ಕನ್ನಡಿಗರ ಮೇಲೆ ಮಲಯಾಳಂ ಕಡ್ಡಾಯ ಹೇರಿಕೆ ಸರಕಾರದ ಹಾಗೂ ಇಲ್ಲಿನ ಶಾಸಕರ ಕೊಡುಗೆ-ಆದರ್ಶ ಬಿ ಎಂ

ಕೇರಳ ಪಿನರಾಯಿ ಸರಕಾರ ರಾಜ್ಯ ದಲ್ಲಿ ಮಲಯಾಳಂ ಭಾಷಾ ಕಲಿಕೆಯನ್ನು ಕಡ್ಡಾಯ ಮಾಡಿದ್ದು, ಮಸೂದೆಯನ್ನು ಜಾರಿ ಮಾಡಿದೆ ಇದು ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ರ ಸಂವಿದಾನಿಕ ಹಕ್ಕಿನ ಮೇಲಿನ ದಬ್ಬಾಳಿಕೆ. ರಾಜ್ಯ ಸರಕಾರ ವಿಧಾನ ಸಭಾದಲ್ಲಿ ಮಸೂದೆ ಪಾಸ್ ಮಾಡುವಾಗ ಅದರ ವಿರುದ್ಧ ಹೊರಟ ನಡೆಸದ ಮಂಜೇಶ್ವರ ಹಾಗೂ ಕಾಸರಗೋಡು ಶಾಸಕರ ಮೌನ ಬೇಜವಾಬ್ದಾರತನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಶಾಸಕರ ಹಾಗೂ ಸರಕಾರದ ಕ್ರಮವನ್ನು ಖಂಡಿಸಿದರು. ಮಲಯಾಳಂ ಕಡ್ಡಾಯ…

Read More

ಸ್ವಯಂ ಸೇವಕ ಸಂಘದ ಶತಾಬ್ದಿ ಯನ್ನು ಸಾಯಿ ನಿಕೇತನ ಸೇವಾಶ್ರಮದಲ್ಲಿ ಆಚರಿಸಿದ ಅಯೋಧ್ಯಾ ಶಾಖೆಯ ಸ್ವಯಂ ಸೇವಕರು.

ಬೇಕೂರು:ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷಾಚರಣೆಯ ಪ್ರಯುಕ್ತ ಅಯೋಧ್ಯಶಾಖೆ ಬೇಕೂರಿನ ಸ್ವಯಂ ಸೇವಕರು ಭೇಟಿನೀಡಿ ಬೆಳಗ್ಗಿನ ಉಪಾಹಾರವನ್ನು ಆಶ್ರಿತರಿಗೆ ವಿತರಿಸಿದರು.ಭಾರತದ ಇತಿಹಾಸದಲ್ಲಿ 100ನೇ ವರ್ಷ ಆದ ಸಂಘದ ಧ್ಯೇಯದಂತೆ ಸೇವಾ ಮನೋಭಾವದ ಸದಾಶಯದ ಸುಂದರ ಕ್ಷಣವನ್ನು ಕಣ್ತುಂಬಿಸಿ ಕೊಳ್ಳುವ ಸಮಯ ನಮ್ಮಮುಂದಿನ ಪೀಳಿಗೆಗೆ ಮನದಟ್ಟು ಮಾಡುವ ಸಲುವಾಗಿ ಈ ಭೇಟಿ ನೀಡಲಾಯಿತು. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವ ಮಾತು ಕೇವಲ…

Read More

ಜ್ವರಭಾಧಿಸಿ ಸಮಾಜ ಸೇವಕನ ಯುವಕನ ದಾರುಣ ಅಂತ್ಯ

ಮಂಜೇಶ್ವರ : ನಾಡಿನ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಯುವಕನೊಬ್ಬ ಜ್ವರದ ಭಾಧೆಯಿಂದ ದುರ್ದೈವವಶಾತ್ ತನ್ನ ಅಮೂಲ್ಯ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಉದ್ಯಾವರ ನಿವಾಸಿ ಅಬ್ದುಲ್ ಜಬ್ಬಾರ್ (47) ಮೃತ ದುರ್ದೈವಿ.ವೃತ್ತಿಯಲ್ಲಿ ವಾಹನ ಚಾಲಕನಾಗಿದ್ದ ಅಬ್ದುಲ್ ಜಬ್ಬಾರ್ ಸಮಾಜ ಸೇವೆಗಾಗಿ ತನ್ನ ಜೀವನವನ್ನು ಅರ್ಪಿಸಿದ್ದ ಅನಾಥ ಮಕ್ಕಳಿಗೆ ಶಿಕ್ಷಣ, ಹಿಂದುಳಿದ ಕುಟುಂಬಗಳಿಗೆ ಆಹಾರ ವಿತರಣೆ ಹಾಗೂ ಪರಿಸರ ಸಂರಕ್ಷಣೆ ಎಂಬಂತಹ ಅನೇಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದನು. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಯುವಕ ಸ್ಥಳೀಯ ಆಸ್ಪತ್ರೆಯಿಂದ ಚಿಕಿತ್ಸೆ…

Read More

ದಕ್ಷಿಣ ಭಾರತದ ನಾಗರಾಧನೆಯ ಪುಣ್ಯ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹರಿದು ಬಂದ ಜನ ಸಾಗರ.

ದಕ್ಷಿಣ ಕನ್ನಡ ಜಿಲ್ಲೆಯ‌ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಸಾಲು ಸಾಲಾಗಿ ಕ್ಷೇತ್ರಕ್ಕೆ ಬರುವ ಭಕ್ತರ ದಂಡೆ ಕಂಡು ಬಂತು.ರಾಜ್ಯದಲ್ಲಿ ಜಾತಿ ಸಮೀಕ್ಷೆ ಈ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಮುಂದುವರಿದ ಕಾರಣ ಹಾಗೂ ಎರಡನೇ ಶನಿವಾರ ಆದ್ದರಿಂದ ನಿನ್ನೆ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ದೂರ ದೂರಗಳಿಂದ ಬಂದು ಈ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನದ ಭೋಜನಕ್ಕಾಗಿ ಆದಿ ಸುಬ್ರಹ್ಮಣ್ಯದಲ್ಲಿ ಕೂಡ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಕ್ತರ ವಾಹನಗಳನ್ನು ಪಾರ್ಕಿಂಗ್ ಸ್ಥಳಗಳಿಲ್ಲದೆ ಎಲ್ಲೆಡೆ ಜಾಗ…

Read More

ಅಮೃತಾನಂದಮಯಿ ಮಠದ ಸಮಾಜಮುಖಿ ಸೇವೆ ಅನುಕರಣೀಯ- ವೇದವ್ಯಾಸ ಕಾಮತ್

ಮಂಗಳೂರು: ಸೇವೆಯನ್ನೇ ಪರಮ ಗುರಿಯನ್ನಾಗಿಸಿಕೊಂಡಿರುವ ಮಂಗಳೂರಿನ ಮಾತಾ ಅಮೃತಾನಂದಮಯಿ ಮಠವು ತನ್ನ ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಅನೇಕ ಉಚಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು 400 ಕ್ಕೂ ಅಧಿಕ ಮಕ್ಕಳ ಹೃದಯ ತಪಾಸಣೆ ಮಾಡಿ ಅಗತ್ಯವುಳ್ಳವರಿಗೆ ಸಂಪೂರ್ಣ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಸೆ ಮಾಡುತ್ತಿರುವುದು ಹಾಗೂ ಇಲ್ಲಿ ವಿತರಣೆ ಮಾಡುತ್ತಿರುವವಸ್ತ್ರದಾನ ಮುಂತಾದವುಗಳು ಒಂದು ಮಾದರಿ ಉಪಕ್ರಮವಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಮಾತಾ ಅಮೃತಾನಂದಮಯಿ ದೇವಿಯವರ 72 ನೆಯಜನ್ಮದಿನಾಚರಣೆಯ ಪ್ರಯುಕ್ತ ಮಠದಲ್ಲಿ ಜರುಗಿದ…

Read More

“ಕಾಂತಾರ” ಸಿನಿಮಾದಿಂದ ದೈವಗಳಿಗೆ ಅಪಚಾರ ನಡೆದಿಲ್ಲ: ಐಕಳ ಹರೀಶ್ ಶೆಟ್ಟಿ

ಮಂಗಳೂರು: ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ತಯಾರಾದ ರಿಷಬ್ ಶೆಟ್ಟಿ ನಿರ್ದೇಶನದ “ಕಾಂತಾರ” ಸಿನಿಮಾದ ಬಗ್ಗೆ ಪರ ವಿರೋಧ ಚರ್ಚೆಯಾಗುತ್ತಿದ್ದು, ಸಿನಿಮಾದಲ್ಲಿ ಎಲ್ಲೂ ದೈವಗಳಿಗೆ ಅಪಚಾರ ಆಗಿಲ್ಲ. ಸಿನಿಮಾವನ್ನು ಸಿನಿಮಾದ ರೀತಿಯಲ್ಲೇ ನೋಡಿದರೆ ಚೆಂದ. ಸಿನಿಮಾದ ಉದ್ದಕ್ಕೂ ಎಲ್ಲೂ ದೈವಗಳ ನಿಂದನೆಯಾಗಿಲ್ಲ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ. ಕಾಂತಾರ ಸಿನಿಮಾ ಇಂದು ವಿಶ್ವದೆಲ್ಲೆಡೆ ಬಿಡುಗಡೆಯಾಗಿ ಸಂಚಲನವನ್ನೇ ಸೃಷ್ಟಿ ಮಾಡಿದೆ. ಇದರ ಬೆನ್ನಲ್ಲೇ ಸಿನಿಮಾದ ಕುರಿತು ಅಪಸ್ವರ ಎದ್ದಿದೆ, ಪರ ವಿರೋಧ…

Read More

ಯುವತಿ ಜತೆಗಿನ ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆ; ಗೆಳೆಯರ ಬ್ಲ್ಯಾಕ್ ಮೇಲ್ ಒತ್ತಡ ತಾಳಲಾರದೆ ಯುವಕ ಆತ್ಮಹತ್ಯೆ

ಉಡುಪಿ: ಗೆಳೆಯರ ಬ್ಲ್ಯಾಕ್ ಮೇಲ್ ಒತ್ತಡ ತಾಳಲಾರದೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ನ ಖಾಸಗಿ ಲಾಡ್ಜ್ ನಲ್ಲಿ ನಡೆದಿದೆ. ನಿಟ್ಟೆಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ (23) ಆತ್ಮಹತ್ಯೆಗೆ ಶರಣಾದ ಯುವಕ. ಪ್ರೇಯಸಿಯ ಜೊತೆಗಿರುವ ಖಾಸಗಿ ವಿಡಿಯೋವನ್ನು ವೈರಲ್ ಮಾಡುವುದಾಗಿ ಗೆಳೆಯರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.ಆತ ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಬ್ಲ್ಯಾಕ್ ಮೇಲ್ ಮಾಡಿರುವ ನಾಲ್ಕು ಮಂದಿಯ ಹೆಸರು…

Read More

ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲನ ಕೃತ್ಯ ಖಂಡಿಸಿ ಅಂಬೇಡ್ಕರ್ ಯುವಸೇನೆಯಿಂದ ಪ್ರತಿಭಟನೆ.

ಉಡುಪಿ: ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ಕೃತ್ಯ ಖಂಡಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆಯ ವತಿಯಿಂದ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಕೀಲ ರಾಕೇಶ್ ಕಿಶೋರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಗುರಿಯಾಗಿಸಿ ಶೂ ಎಸೆದ ಸನಾತನಿ ವಕೀಲ ರಾಕೇಶ್ ಕಿಶೋರ್‌ನನ್ನು ಭಾರತದಿಂದ ತಕ್ಷಣ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಭಾರತದ…

Read More

ಅರಣ್ಯ ಇಲಾಖೆಯ ಮಂಗಳೂರಿನ ಅರಣ್ಯಾಧಿಕಾರಿ ಜಿತೇಶ್ .ಪಿ ಅವರಿಗೆ ಮುಖ್ಯಮಂತ್ರಿ ಪದಕ..

ಬಂಟ್ವಾಳ : ಅರಣ್ಯ ಇಲಾಖೆಯ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಕರ್ನಾಟಕ ಸರಕಾರದಿಂದ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನೀಡುವ ಮುಖ್ಯಮಂತ್ರಿ ಪದಕವನ್ನು ಮಂಗಳೂರು ವಿಭಾಗದ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರು ಅಕ್ರಮ ಮರ ಕಡಿಯುವುದು ಮತ್ತು ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಅ.08ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕೆಟ್ ಹಾಲ್ ನಲ್ಲಿ ಸ್ವೀಕರಿಸಿದರು. ಬಂಟ್ವಾಳ ವಲಯದ…

Read More

ಕಾಂತಾರದಲ್ಲಿ ದೈವಾರಾಧನೆಯ ಅಣಕ; ವಿಷಯ ಪ್ರಸ್ತಾಪ ಮಾಡಿದ್ದಕ್ಕೆ ತೇಜೋವಧೆ- ಸಹನಾ ಕುಂದರ್

ಉಡುಪಿ: ಕಾಂತಾರ ಲೆಜೆಂಡ್ ಚಾಪ್ಟರ್ ನಲ್ಲಿ ಕರಾವಳಿಯ ದೈವಾರಾಧನೆ ನಂಬಿಕೆಯನ್ನು ಅಣಕ ಮಾಡಿ ವಾಣಿಜ್ಯೀಕರಣ ಮಾಡಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ತೇಜೋವಧೆ ಮಾಡುತ್ತಿದ್ದಾರೆ. ತುಳು ಮತ್ತು ಕುಂದಾಪುರ ಕನ್ನಡದ ಭಾಷೆಯ ವಿಚಾರವನ್ನು ಎಳೆದು ತಂದಿದ್ದಾರೆ ಎಂದು ವಾಗ್ಮೀ ವಕೀಲೆ ಸಹನಾ ಕುಂದರ್ ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಹನಾ ಕುಂದರ್ ದೂರು ನೀಡಿದ್ದಾರೆ. ನಾನು ಖಾಸಗಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭ ಕುಂದಾಪುರ ಕನ್ನಡಕ್ಕೆ ಧಕ್ಕೆ ಆಗುವಂತಹ ಯಾವುದೇ…

Read More
error: Content is protected !!