ಬಾಂಗ್ಲಾದೇಶಿ ಎಂದು ಆರೋಪಿಸಿ ವಲಸೆ ಕಾರ್ಮಿಕನ ಮೇಲೆ ಕೊಲೆಯತ್ನ: ಕಾವೂರು ಪೊಲೀಸರಿಂದ ನಾಲ್ಕನೇ ಆರೋಪಿ ಬಂಧನ
ಮಂಗಳೂರಲ್ಲಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತನನ್ನು ಕೂಳೂರಿನ ಮೋಹನ್ (37) ಎಂದು ಗುರುತಿಸಲಾಗಿದೆ. ಈ ಮುಂಚೆ ಕೂಳೂರಿನ ರತೀಶ್ ದಾಸ್ (32), ಧನುಷ್ (24), ಸಾಗರ್ (24) ಎಂಬವರನ್ನು ಬಂಧಿಸಲಾಗಿತ್ತು. ಮೋಹನ್‌ನ ಬಂಧನದೊಂದಿಗೆ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನೂ ಪೊಲೀಸರು ಬಂಧಿಸಿದಂತಾಗಿದೆ.ಕಳೆದ 15 ವರ್ಷಗಳಿಂದ ಮಂಗಳೂರು ಸೇರಿದಂತೆ ಮತ್ತಿತರ ಕಡೆ ಮೇಸ್ತ್ರಿ ಕೆಲಸ ಮಾಡುತ್ತಿದ್ದ ದಿಲ್‌ಜಾನ್ ಅನ್ಸಾರಿ…
