ಆಕಸ್ಮಿಕ ಬೆಂಕಿ ಅವಘಡ: ಗುಜರಿ ಅಂಗಡಿ ಸುಟ್ಟು ಕರಕಲು

ಮಂಗಳೂರು: ಆಕಸ್ಮಿಕ ಬೆಂಕಿ ಅವಘಡಕ್ಕೆ ಗುಜರಿ ಅಂಗಡಿ ಸುಟ್ಟು ಕರಕಲಾಗಿದೆ.ಈ ಘಟನೆ ಉಳ್ಳಾಲದ ರಾಷ್ಟ್ರೀಯ ಹೆದ್ದಾರಿ 66 ರ ಸೋಮೇಶ್ವರ ಉಚ್ಚಿಲ ಜಂಕ್ಷನ್ ಬಳಿ ಸಂಭವಿಸಿದೆ. ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಆದಿತ್ಯವಾರ ಮಧ್ಯಾಹ್ನ ತಲಪಾಡಿ ಉಚ್ಚಿಲದ ಅಂಡರ್ ಪಾಸ್ ಬಳಿಯ ಇಕ್ಬಾಲ್ ಹಾಗೂ ಇಬ್ರಾಹಿಂ ಅವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಹೊತ್ತಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು ದಟ್ಟ ಹೊಗೆಯು ಉಚ್ಚಿಲ, ತಲಪಾಡಿ,…

Read More

ಉಡುಪಿ: ಕನಿಷ್ಠ ಕೂಲಿ, ತುಟ್ಟಿಭತ್ಯೆ ಪಾವತಿಸದೆ ಬೀಡಿ ಕಾರ್ಮಿಕರಿಗೆ ವಂಚನೆ-ಬೀಡಿ ಮಾಲೀಕರ ವಿರುದ್ಧ ಬೀಡಿ ಕಾರ್ಮಿಕರ ಧರಣಿ,ಕೂಡಲೇ ಬಾಕಿ ಇರುವ ಕನಿಷ್ಠ ಕೂಲಿ- ತುಟ್ಟಿ ಭತ್ಯೆ ಪಾವತಿಸಲು ಆಗ್ರಹ

ಉಡುಪಿ: 2018ರಿಂದ 2024 ವರೆಗಿನ 6 ವರ್ಷಗಳ ಬಾಕಿ ಇರುವ ಕನಿಷ್ಠ ಕೂಲಿ, 2024ರಂದು ಅಧಿಸೂಚಿಸಿದ ಕನಿಷ್ಠ ಕೂಲಿ ಮತ್ತು ತುಟ್ಟಿಭತ್ಯೆಯನ್ನು ಬೀಡಿ ಕಾರ್ಮಿಕರಿಗೆ ಪಾವತಿಸುವಂತೆ ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಅಂಬಲಪಾಡಿಯ ಭಾರತ್ ಬೀಡಿ ಕಂಪೆನಿ ಎದುರು ಇಂದು ಧರಣಿ ನಡೆಸಿದರು. ಬೀಡಿ ಮಾಲೀಕರು ಕಾರ್ಮಿಕರನ್ನು ವಂಚನೆ ಮಾಡುತ್ತಿದ್ದಾರೆ. ಕಾನೂನುಬದ್ಧ ಸವಲತ್ತುಗಳನ್ನು ನಾಶ ಮಾಡಲು ಹೊರಟಿದ್ದಾರೆ. 2018ರಿಂದ 2024 ರವರೆಗೆ ಆರು ವರ್ಷಗಳ…

Read More

ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣನ ಕಾರ್ ತಡೆದಿದ್ದು ಯಾಕೆ …. ?

ಹಾಸನ:ಹಸನಾಂಬೆ ದೇವಿ ದರ್ಶನಕ್ಕೆ ನಾಲ್ಕನೇ ದಿನವಾದ ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ರಾಜಕೀಯ ನಾಯಕರು, ಅಧಿಕಾರಿಗಳು ಕೂಡ ಹಾಸನಾಂಬೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಕೂಡ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಕಾರಿನಲ್ಲಿ ಆಗಮಿಸಿದ ರೇವಣ್ಣ ಅವರನ್ನು ಕಂದಾಯ ಇಲಾಖೆ ಅಧಿಕಾರಿಗಳು ತಡೆದ ಘಟನೆ ನಡೆದಿದೆ. ಶಿಷ್ಠಾಚಾರ ಪಾಲನೆಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಶಾಸಕ ಹೆಚ್.ಡಿ.ರೇವಣ್ಣ ಹಾಸನಾಂಬೆ…

Read More

ಪ್ರಿಯಾಂಕ ಖರ್ಗೆಗೆ ತಾಕತ್ತು ಇದ್ದರೆ ಕರ್ನಾಟಕದಲ್ಲಿ ಎಸ್ ಡಿ ಪಿ ಐ ಯನ್ನು ಬ್ಯಾನ್ ಮಾಡಲಿ ; ಬಿಜೆಪಿ ರಾಜ್ಯ ನಾಯಕ ರವಿ ಕುಮಾರ್

ಮಂಗಳೂರು: ನಮ್ಮ ದೇಶದ , ಪ್ರಪಂಚದ ನಂಬರ್ ಒನ್ ಸಂಘಟನೆಯೆಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ದೇಶ ಸೇವೆಯಲ್ಲಿ ತೊಡಗಿರುವ ಸಂಘಟನೆಯನ್ನು ಕೇವಲವಾಗಿ ಮಾತನಾಡಿದ ಪ್ರಿಯಾಂಕ ಖರ್ಗೆ ಕೂಡಲೇ ರಾಜಿನಾಮೆ ನೀಡಬೇಕು , ಆರ್ ಎಸ್ ಎಸ್ ಬಗ್ಗೆ ಪುಂಕಾನು ಪುಂಕವಾಗಿ ತುಟಿ ಬಿಚ್ಚುವುದನ್ನು ಕೂಡಲೇ ನಿಲ್ಲಿಸಬೇಕು , ಕೂಡುವುದಾದರೆ ಎಸ್ ಡಿ ಪಿ ಐ ಸಂಘಟನೆಯನ್ನು ಇಲ್ಲಿ ಬ್ಯಾನ್ ಮಾಡಿ ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರು , ಬಿಜೆಪಿ…

Read More

ಯುವ ತೆಯ್ಯಂ ಕಲಾವಿದ ಪಿ ಕೆ ಅಶ್ವಂತ್ ಆತ್ಮಹತ್ಯೆಗೆ ಶರಣು …. !

ಕಣ್ಣೂರು: ಪ್ರಸಿದ್ಧ ಯುವ ತೆಯ್ಯಂ ಕಲಾವಿದನೊಬ್ಬ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಲ್ಲುರುತಿಯ ನಾನಿಸ್ಸೇರಿಯ ಪರಸ್ಸಿನಿಕಡವುವಿನ ಕುಡುಕ್ಕವಲಪ್ಪಿಲ್ ಮನೆಯಲ್ಲಿ ಸೂರಜ್ ಅವರ ಪುತ್ರ ಪಿ ಕೆ ಅಶ್ವಂತ್ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಣ್ಣೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಪೊಡಿಕುಂಡ್‌ ನಲ್ಲಿರುವ ಬಾಡಿಗೆ ಮನೆಯಲ್ಲಿ ಭಾನುವಾರ ರಾತ್ರಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆರು ತಿಂಗಳ ಹಿಂದೆ ಅಶ್ವಂತ್ ತನ್ನ ಸಹೋದರ ಅದೈತ್ ಜೊತೆ ಪೊಡಿಕುಂಡ್‌ನ ಬಾಡಿಗೆ ಮನೆಯಲ್ಲಿ ವಾಸಿಸಲು…

Read More

ಕೋಟೆ,ಧೂಮಾವತಿ “ದೀಪಾವಳಿ ನೇಮೋತ್ಸವ “ಕ್ಕೆ ವೀಳ್ಯ.

ಕಾಸರಗೋಡು ಕೋಟೆ -ಪಳ್ಳದ ಕೊಟ್ಯ ಶ್ರೀ ಧೂಮಾವತಿ “ದೀಪಾವಳಿ ನೇಮೋತ್ಸವ “ದಿನಾಂಕ 19ರ ಸಂಜೆ 6ಕ್ಕೆ ನೆಲ್ಲಿಕುಂಜೆ ಪಳ್ಳದ ಕೊಟ್ಯ ತರವಾಡು ದೈವಸ್ಥಾನ ದಿಂದ ಮೆರವಣಿಗೆ ಮೂಲಕ ಭಂಡಾರ ಕೋಟೆಬಾಗಿಲಿನಲ್ಲಿನ ಪಳ್ಳದಕೊಟ್ಯ ಚಾವಡಿಯಲ್ಲಿ, ಕೋಟೆ ನಾಯಕರ ಮನೆ ಯವರು ರಾಮಕ್ಷತ್ರಿಯ ಸಮಾಜ ಹಾಗೂ ಊರ, ಪರವೂರ ಭಕ್ತಾದಿಗಳ ಕೂಡುವಿಕೆಯಿಂದ ದಿನಾಂಕ 20. ದೀಪಾವಳಿ ದಿನದಂದು ನಡೆಯಲಿರುವ ದೈವ ಕೋಲದ “ವೀಳ್ಯ ಕೊಡುವಿಕೆ “ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ನಡೆಯಲ್ಲಿ ನಡೆಯಿತು. ಕೋಟೆ ಧೂಮಾವತಿ ಉತ್ಸವ ಸಮಿತಿ ನೇತೃತ್ವದಲ್ಲಿ ಧೂಮಾವತಿ…

Read More

ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳ ಉದ್ಘಾಟನಾ ಸಮಾರಂಭ.

ಅಕ್ಟೋಬರ್ 13 14 ರಂದು ನಡೆಯುವ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಮೇಳ ಉದ್ಘಾಟನಾ ಸಮಾರಂಭವು ಕೊಡ್ಲಮೊಗರಿನ ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.ಶ್ರೀ ವಾಣಿ ವಿಜಯ ಹೖಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಿಜಯಕುಮಾರ್ ಧ್ವಜಾರೋಹಣಗೈದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಯುತ ಜಾರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವೀಪ ಪ್ರಜ್ವಲಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು ಮಂಜೇಶ್ವರ ಶಾಸಕರಾದ ಶ್ರೀಯುತ ಎ ಕೆ ಎಂ ಅಶ್ರಫ್ ಕಾರ್ಯಕ್ರಮ…

Read More

ಅ.15ರಂದು ಮಂಜೇಶ್ವರದಲ್ಲಿ ‘ಪುವೆಂಪು ನೆನಪು’ ಪ್ರಶಸ್ತಿ ಪ್ರಧಾನ

ಮಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು – ಡಾ. ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಪ್ರತಿಷ್ಠಾನ, ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿ, ಮಂಜೇಶ್ವರ ಇವುಗಳ ಸಂಯುಕ್ತ ಆಶ್ರಯದಲ್ಲಿ “ಪುವೆಂಪು ನೆನಪು-2025” ಕಾರ್ಯಕ್ರಮವು ಅಕ್ಟೋಬರ್ . 15ರಂದು ಬೆಳಿಗ್ಗೆ 9 ರಿಂದ ದುರ್ಗಿಹಳ್ಳದ ಕೇರಳ ತುಳು ಅಕಾಡೆಮಿ ಸಭಾಂಗಣದಲ್ಲಿ ಜರುಗಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ತಿಳಿಸಿದರು. ಅವರು ಪತ್ರಿಕಾಭವನದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ…

Read More

ಶಾಫಿ ಪರಂಬಿಲ್ ಮೇಲೆ ಪೊಲೀಸರಿಂದ ಹಲ್ಲೆ – ಕಾಂಗ್ರೆಸ್ ಪ್ರತಿಭಟನೆ

ಕೆಪಿಸಿಸಿ ಕಾರ್ಯಾಧ್ಯಕ್ಷ, ಸಂಸದ ಶ್ರೀ ಶಾಫಿ ಪರಂಬಿಲ್ ಹಾಗೂ ಇನ್ನಿತರ ಯುಡಿಎಫ್ ನೇತಾರರ ವಿರುದ್ಧ ಪೇರಾಂಬ್ರದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಾಗೂ ಮಾರಕ ಹಲ್ಲೆ ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂದ್ಯೋಡುವಿನಲ್ಲಿ ಫ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶ್ರೀ ಬಾಬು ಬಂದ್ಯೋಡುರವರ ಅಧ್ಯಕ್ಷತೆಯಲ್ಹಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಫಾರೂಕ್ ಶಿರಿಯ ಉದ್ಘಾಟಿಸಿದರು. ಇರ್ಷಾದ್, ಅಶ್ರಫ್ ಮುಟ್ಟಂ, ಮೋಹನನ್ ಮೇಸ್ತ್ರಿ, ಇಬ್ರಾಹಿಂ, ಕುಂಞಾಲಿ ಇಚ್ಲಂಗೋಡು, ನಾಗೇಶ್, ರಾಜೇಶ್ ನಾಯ್ಕ್, ಬರ್ನಾರ್ಡ್ ಡಿ…

Read More

ಹೊಸಂಗಡಿ ಪೇಟೆಯಲ್ಲಿ ಅವ್ಯವಸ್ಥೆ ರೀತಿಯಲ್ಲಿ ವಾಹನಗಳ ಪಾರ್ಕಿಂಗ್

ಮಂಜೇಶ್ವರ: ಹೆಚ್ಚು ಸಂಖ್ಯೆಯಲ್ಲಿ ಜನ ಸಂದಣಿ ಇರುವ ಹೊಸಂಗಡಿ ಪೇಟೆಯಲ್ಲಿ ದಾರಿಮದ್ಯೆ ಅವ್ಯವಸ್ಥೆಯಾಗಿ ವಾಹನಗಳು ಪಾರ್ಕಿಂಗ್ ಮಾಡಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ಸಮೀಪದ ಮೇಘ ಟವರ್ ಲ್ಲಿ ಇರುವ ಅಂಗಡಿಗಳಿಗೆ ಜನಸಾಮಾನ್ಯರು ಹೋಗುವುದಕ್ಕೆ ಹರಸಾಹಸ ಪಡುವಂತಾಗಿದೆ. ಇದಕ್ಕೆ ಅಂಗಡಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಇನ್ನೊಂದೆಡೆ ಸರಿಯಾದ ಜಾಗಗಳಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದರೂ ಪೊಲೀಸರು ವಿನಾಕಾರಣ ಫೈನ್ ಹಾಕುತ್ತಿದ್ದಾರೆ ಎಂದು ವಾಹನ ಚಾಲಕರು ಆರೋಪಿಸಿದ್ದಾರೆ. ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕೈಗೊಂಡು…

Read More
error: Content is protected !!