ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 200 ವರ್ಷ ಹಳೆಯ ಹನುಮಾನ್ ದೇವಾಲಯದಲ್ಲಿ ವಿಗ್ರಹಗಳ ಸುತ್ತ ನಿರಂತರ ಪ್ರದಕ್ಷಿಣೆ ನಡೆಸುತ್ತಿರುವ ನಾಯಿ; ಸ್ಥಳೀಯರಲ್ಲಿ ಅಚ್ಚರಿ
ಉತ್ತರ ಪ್ರದೇಶ : ಬಿಜ್ನೋರ್ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಾಯಿಯೊಂದು ದೇವಸ್ಥಾನದೊಳಗೆ ಹನುಮಾನ್ ಮತ್ತು ಮಾ ದುರ್ಗಾ ದೇವರ ವಿಗ್ರಹಗಳನ್ನು ನಿರಂತರವಾಗಿ ಸುತ್ತುತ್ತಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.ನಾಯಿಯು ಹಲವಾರು ಗಂಟೆಗಳ ಕಾಲ ನಿರಂತರವಾಗಿ ವಿಗ್ರಹಕ್ಕೆ ಪ್ರದಕ್ಷಿಣೆ ನಡೆಸುತ್ತಿರುವ ದೃಶ್ಯವು ಸ್ಥಳೀಯರನ್ನು ಆಶ್ಚರ್ಯಚಕಿತಗೊಳಿಸಿದೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ನಾಯಿ ಮೊದಲ ಮೂರು ದಿನಗಳ ಕಾಲ ಹನುಮಂತನ ವಿಗ್ರಹವನ್ನು ಸುತ್ತುತ್ತಿತ್ತು.ಬುಧವಾರ ಅದು ಮಾ ದುರ್ಗಾ ಮಾತೆಯ ವಿಗ್ರಹವನ್ನು ಸುತ್ತಲು ಪ್ರಾರಂಭಿಸಿತು. ನಾಯಿ ಯಾವುದೇ ಆಹಾರವನ್ನು ಸೇವಿಸದೆ, ನೀರನ್ನೂ ಕುಡಿಯದೆ…
