ತಾನೂರು ಕಸ್ಟಡಿ ಸಾವು ಪ್ರಕರಣ: ತಾಮಿರ್ ಜಿಫ್ರಿಯನ್ನು ಜೀಪ್‌ಗೆ ಕರೆದೊಯ್ಯುವ ಸಿಸಿಟಿವಿ ದೃಶ್ಯ ಬಹಿರಂಗ
ಮಲಪ್ಪುರಂ : ಮಲಪ್ಪುರಂ ತಾನೂರಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಮಾದಕವಸ್ತು ಪ್ರಕರಣದ ಆರೋಪಿ ತಾಮಿರ್ ಜಿಫ್ರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಿಸಿಟಿವಿ ದೃಶ್ಯಗಳು ಇದೀಗ ಬಹಿರಂಗವಾಗಿವೆ. ತಾಮಿರ್ ಜಿಫ್ರಿ ಮೃತಪಟ್ಟ ರಾತ್ರಿ ತಾನೂರು ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಗಳು ಹೊರಬಂದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಪೊಲೀಸರು ಹೊತ್ತುಕೊಂಡು ಹೋಗಿ ಪೊಲೀಸ್ ಜೀಪ್‌ಗೆ ಹತ್ತಿಸುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಜೀಪ್‌ಗೆ ಹತ್ತಿಸಿದ ಬಳಿಕವೂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗಿರುವುದು ದೃಶ್ಯಗಳಿಂದ ಸ್ಪಷ್ಟವಾಗಿದೆ. ಬೆಳಗಿನ 4.18ಕ್ಕೆ ತಾಮಿರ್ ಜಿಫ್ರಿಯನ್ನು ಜೀಪ್‌ಗೆ…
