‘ಬದ್ರಿಯಾ ಅಲುಮಿನಿ ಅಸೋಸಿಯೇಷನ್ ‘ ಬದ್ರಿಯಾ ಹಳೆ ವಿದ್ಯಾರ್ಥಿಗಳ ಸಮಾವೇಶ ಸೆಪ್ಟೆಂಬರ್19 ರಂದು

ಮಂಗಳೂರಿನ ಪ್ರತಿಷ್ಠಿತ ಬದ್ರಿಯಾ ವಿದ್ಯಾಸಂಸ್ಥೆ 1928ರಲ್ಲಿ ಸ್ಥಾಪನೆಗೊಂಡು 2028ರಲ್ಲಿ ಸಂಸ್ಥೆಯು ಶತಮಾನೋತ್ಸವ ಆಚರಿಸಲಿದೆ . ಇದರ ಪೂರ್ವ ತಯಾರಿಯ ಭಾಗವಾಗಿ ಬದ್ರಿಯಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘ ‘ಬದ್ರಿಯಾ ಅಲುಮಿನಿ ಅಸೋಸಿಯೇಷನ್ ‘ ನನ್ನು ರೂಪಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್19 ರಂದು ಬದ್ರಿಯಾ ಹಳೆ ವಿದ್ಯಾರ್ಥಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಹಮ್ಮದ್ ಕುಂಞ ತಿಳಿಸಿದರು . ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು , ಬದ್ರಿಯಾ ಹಳೆ ವಿದ್ಯಾರ್ಥಿಗಳ ಸಮಾವೇಶವು ಸಂಜೆ 4:00ರಿಂದ 6:00 ಗಂಟೆ ತನಕ…

Read More

ಕಾಸರಗೋಡು,ಬಂದಡ್ಕ :ಬಾಲಸಂಘದ ವಿಲೇಜ್ ಘಟಕ ಅಧ್ಯಕ್ಷೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿನಿ ದೇವಕಿ (16 )ನೇಣುಬಿಗಿದು ಆತ್ಮಹತ್ಯೆಗೆ ಶರಣು

ಕಾಸರಗೋಡು : ಬಂದಡ್ಕದಲ್ಲಿ 10ನೇ ತರಗತಿ ಶಾಲಾ ವಿದ್ಯಾರ್ಥಿನಿ ಮಲಗುವ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ನಡೆಸಿರುವ ಘಟನೆ ನಡೆದಿದೆ. ಕುಂಡಾಂಗುಳಿ ಸರಕಾರಿ ಹಯರ್ ಸೆಕಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದೇವಕಿ (16)ಆತ್ಮಹತ್ಯೆ ನಡೆಸಸಿದೆ. ಮಂಗಳವಾರ ಬೆಳಿಗ್ಗೆ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಈಕೆಯ ಮೃತದೇಹ ಪತ್ತೆಯಾಯಿತು. ಮೃತ ವಿದ್ಯಾರ್ಥಿನಿ ಬಂದಡ್ಕ ಗ್ರಾಮೀಣ ಬೇಂಕಿನ ಬಳಿಯಲ್ಲಿ ಗಂಜಿ ಕ್ಯಾಂಟೀನ್ ನಡೆಸುವ ಮಹಿಳೆ ಸಾವಿತ್ರಿ ಎಂಬವರ ಮಗಳಾಗಿದ್ದು, ಆತ್ಮಹತ್ಯೇಗೆ ಕಾರಣ ಏನೆಂದು ತಿಳಿದು…

Read More

ಕರಾವಳಿ ಕೆಂಪುಕಲ್ಲು ಸಮಸ್ಯೆಗೆ ಶಾಶ್ವತ ಪರಿಹಾರ ; ಸ್ಪೀಕ‌ರ್ ಯು.ಟಿ. ಖಾದರ್

ಮಂಗಳೂರು:ಇತ್ತೀಚಿಗೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕೆಂಪು ಕಲ್ಲಿನ ಸಮಸ್ಯೆಗಳೆಲ್ಲವನ್ನೂ ಬಗೆಹರಿಸಲಾಗಿದೆ. ಇನ್ನು ಮುಂದೆ ಕೆಂಪು ಕಲ್ಲಿನ ದರ ಹಿಂದಿನ ದರಕ್ಕಿಂತ ಅಧಿಕವಾಗಲು ಸಾಧ್ಯವಿಲ್ಲ. ಸರ್ಕಾರಕ್ಕೆ ಸಲ್ಲಿಸಬೇಕಾದ ರಾಜಧನವನ್ನು ಕಡಿಮೆಗೊಳಿಸಲಾಗಿದ್ದು ಹಿಂದೆ ಇದ್ದ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ. ಇನ್ನು ಮುಂದೆ ವ್ಯಾಪಾರಸ್ಥರು ಕೆಂಪು ಕಲ್ಲು ವ್ಯಾಪಾರವನ್ನು ಧೈರ್ಯದಿಂದ ಮಾಡಬಹುದು ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಫರೀದ್ ತಿಳಿಸಿದರು . ಅವರು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊನ್ನೆಯ ಕ್ಯಾಬಿನೆಟ್‌ನಲ್ಲಿ ಅಧಿಕಾರಿಗಳು, ಶಾಸಕರು, ಕೆಂಪು ಕಲ್ಲಿನ…

Read More

ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭ

ಅನೇಕ ದಿನಗಳ ಕನಸಾಗಿರುವ ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲುಗಳ ಸಂಚಾರ ಆರಂಭಗೊಂಡಿದೆ. ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ರೈಲು ಆರಂಭಗೊಳ್ಳುವುದರೊಂದಿಗೆ ಈ ಭಾಗದ ಪ್ರಯಾಣಿಕರ ಬಹುಕಾಲದ ಕನಸು ನನಸಾಗಿದೆ. ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೈಲು ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಯೋಜನೆ ಪೂರ್ಣಗೊಂಡು ಇದೀಗ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ನಡುವೆ ವಿದ್ಯುತ್‌ಚಾಲಿತ ರೈಲುಗಳ ಓಡಾಟ ಆರಂಭಗೊಂಡಿದೆ. ಸೆ.11 ರಂದು ವಿದ್ಯುತ್‌ ಚಾಲಿತ ರೈಲು ಇಂಜಿನ್‌ನ…

Read More

ಜನರ ಹೃದಯದಿಂದ ಎಡರಂಗ ಅಸ್ತಮಯ- ಕಾಂಗ್ರೆಸ್.

ಕೋಮುಶಕ್ತಿಗಳ ಬೆಂಬಲದೊಂದಿಗೆ ಕುಟಿಲ ಮತ್ತು ಕೀಳು ತಂತ್ರಗಳ ಮೂಲಕ ಅಧಿಕಾರಕ್ಕೇರಿದ ಎಡರಂಗವು ಜನಹೃದಯಗಳಿಂದ ಶಾಶ್ವತವಾಗಿ ಮರೆಯಾಗುವ ಹಂತದಲ್ಲಿದೆ. ಒಂದು ಕಾಲದಲ್ಲಿ ಶ್ರಮಿಕರು, ಕೃಷಿಕರು, ಭೂರಹಿತರು ಮುಂತಾದ ದಮನಿತ ಜನರಿಗಾಗಿ ಹೋರಾಡುತ್ತಿದ್ದ ಸಿಪಿಎಂ ಇಂದು ಸ್ವತಃ ಶೋಷಕರಾಗಿ ಮಾರ್ಪಟ್ಟದ್ದು ವಿಷಾದಕರ. ಕಂಡ ಕಂಡ ವಿಷಯಗಳಿಗೆ ತೆರಿಗೆ ವಿಧಿಸಿ ಜನರನ್ನು ಚೆನ್ನಾಗಿ ಸುಲಿಗೆ ಮಾಡಿದ ಸಿಪಿಎಂ ಈಗ ಬಹುಕೋಟಿ ವ್ಯವಹಾರಗಳ ಖದೀಮರ ಡಾರ್ಲಿಂಗ್ ಆಗಿ ಮಾರ್ಪಟ್ಟಿದೆ. ಆಡಳಿತದ ಸಕಲ ವಲಯಗಳಲ್ಲೂ ವಿಫಲವಾದ ಎಡರಂಗವು ಇತರರ ಖಾಸಗಿ ಜೀವನಕ್ಕೆ ಇಣುಕಿ ನೋಡುವ…

Read More

ಉಪ್ಪಳ ತುರ್ತಿ ಪಡೆಂಕುಡಿಯ ತರವಾಡಿನಲ್ಲಿ 2026 ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ವಿಶೇಷ ಸಮಾಲೋಚನಾ ಸಭೆ

ಉಪ್ಪಳ ತುರ್ತಿ ಪಡೆಂಕುಡಿಯ ತರವಾಡಿನಲ್ಲಿ 2026 ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ವಿಶೇಷ ಸಮಾಲೋಚನಾ ಸಭೆ ತರವಾಡು ಕ್ಷೇತ್ರದಲ್ಲಿ ನಡೆಯಿತು. ಸಭೆಯಲ್ಲಿ ಉತ್ತರ ಮಲಬಾರ್ ತೀಯಾ ಕ್ಷೇತ್ರ ಸಂರಕ್ಷಣಾ ಸಮಿತಿ ಇದರ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಜನ್ ಪೆರಿಯ ಉಪಸ್ಥಿತರಿದ್ದು ತೆಯ್ಯಂ ಕೆಟ್ಟ್ ಮಹೋತ್ಸವದ ಕುರಿತಾದ ಸಮಗ್ರ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸುಕುಮಾರ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಆಚಾರ ಪಟ್ಟವರಾದ ಶ್ರೀ ಹರಿಪ್ರಸಾದ್…

Read More

ಡಾ. ವಾಮನ್ ರಾವ್ ಬೇಕಲ್ ರೀಗೆ -ವಿಶ್ವ ರಾಮಕ್ಷತ್ರಿಯ ಮಹಾಸಂಘ ಮಹಾಸಭೆ ಯಲ್ಲಿ ಸನ್ಮಾನ

ಕಾಸರಗೋಡು : ವಿಶ್ವ ರಾಮಕ್ಷತ್ರಿಯ ಮಹಾಸಂಘದ ವತಿಯಿಂದ ದಿನಾಂಕ 14.09.2025ರಂದು ಶ್ರೀ ಸೀತಾ ರಾಮಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಸದಸ್ಯರ ದ್ವೈವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಇತ್ತೀಚಿಗೆ ಸಾಮಾಜಿಕ ಕ್ಷೇತ್ರದಲ್ಲಿನ ಸರ್ವತೋಮುಖ ಸೇವೆಯನ್ನು ಪರಿಗಣಿಸಿ ಲಭಿಸಿದ ಡಾಕ್ಟ್ರೇರೇಟ್ ಪದವಿಯನ್ನು, ಹಾಗೂ ಕಾಸರಗೋಡು ಕನ್ನಡ ಭವನ ಮುಖಾಂತರ ನಡೆಸುತ್ತಿರುವ ಕನ್ನಡ ಪರ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಸೇವೆ, ಕನ್ನಡ ಭವನ ಉಚಿತ ವಸತಿ ಸೌಕರ್ಯ, ಉಚಿತ ಸಾರ್ವಜನಿಕ ವಾಚನಾಲಯ ಸೇವೆ, ಕನ್ನಡ ಭವನ ಪ್ರಕಾಶನ ಮೂಲಕ ರಾಮಕ್ಷತ್ರಿಯ…

Read More

ಹಿಪ್ನೋಟಿಸಂ ಹೆಸರಲ್ಲಿ ಕಿರಿಯ ವಿದ್ಯಾರ್ಥಿಳನ್ನು ಹಿಗ್ಗಾಮುಗ್ಗಾ ಥಳಿಸಿ ಪ್ರಜ್ಞೆ ತಪ್ಪಿಸಿದ ಹಿರಿಯ ವಿದ್ಯಾರ್ಥಿಗಳು : ನೂತನ ಶೈಲಿಯ ರಾಗಿಂಗ್

ಮಂಜೇಶ್ವರ : ಶಾಲಾ ವಿದ್ಯಾರ್ಥಿಗಳು ನೂತನ ರೀತಿಯ ರಾಗಿಂಗ್ ಕಂಡು ಹಿಡಿದಿದ್ದು,ಹಿಪ್ನೋಟಿಸಂ ಹೆಸರಲ್ಲಿ ಹೊಸ ರಾಗಿಂಗ್ ಇದೀಗ ಭಾರೀ ಸುದ್ದಿಯಾಗುತ್ತಿದೆ. ಹಿಪ್ನೋಟಿಸಂ ತೋರಿಸಿ ಕೊಡುವುದಾಗಿ ಹೇಳಿ ಕೆಲವೊಂದು ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಗಂಭೀರ ಹಲ್ಲೆಗೈದು ಅವರ ಪ್ರಜ್ಞೆ ತಪ್ಪಿಸಿರುವುದು ಆತಂಕಕ್ಕೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಗುತಿದ್ದಂತೆಯೇ ಸಂಬಂಧಪಟ್ಟ ಶಾಲಾ ಅಧಿಕಾಕಸ್ಥರನ್ನು ಹಾಗೂ ಘಟನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಹಾಗೂ ಅವರ ಹೆತ್ತವರನ್ನು ಕುಂಬಳೆ ಪೊಲೀಸರು ಠಾಣೆಗೆ ಕರೆಸಿ…

Read More

ಕಟ್ಟೆ ಪ್ರೆಂಡ್ಸ್ ಮತ್ತು ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೆತೃತ್ವದಲ್ಲಿ ಓಣಂ ಹಬ್ಬ.

ಕಟ್ಟೆ ಪ್ರೆಂಡ್ಸ್ ಮತ್ತು ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೇತೃತ್ವ ದಲ್ಲಿ ಓಣಂ ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಅಡ್ಕ ಶ್ರೀ ಚಕ್ರಪತಿ ಬೀರಮಾರ್ಲರ್ ಮಾಡ ಪರಿಸರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೈವದ ಪಾತ್ರಿ ರಾಧಾಕೃಷ್ಣ ಅಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು .ಸಂಸ್ಥೆಯ ಅಧ್ಯಕ್ಷರಾದ ಸಂಜೀವ ವೀರನಗರ ಅಧ್ಯಕ್ಷತೆ ವಹಿಸಿದ್ದರು. ಶಾಂತಾರಾಮ್ ಶೆಟ್ಟಿ,ಭಗವಾನ್ ದಾಸ್ ಶೆಟ್ಟಿ ಉಪಸ್ಥಿತರಿದ್ದರು. ಸ್ಪರ್ಧೆಯ ನಂತರ ಬಹುಮಾನ ವಿತರಣೆಯು ನಡೆಯಿತು .ಕಾರ್ಯಕ್ರಮವನ್ನು ಬಾಲಕೃಷ್ಣ ವಿ ಎನ್ ನಿರೂಪಿಸಿದರು.

Read More

ಶ್ರೀ ಗೌರಿ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿಇದರ ವಾರ್ಷಿಕ ಮಹಾ ಸಭೆ

ಶ್ರೀ ಗೌರಿ ಗಣೇಶ ಯಕ್ಷಗಾನ ಅಧ್ಯಯನ ಕೇಂದ್ರ ಪ್ರತಾಪನಗರ ಮಂಗಲ್ಪಾಡಿ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 14/09/25 ನೇ ರವಿವಾರ ಗೌರಿ ಗಣೇಶ ಮಂದಿರದಲ್ಲಿ ಶ್ರೀ ಪರಪ್ಪು ಲೋಕನಾಥ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರ್ಥನೆಯ ಬಳಿಕ. ಶ್ರೀ ಆನಂದ ಮಾಸ್ತರ್ ಸ್ವಾಗತಿಸಿದರು. ಗೌರವ ನಿರ್ದೇಶಕರಾದ ಶ್ರೀ ನಾರಾಯಣ ಮಣಿಯಾಣಿ ಹಾಗೂ ಶ್ರೀ ಗಣೇಶಸುಧಾ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನಿತ್ತರು. ಯಕ್ಷಗುರುಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನೂತನ ಚೆಂಡೆ ಮದ್ದಳೆ ಖರೀದಿಸುವರೇ ತೀರ್ಮಾನ…

Read More
error: Content is protected !!