ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ – 2026 ಮತ್ತು ಕೇರಳ- ಕರ್ನಾಟಕ ಉತ್ಸವ,ಕೇರಳ- ಕರ್ನಾಟಕ ಭವನ ಶಿಲಾನ್ಯಾಸಕ್ಕೆ ಗಣ್ಯರು ಸಾಂಸ್ಕೃತಿಕ ರಾಯಭಾರಿಗಳು ಸ್ವಾಮೀಜಿಗಳಿಗೆ ಅಹ್ವಾನ
ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕಳೆದ 36 ವರ್ಷಗಳಿಂದ ಕೇರಳ ರಾಜ್ಯದ ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿ,ಇತಿಹಾಸ ಪರಂಪರೆಯನ್ನು ಅಂತರ ರಾಜ್ಯದ್ಯಂತ ಕನ್ನಡ ಜನತೆಗೆ ತಲುಪಿಸುವ ಉದ್ದೇಶದಿಂದ ಕೇರಳ,ಕರ್ನಾಟಕ ಹಾಗೂ ಅಖಿಲ ಭಾರತ ಮತ್ತು ಆನಿವಾಸಿ ಭಾರತೀಯ ಕನ್ನಡಿಗರು,ಕಲಾವಿದರು, ಸಾಹಿತಿಗಳನ್ನು ಆಮಂತ್ರಿಸಿ ರಾಜ್ಯ,ರಾಷ್ಟ್ರೀಯ,ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಾಂಸ್ಕೃತಿಕ ವಿನಿಮಯಕ್ಕಾಗಿ ಕಾಸರಗೋಡಿನ ಮೀಪುಗುರಿ- ಪಾರೆಕಟ್ಟೆಯ…
