ಕುಂಜತ್ತಬೈಲ್‌ನಲ್ಲಿ ಸಾಮ್ರಾಟ್ ಕ್ರಿಕೆಟರ್ಸ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸಾಮ್ರಾಟ್ ಕ್ರಿಕೆಟರ್ಸ್ (ರಿ.)ಕುಂಜತ್ತ್ ಬೈಲ್, ಮಂಗಳೂರು ಇದರ ವತಿಯಿಂದ 80 ನೇ ಸ್ವಾತಂತ್ರೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮವು ಕುಂಜತ್ತಬೈಲ್ ಜಂಕ್ಷನ್ ನಲ್ಲಿ ಜರುಗಿತು‌‌‌‌‌.ಮ.ನ.ಪಾ ನಿಕಟ ಪೂರ್ವ ಸದಸ್ಯರಾದ ಶರತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿ ಗಳಾಗಿ ಸಿದ್ದೀಖ್ ಜುಮಾ ಮಸ್ಜಿದ್ ಮರಕಡ ಇದರ ಅಧ್ಯಕ್ಷರಾದ ಮೈಯದ್ದಿ ಬ್ಯಾರಿ,ಕೂಳೂರು ಕಾವೂರು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹುಸೈನ್ ರಿಯಾಝ್,ಕಾವೂರು ಪೋಲಿಸ್ ಠಾಣೆಯ ಸಹಾಯಕ ನಿರೀಕ್ಷಕರಾದ ರಾಮಣ್ಣ ಶೆಟ್ಟಿ, ಸಾಮ್ರಾಟ್ ತಂಡದ ಅಧ್ಯಕ್ಷ ನಾಸೀರ್ ಕುಂಜತ್ತಬೈಲ್, ಖವ್ವತುಲ್ ಇಸ್ಲಾಂ ಮದರಸ…

Read More

ಲಯನ್ಸ್ ಕ್ಲಬ್ ಕುದ್ರೆಮುಖದ ಪದಗ್ರಹಣ

ಲಯನ್ಸ ಕ್ಲಬ್ ಕುದ್ರೆಮುಖದ 2026-27ನೇ ಸಾಲಿನ ಲಯನ್ಸ್ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಗಳೂರಿನ ಲಾಲ್ ಬಾಗ್ ನ ಬಳಿ ಇರುವ ಹೋಟೆಲ್ ಫುಡ್ ಲ್ಯಾಂಡ್ ನಲ್ಲಿ ಜರಗಿತು. ಕ್ಲಬ್ಬಿನ ನಿರ್ಗಮಿತ ಅಧ್ಯಕ್ಷ ಲ. ಸುಭಾಷ್ ರಾಥೋಡ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಸಿಕ್ಯುಐನ ಮುಖ್ಯ ಸಂಯೋಜಕರಾದ ಶ್ರೀಮತಿ ಲ. ಉಮಾ ಬಿ ಹೆಗ್ಡೆಯವರು ಪದಗ್ರಹಣ ಅಧಿಕಾರಿಯಾಗಿ ಪ್ರಮಾಣವಚನ ಬೋಧಿಸಿ ನೂತನ ಪದಾದಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಪತಿ ಲ. ಬಾಲಕೃಷ್ಣ ಹೆಗಡೆಯವರು ಉಪಸ್ಥಿತರಿದ್ದರು. ಲ.ಡಾಕ್ಟರ್ ಯೋಗೀಶ್ ರವರು…

Read More

ಸುವರ್ಣ ಲೇನ್ ರಸ್ತೆ ಕಾಮಗಾರಿ ವಿಳಂಬ: ಸಾರ್ವಜನಿಕರ ದೂರಿನ ಮೇರೆಗೆ ಐವನ್ ಡಿ’ಸೋಜಾ ಸ್ಥಳ ಪರಿಶೀಲನೆ

ಮಂಗಳೂರು: ಮಂಗಳೂರಿನ ಕಂಕನಾಡಿ–ವಲೆನ್ಸಿಯಾ ವಾರ್ಡ್ ನಂ. 48ರ ಸುವರ್ಣ ಲೇನ್‌ನಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ನಡೆಯುತ್ತಿರುವ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಕುರಿತು ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಐವನ್ ಡಿ’ಸೋಜಾ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ರಸ್ತೆ ಕಾಮಗಾರಿ ಆರಂಭಗೊಂಡಿದ್ದರೂ ನಿರೀಕ್ಷಿತ ವೇಗದಲ್ಲಿ ನಡೆಯದೆ, ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ತೊಂದರೆಗಳನ್ನು…

Read More

ಮಂಗಳೂರಲ್ಲಿ ಸಂಡೇ ಬಜಾರ್ ತೆರವು: ಪಾಲಿಕೆ ವಿರುದ್ಧ ಬೀದಿಬದಿ ವ್ಯಾಪಾರಿಗಳ ಆಕ್ರೋಶ

ಮಂಗಳೂರಲ್ಲಿ ಸಂಡೇ ಬಜಾರ್ ವಿರುದ್ಧ ಇಂದು ಕೂಡಾ ಕಾರ್ಯಾಚರಣೆ ನಡೀತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಮಂಗಳೂರು ನಗರ ಪಾಲಿಕೆ ಆಯುಕ್ತರ ಮೌಖಿಕ ಆದೇಶದಂತೆ ಇಂದು ಪುರಭವನದ ಬಳಿ ಸಂಡೆ ಬಜಾರ್ ವ್ಯಾಪಾರಿಗಳು ಬೆಳಿಗ್ಗೆಯಿಂದಲೇ ವ್ಯಾಪಾರ ಆರಂಭಿಸಿದ್ದರು. ಆದ್ರೆ ಸಂಜೆ 4ರ ವೇಳೆಗೆ ಪಾಲಿಕೆಯ ವಲಯ ಆಯುಕ್ತೆಯ ನೇತೃತ್ವದಲ್ಲಿ ಪಾಲಿಕೆ ತೆರವು ಕಾರ್ಯಾಚಾರಣೆ ನಡೆಸಿರುವುದು ಅತ್ಯಂತ ಅಮಾನವೀಯ ಕ್ರಮವಾಗಿದೆ ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ (ಸಿಐಟಿಯು) ಗೌರವಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಖಂಡಿಸಿದ್ದಾರೆ. ಕಳೆದ ಎರಡು…

Read More

ದಕ್ಷಿಣ ಕನ್ನಡದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹1.05 ಕೋಟಿ ಮೌಲ್ಯದ MDMA, ಕೊಕೇನ್ ವಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕವಸ್ತು ಸಾಗಾಟ ಜಾಲ ಪತ್ತೆಯಾಗಿದೆ. ಓರ್ವ ಆರೋಪಿ ಹಾಗೂ ಒಟ್ಟು ರೂ 1,05,59,450/- ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ನಿನ್ನೆ ರಾತ್ರಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯವರಿಗೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕಾರೊಂದನ್ನು ತಡೆದು ವಾಹನ ಚಾಲಕನಾಗಿದ್ದ ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ ಎಂಬಾತನನ್ನು ವಿಚಾರಣೆ ನಡೆಸಿದಾಗ ಆತನು ಕಾರಲ್ಲಿ ಮಾದಕವಸ್ತು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಾರನ್ನು ತಪಾಸಣೆ ನಡೆಸಿದಾಗ…

Read More

‘ಚಿಗುರಿದ ಕನಸು’ ಕವನ ಸಂಕಲನ ಬಿಡುಗಡೆ

ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು ಇದರ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಅಗೋಸ್ತು 23 ಆದಿತ್ಯವಾರದಂದು ಅಪರಾಹ್ನ ಗಂಟೆ 3.30 ಕ್ಕೆ ಕುಮಾರಿ ಸಮೃದ್ಧಿ ಆಳ್ವ ಅವರ ಚೊಚ್ಚಲ ಕವನ ಸಂಕಲನ ‘ಚಿಗುರಿದ ಕನಸು’ ಬಿಡುಗಡೆ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚುಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ವಹಿಸಲಿದ್ದಾರೆ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ…

Read More

ಬ್ರಹ್ಮಕೊಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನಡೆಯುವ ಹೋರಾಟಕ್ಕೆ SDTU ದಕ್ಷಿನ ಕನ್ನಡ ಜಿಲ್ಲಾ ಸಮಿತಿ ಬೆಂಬಲ : ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್

ಮಂಗಳೂರು: ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲಾ ಸಮಿತಿ ವತಿಯಿಂದ ಅವಧಿ ಹಾಗೂ ನಿಯಮ ಮೀರಿ ಕಾರ್ಯಾಚರಿಸುತ್ತಿರುವ ಬ್ರಹ್ಮಕೊಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಆಗಸ್ಟ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಡಿಸಿ ಕಚೇರಿ ಚಲೋ ಹಾಗೂ ಬೃಹತ್ ಪಾದಯಾತ್ರೆಗೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ದ.ಕನ್ನಡ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಟೋಲ್ ಗೇಟ್‌ನಿಂದ ಸಾರ್ವಜನಿಕರು, ವಾಹನ ಚಾಲಕರು ಹಾಗೂ ಕಾರ್ಮಿಕರು ಎದುರಿಸುತ್ತಿರುವ…

Read More

ಸಾಧಕಶ್ರೇಷ್ಠ ಪ್ರಶಸ್ತಿ ವಿಜೇತ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್‌ಗೆ ಕಾಸರಗೋಡು ಪತ್ರಕರ್ತರ ಸಂಘದ ಗೌರವ……!

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.) ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ‘ಸ್ನೇಹ ತರಂಗ’ ಪತ್ರಕರ್ತರ ಕುಟುಂಬ ಮಿಲನ ಕಾರ್ಯಕ್ರಮವು ಕಾಸರಗೋಡಿನ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗೌರವ ಪುರಸ್ಕಾರಕ್ಕೆ ಸಾಧಕಶ್ರೇಷ್ಠ ಪ್ರಶಸ್ತಿ ವಿಜೇತ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಾಗೂ ಕನ್ನಡಪರ ಹೋರಾಟಗಾರ ಅಶೋಕ ಯಂಕಪ್ಪ ಚಂದರಗಿ,…

Read More

ಇಮಾಮ್ ರಝಾ ಮಸೀದಿ ಉದ್ಘಾಟನೆ ಹಾಗೂ ಸ್ವಾತಂತ್ರ್ಯೋತ್ಸವ ಆಚರಣೆ ಯಶಸ್ವಿ

ಹಾವೇರಿ: ತಿಮ್ಮಾಪುರ ಗ್ರಾಮದಲ್ಲಿ ದಾರುಲ್ ಫೌಝ್ ರಿಫಾರ್ಮ್ ಟ್ರಸ್ಟ್‌ನ ‘ಕನಸಿನ ಸೂರು’ ಯೋಜನೆಯಡಿ ನೂತನವಾಗಿ ನಿರ್ಮಿಸಲಾದ ಇಮಾಮ್ ರಝಾ ಮಸೀದಿಯ ಉದ್ಘಾಟನಾ ಸಮಾರಂಭವು ಅತ್ಯಂತ ಸಂಭ್ರಮ ಹಾಗೂ ಯಶಸ್ವಿಯಾಗಿ ನೆರವೇರಿತು. ಹಾವೇರಿ ತಾಲೂಕು ತಿಮ್ಮಾಪುರ ಗ್ರಾಮದಲ್ಲಿ ದಾರುಲ್ ಫೌಝ್ ರಿಫಾರ್ಮ್ ಟ್ರಸ್ಟ್ (ರಿ.) ವತಿಯಿಂದ ‘ಕನಸಿನ ಸೂರು’ ಯೋಜನೆಯಡಿ ನಿರ್ಮಿಸಲಾದ ಇಮಾಮ್ ರಝಾ ಮಸೀದಿಯ ಉದ್ಘಾಟನಾ ಸಮಾರಂಭವು ಧಾರ್ಮಿಕ ಹಾಗೂ ಸಾಮಾಜಿಕ ಸೌಹಾರ್ದತೆಯ ಸಂದೇಶದೊಂದಿಗೆ ನಡೆಯಿತು. ಮಸೀದಿಯ ಖತೀಬರು ಕಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು….

Read More

ಶಿವಗಿರಿ ನಗರದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ : ಶಿವಗಿರಿ ಫ್ರೆಂಡ್ಸ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್, ಶಿವಗಿರಿ ನಗರ, ನಾರಂಪಾಡಿ ವತಿಯಿಂದ ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಬಾಲಕೃಷ್ಣ ಮಾಸ್ಟರ್, ಅಧ್ಯಕ್ಷರು, ಶ್ರೀ ಉಮಾಮಹೇಶ್ವರ ಕ್ಷೇತ್ರ, ನಾರಂಪಾಡಿ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ದೇಶಭಕ್ತಿಯೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮವು ಸಡಗರ ಹಾಗೂ ಗೌರವಪೂರ್ಣ ವಾತಾವರಣದಲ್ಲಿ ನಡೆಯಿತು.

Read More
error: Content is protected !!