ಸಂಪೂರ್ಣ ಹದಗೆಟ್ಟಿದ ವರ್ಕಾಡಿ ರಸ್ತೆ ಸ್ಥಳೀಯರ ಆಕ್ರೋಶ
ಮಂಜೇಶ್ವರ: ವರ್ಕಾಡಿ ಪಂಚಾಯತ್ ವ್ಯಾಪ್ತಿಯ 2 ಹಾಗೂ 15 ನೇ ವಾರ್ಡ್‌ಗಳಿಗೆ ಸೇರಿದ ಮುಡಿಮಾರ್ ಮತ್ತು ಸುಂಕದಕಟ್ಟೆಯನ್ನು ಹಾಗೂ ಕರ್ನಾಟಕದ ಗಡಿಯನ್ನು ಸುಲಭವಾಗಿ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದ್ದರೂ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಯಾರೂ ಇತ್ತ ಗಮನ ಹರಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಯನ್ನು ಅವಲಂಬಿಸಿ ಸುಮಾರು 250 ಕುಟುಂಬಗಳು ಇಲ್ಲಿ ವಾಸಿಸುತ್ತಿದೆ. ಈ ರಸ್ತೆ ಭಾರೀ ಶೋಚನೀಯಾವಸ್ಥೆಗೆ ತಲುಪಿದೆ. 15 ವರ್ಷಗಳ ಹಿಂದೆ ನಿರ್ಮಿಸಲಾದ ಈ ರಸ್ತೆಗೆ ಮರು ಡಾಮಾರೀಕರಣ ಮಾಡುವ ಎಲ್ಲಾ ಸಿದ್ಧತೆಗಳು…