ಕುಂಬಳೆಯಲ್ಲಿ ರೈತ ದಿನಾಚರಣೆ: ಉತ್ತಮ ರೈತರಿಗೆ ಸನ್ಮಾನ

ಕುಂಬಳೆ ಗ್ರಾಮ ಪಂಚಾಯತ್ ಹಾಗೂ ಕುಂಬಳೆ ಕೃಷಿ ಭವನದ ಸಂಯುಕ್ತ ಆಶ್ರಯದಲ್ಲಿ ಈ ವರ್ಷದ ರೈತ ದಿನಾಚರಣೆ ಕುಂಬಳೆ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ನಾಣುಕುಟ್ಟನ್ ಸ್ವಾಗತಿಸಿದರು. ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಲ್ಕೀಸ್, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಅಜೀಸ್ ಕಲತ್ತೂರು, ಕಾಸರಗೋಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ಕಾರ್ಯ ಸ್ಥಾಯಿ…

Read More

ಕುಂಬಳೆ ಚಿರಂಜೀವಿ ಸಂಸ್ಥೆಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ: ಸಮಾಜಮುಖಿ ಕಾರ್ಯಗಳಿಗೆ ಚಾಲನೆ

ಚಿರಂಜೀವಿ (ರಿ ) ಕುಂಬಳೆ :- ಕುಂಬಳೆ ಚಿರಂಜೀವಿ ಸಂಸ್ಥೆಯಲ್ಲಿ ಆಗಸ್ಟ್ 15ರಂದು 80ನೇ ವರ್ಷದ ಸ್ವಾತಂತ್ರ್ಯದ ದಿನವನ್ನು ಬಹಳ ವೆಶೇಷ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ಎಲ್ಲಾ ಸದಸ್ಯರು ಮಹಿಳಾ ಪದಾಧಿಕಾರಿಗಳು ಸೇರಿ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಧ್ವಜಾರೋಹಣಗೊಳಿಸಿದರು. ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯರಾಗಿರುವ ಶ್ರೀ ಪೃಥ್ವಿರಾಜ್ ಜಗನಾಥ್ ಶೆಟ್ಟಿ, ಕುಂಬಳೆ ಪಂಚಾಯತ್ ಸದಸ್ಯರಾದ ಶ್ರೀ ರಮೇಶ್ ಭಟ್ಟ್, ಉದ್ಯಮಿ ಶ್ರೀಯುತ ನಾರಾಯಣ ಪ್ರಭು ಸತೀಶ್ ನಾಯ್ಕ್ ಸೆರ್ವೆವರ್ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ…

Read More

ಪ್ರೇರಣಾ ಗ್ರಂಥಾಲಯದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಗುವೇದಪಡ್ಪು : ದೇಶದ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗುವೇದಪಡ್ಪು ನಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ದ್ವಜಾರೋಹಣವನ್ನು ಚಿದಾನಂದ ಶೆಟ್ಟಿ ಗುವೇದಪಡ್ಪು ಇವರು ನೆರವೇರಿದರು. ಗ್ರಂಥಾಲಯದ ಅಧ್ಯಕ್ಷರಾದ ಜಯರಾಮ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಡ್ವಕೇಟ್ ಹಸನ್ ಕುಂಜಿ, ಉಮರ್, ವಿನ್ಸೆoಟ್ ಡಿಸೋಜ ಸಂಶುದ್ದಿನ್, ಅಂಕಿತ, ಮೋಕ್ಷಿತ್, ಅನುಷಾ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Read More

ಮುಳಿಗದ್ದೆ ಬಾಯರ್‌ನಲ್ಲಿ ಮಡಿವಾಳ ಸಮಾಜದ ಸಾಲಿಯನ್ ಕುಟುಂಬದ ನಾಗರ ಪಂಚಮಿ ಆಚರಣೆ

ಮುಳಿಗದ್ದೆ ಬಾಯರ್‌ನಲ್ಲಿ ಮಡಿವಾಳ ಸಮಾಜದ ಸಾಲಿಯನ್ ಕುಟುಂಬದ ವತಿಯಿಂದ ನಾಗರ ಪಂಚಮಿ ಆಚರಣೆಯನ್ನು ಭಕ್ತಿಶ್ರದ್ಧೆಯಿಂದ ನೆರವೇರಿಸಲಾಯಿತು. ನಾಗರ ಪಂಚಮಿ ಅಂಗವಾಗಿ ನಾಗದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕುಟುಂಬದ ಸದಸ್ಯರು ಹಾಗೂ ಬಂಧು-ಬಳಗದವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಗದೇವರಿಗೆ ಹಾಲು, ಸೀಯಾಳ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ನಾಗರ ಪಂಚಮಿ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಮಹತ್ವದ ಆಚರಣೆಯಾಗಿದ್ದು, ನಾಗದೇವರ ಆರಾಧನೆಯ ಮೂಲಕ ಕುಟುಂಬದ ಸುಖ, ಶಾಂತಿ, ಆರೋಗ್ಯ…

Read More

ಸಿರಿಬಾಗಿಲಿನಲ್ಲಿ 4ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಧೂರು ಗ್ರಾಮ ಪಂಚಾಯತ್‌ನ 24ನೇ ಸಿರಿಬಾಗಿಲು ವಾರ್ಡ್ ಹಾಗೂ ಪರಿಸರದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾಲ್ಕನೇ ವರ್ಷದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಸಿರಿಬಾಗಿಲು ಉಡುವ ಕಜೆ ಶ್ರೀ ಚೌಕಾರು ಗುಳಿಗ ಹಾಗೂ ಶ್ರೀ ಕೊರಗತನಿಯ ದಿವ್ಯಸನ್ನಿಧಿಯಲ್ಲಿ ವಿಜೃಂಭಣೆಯಿಂದ ನಡೆಯಿತು. 2025-26ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಹಾಗೂ ಉತ್ತಮ ಅಂಕಗಳನ್ನು ಗಳಿಸಿದ ಅರ್ಹ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಮಧೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾನುಪ್ರಕಾಶ್ ಕಾರ್ಯಕ್ರಮದ ಮುಖ್ಯ…

Read More

‘ಆಪರೇಷನ್ ತೂಫಾನ್’ ಅಭಿಯಾನಕ್ಕೆ ಮಂಗಲ್ಪಾಡಿಯಲ್ಲಿ ಭರ್ಜರಿ ಬೆಂಬಲ

ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕೇರಳ ಯು.ಡಿ.ಎಫ್ ಸರ್ಕಾರದ ಗೃಹ ಸಚಿವರಾದ ಶ್ರೀ ರಮೇಶ್ ಚೆನ್ನಿತಲ ಅವರ ನೇತೃತ್ವದಲ್ಲಿ ಜಾರಿಗೆ ತರಲಾದ ‘ಆಪರೇಷನ್ ತೂಫಾನ್'(The Narco Hunt )ಮಾದಕವಸ್ತು ವಿರೋಧಿ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತಾ, ಬಂದಿಯೋಡ್ ಎಲೈಟ್ ಕಾಂಪ್ಲೆಕ್ಸ್‌ನಲ್ಲಿ ಮಾದಕವಸ್ತು ವಿರೋಧಿ ಸಂಗಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಿ.ಸಿ.ಸಿ ಅಧ್ಯಕ್ಷ ಪಿ.ಕೆ. ಫೈಸಲ್ ರವರು ಮಾತನಾಡಿ ಮಾದಕ ಲಹರಿಯನ್ನು ಬೇರು ಸಮೇತ ಕಿತ್ತು ಹಾಕುವ ಆಪರೇಷನ್ ತೂಫಾನ್ ಎಂಬ ದೊಡ್ಡ ಹೋರಾಟಕ್ಕೆ ಗೃಹ ಸಚಿವರಾದ ಶ್ರೀ…

Read More

ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ(ರಿ)ಕಾಸರಗೋಡು ವತಿಯಿಂದ ಸಾರ್ವಜನಿಕ ಗ್ರಂಥಾಲಯ ಪ್ರಾರಂಭ

ಕಾಸರಗೋಡು:- ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು, ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ವ್ಯವಸ್ಥಿತ ಗ್ರಂಥಾಲಯ “ಶಿವದುರ್ಗಾ”ವನ್ನು ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಶ್ರೀ ಗಿರಿ ಸದನ ಚೂರಿಪ್ಪಳ್ಳ ನೆಲ್ಲಿಕಟ್ಟೆಯಲ್ಲಿ ಇಂದು ಶ್ರೀ ದಾಮೋದರ ಇವರು ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ಒಂದು ಸುಸಜ್ಜಿತ ಗ್ರಂಥಾಲಯವಾಗಿ ಪರಿವರ್ತಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಡಾ ವಾಣಿಶ್ರೀ ಕಾಸರಗೋಡು ಇವರು ಗ್ರಂಥಾಲಯವು ಕನ್ನಡ, ಮಲಯಾಳಂ, ತುಳು, ಇಂಗ್ಲಿಷ್, ಹಿಂದಿ ಹೀಗೆ ವಿವಿಧ ಭಾಷೆಗಳ ಪುಸ್ತಕಗಳನ್ನು…

Read More

ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ಅಗೋಸ್ತು 23ರಂದು ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ, ಮಕ್ಕಳ ಕವಿಗೋಷ್ಠಿಗೆ ಆಹ್ವಾನ

ಕಾಸರಗೋಡು: ಮಕ್ಕಳ ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಮಕ್ಕಳ ಸಾಹಿತಿಗಳು,ಕವಿ, ಕವಯತ್ರಿಯರು, ಬರಹಗಾರರು, ಸಾಹಿತಿಗಳಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಇದರ ಕೇರಳ ರಾಜ್ಯ ಘಟಕವಾಗಿ 2019 ರಲ್ಲಿ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕವು ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯೋತ್ಸವ, ಮಕ್ಕಳ ಕವಿಗೋಷ್ಠಿ ಮತ್ತು ಕನ್ನಡಪರ ಚಟುವಟಿಕೆಗಳನ್ನು…

Read More

ಕಡಂಬು ಸರ್ಕಾರಿ ಶಾಲಾ ಮಕ್ಕಳಿಗೆ ಲಯನ್ಸ್ ಕ್ಲಬ್‌ನಿಂದ ಸ್ಕ್ವಾಡ್ ಡ್ರೆಸ್ ವಿತರಣೆ

ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕಡಂಬು ಇಲ್ಲಿ ಗ್ರಾಮೀಣ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹಾದಾನಿಗಳಾದ ಉದ್ಯಮಿ ಶ್ರೀ ಕಿಶೋರ್ ಕುಮಾರ್ ಕೊಡ್ಲಮೊಗರು ಇವರ ಸಹಕಾರದಿಂದ ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ಶಾಲಾ ಮಕ್ಕಳಿಗೆ ಸ್ಕ್ವಾಡ್ ಡ್ರೆಸ್ ಅನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ನಿಕಟಪೂರ್ವ ಜಿಲ್ಲಾ ಸಂಪರ್ಕ ಅಧಿಕಾರಿ ಶ್ರೀ ಸುದರ್ಶನ್ ಪಡಿಯಾರ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ರವಿಕುಮಾರ್, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಉಪಾಧ್ಯಕ್ಷರಾದ ಎಚ್ಚರಾದ ಶ್ರೀ…

Read More

ಕಾಸರಗೋಡಿನಲ್ಲಿ ತಿಂಗಳ ಕಾಲ ಧರ್ಮ ಜಾಗೃತಿ ಭಜನಾ ಯಾತ್ರೆ: ಇಂದು ಸಮಾರೋಪ

ಕಾಸರಗೋಡು ನಗರದಲ್ಲಿ ರಾಮಾಯಣ ಮಾಸಾಚರಣೆಯ ಅಂಗವಾಗಿ ಒಂದು ತಿಂಗಳ ಕಾಲ ನಡೆದ ಧರ್ಮ ಜಾಗೃತಿ ಭಜನಾ ಯಾತ್ರೆಗೆ ಇಂದು ಸಮಾರೋಪ ನಡೆಯಲಿದೆ. ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡದ ವತಿಯಿಂದ ಜುಲೈ 17ರಿಂದ ಆರಂಭಗೊಂಡಿದ್ದ ಈ ಭಜನಾ ಯಾತ್ರೆಯಲ್ಲಿ ನಗರದ ವಿವಿಧ ಮನೆಗಳಿಗೆ ತೆರಳಿ ಶ್ರೀರಾಮನ ಸ್ಮರಣೆಯೊಂದಿಗೆ ಭಜನೆ ಹಾಗೂ ಸಂಕೀರ್ತನೆ ನಡೆಸಲಾಗಿದೆ. ಮನೆ ಮನೆಗೆ ಭಜನೆಯ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವುದು ಮತ್ತು ಪ್ರತಿಯೊಂದು ಮನೆಯಲ್ಲೂ ಪ್ರತಿದಿನ ಭಜನೆ ನಡೆಯುವಂತಾಗಬೇಕು ಎಂಬ ಸಂದೇಶವನ್ನು ಯಾತ್ರೆಯ ಮೂಲಕ…

Read More
error: Content is protected !!