ಟವಶಾತ್ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನ್ಯೂ ಮುಂಬೈಯಿಂದ ಕೇರಳದ ಕಣ್ಣೂರು ಜಿಲ್ಲೆಯ ಕಣ್ಣೋಪುರಂಗೆ ಬರುತ್ತಿದ್ದ ಸಿಎನ್ ಜಿ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಇವರು ಮುಂಬೈಯಿಂದಲೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಚೆರ್ಕಳ ದಾಟುತ್ತಿದ್ದಂತೆಯೇ ಕಾರಿನಿಂದ ಹೊಗೆ ಏಳುವುದನ್ನು ಗಮನಿಸಿದ ಚಾಲಕ ಇಕ್ಬಾಲ್ ಅಹಮ್ಮದ್ ಕುಟ್ಟಿ ಬೇವಿಂಜೆಯಲ್ಲಿ ಕಾರು ನಿಲ್ಲಿಸಿ ಅದರಲ್ಲಿ…

Read More

ಗಡಿಯಲ್ಲಿ ಸೈನಿಕರಿದ್ದಾರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ದೇಶಪ್ರೇಮಿಗಳು ನಾಶ ಮಾಡಬೇಕು – ಮಾಜಿ ಸೈನಿಕ ವಿಜಯ್ ಕುಮಾರ್.

ಹೊಸಂಗಡಿ – ಪಾಕಿಸ್ತಾನವನ್ನು ನಾಶ ಮಾಡಲು ಭಾರತಕ್ಕೆ ಒಂದು ದಿನವೂ ಬೇಡ ಆದರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ನಿಗ್ರಹ ಮಾಡಬೇಕಾದದ್ದು ದೇಶಪ್ರೇಮಿಗಳ ಕರ್ತವ್ಯ ಎಂದು ನಿವೃತ್ತ ಕಮಂಡರ್ ವಿಜಯ ಕುಮಾರ್ ಕಣ್ವತೀರ್ಥ ಹೇಳಿದರು ಹೊಸಂಗಡಿಯಲ್ಲಿ ಬಿಜೆಪಿ ಮಂಡಲ ಸಮಿತಿ ಹಮ್ಮಿಕೊಂಡ ಭಾರತ್ ಶೌರ್ಯ ತಿರಂಗ ಯಾತ್ರೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಜೆಪಿ ಮಾಜಿ ಜಿಲ್ಲಾ ಪ್ರ ಕಾರ್ಯದರ್ಶಿ ವಿಜಯ್ ರೈ ಉದ್ಘಾಟಿಸಿದರು, ಆಧುನಿಕ ಜಗತ್ತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತ ಬಲಿಷ್ಠ ಸೈನಿಕ ಶಕ್ತಿಯನ್ನು…

Read More

ಮಂಜೇಶ್ವರ: ಆಂಬ್ಯುಲೆನ್ಸ್ ಸೇರಿದಂತೆ ಐದು ವಾಹನಗಳು ಪರಸ್ಪರ ಡಿಕ್ಕಿ,ಆಂಬ್ಯುಲೆನ್ಸ್ ನಲ್ಲಿದ್ದ  ಮಹಿಳೆ ಆಸ್ಪತ್ರೆಯಲ್ಲಿ ಸಾವು

ಮಂಜೇಶ್ವರ: ಬಿರುಸಾಗಿ ಸುರಿಯುತ್ತಿದ್ದ ಮಳೆಗೆ ಹತ್ತು ವರ್ಷದ ಬಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯುತಿದ್ದ ಆಂಬ್ಯುಲೆನ್ಸ್ ಸೇರಿದಂತೆ ಐದು ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಆಂಬ್ಯುಲೆನ್ಸ್ ನಲ್ಲಿದ್ದ  ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಣ್ಣೂರು ನಿವಾಸಿ ಶಾಹಿನಾ (48) ಸಾವನ್ನಪ್ಪಿದ ದುರ್ದೈವಿ. ಜೊತೆಯಾಗಿದ್ದ ಬಾಲಕನ ಚಿಕ್ಕಮ್ಮ ಚಿಂತಾ ಜನಕ ಸ್ಥಿತಿಯಲ್ಲಿ ನಿಘಾ ಘಟಕದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಗಾಯಗೊಂಡ ಇತರ 5 ಮಂದಿ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ ಮಂಗಳವಾರ ಸಂಜೆ ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾಸರಗೋಡು…

Read More

ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಬುಲೆನ್ಸ್ ಸೇರಿದಂತೆ 5ವಾಹನಗಳು ಅಪಘಾತ.

ಅಪಘಾತದಲ್ಲಿ ಒಬ್ಬಾತ ಸಾವನ್ನಪ್ಪಿದ್ದಾರೆ. 5ಮಂದಿಗೆ ತೀವ್ರ ಗಾಯ ತೀವ್ರವಾದ ಮಳೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ

Read More

ಹೊಸಂಗಡಿಯ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಉತ್ಸಾಹ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೇಸಿಗೆ ಶಿಬಿರ

ಹೊಸಂಗಡಿಯ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಉತ್ಸಾಹ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೇಸಿಗೆ ಶಿಬಿರಕ ಅದ್ದೂರಿಯಾಗಿ ನಡೆಯಿತು.ಈ ಶಿಬಿರವು ಮಕ್ಕಳಲ್ಲಿನ ವಿವಿಧ ಪ್ರತಿಭೆಗಳನ್ನು ಹೊರತೆಗೆದು ಅವುಗಳನ್ನು ಕಾರ್ಯಗತಗೊಳಿಸಲು ಅನುಕೂಲ ಮಾಡಿ ಕೊಟ್ಟಿತು. ಈ ಶಿಬಿರದಲ್ಲಿ ವಿವಿಧ ಪ್ರಾಯೋಗಿಕ ಹಾಗೂ ಮನರಂಜನೆ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಈ ಪೈಕಿ ವಿದ್ಯಾರ್ಥಿಗಳಿಗೆ ಶಾರೀರಿಕ ತಾಳ್ಮೆ ಮತ್ತು ಆತ್ಮರಕ್ಷಣೆ ಕಲೆ ಕಲಿಸುವ ಉದ್ದೇಶದೊಂದಿಗೆ ಕರಾಟೆ ತರಬೇತಿ, ಸುಂದರ ಲಿಪಿ ಬರವಣಿಗೆಯ ಕಲೆ ಕ್ಯಾಲಿಗ್ರಫಿ…

Read More

ಪಂಜಾಬ್‌ನಲ್ಲಿ ಧರ್ಮಸ್ಥಳ ಯುವತಿ ಸಾವಿಗೆ ಕಾರಣವಾದ ಆರೋಪಿಯ ಬಂಧನ: ದೆಹಲಿಗೆ ಮೃತದೇಹ ರವಾನೆ

ಧರ್ಮಸ್ಥಳ ಗ್ರಾಮದ ಬೊಳಿಯರ್ ನಿವಾಸಿ ಆಕಾಂಕ್ಷ ಎಸ್ ನಾಯರ್(22) ಆತ್ಮಹತ್ಯೆ ಪ್ರಕರಣ ಸಂಬಂಧ ಆರೋಪಿ ಪ್ರೊಫೆಸರ್ ಕೇರಳ ಮೂಲದ ಬಿಜಿಲ್ ಸಿ ಮ್ಯಾಥ್ಯೂ ಎಂಬಾತನನ್ನು ಮೇ.19 ರಂದು ರಾತ್ರಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಂಬುಲೆನ್ಸ್ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ರಾತ್ರಿ 2 ಗಂಟೆಗೆ ತೆಗೆದುಕೊಂಡು ಬಂದಿದ್ದಾರೆ. ಧರ್ಮಸ್ಥಳ ಗ್ರಾಮದ ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿಗಳ ಎರಡನೇ ಪುತ್ರಿ ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ ಉದ್ಯೋಗಿಯಾಗಿದ್ದ ಆಕಾಂಕ್ಷ ಎಸ್ ನಾಯರ್(22) ಆತ್ಮಹತ್ಯೆ…

Read More

ಕೇರಳ ಸರಕಾರದ ನಾಲ್ಕನೇ ವಾರ್ಷಿಕೋತ್ಸವ; ಮುಖ್ಯಮಂತ್ರಿ ಮತ್ತು ಸಚಿವರು ಕೇಕ್ ಕತ್ತರಿಸುವ ಮೂಲಕ ಸಂಭ್ರಮ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಕ್ ಕತ್ತರಿಸುವ ಮೂಲಕ ರಾಜ್ಯ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸಿದರು. ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಸಚಿವರುಗಳು ಭಾಗವಹಿಸಿದರು. ಎರಡನೇ ಪಿಣರಾಯಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ಸಾಧಿಸಿದೆ ಎಂಬ ವಿಶ್ವಾಸದೊಂದಿಗೆ ಮುಖ್ಯಮಂತ್ರಿ ಮತ್ತು ಸಚಿವರು ಕೇಕ್ ಕತ್ತರಿಸುವ ಮೂಲಕ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸಿದರು. ಸಚಿವರಾದ ಕೆ ರಾಜನ್, ಪಿ ರಾಜೀವ್, ಕೆ ಕೃಷ್ಣನ್ಕುಟ್ಟಿ, ರೋಶಿ ಆಗಸ್ಟೀನ್, ಕಡನ್ನಪಳ್ಳಿ ರಾಮಚಂದ್ರನ್ ಮತ್ತು ಕೆ ಬಿ ಗಣೇಶ್ ಕುಮಾರ್…

Read More
error: Content is protected !!