ಜಿ7 ಶೃಂಗಸಭೆಯಲ್ಲಿ ಮೋದಿ ಕಳವಳ: ಒಮಾನ್ ಕೊಲ್ಲಿಯ ದಾಳಿಯಲ್ಲಿ ಮೃತಪಟ್ಟ ಭಾರತೀಯ ನಾವಿಕರಿಗೆ ಸಂತಾಪ

ಫ್ರಾನ್ಸ್: ಒಮಾನ್ ಕೊಲ್ಲಿಯಲ್ಲಿ ನಡೆದ ಅಮೆರಿಕದ ವೈಮಾನಿಕ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಯ ಬಗ್ಗೆ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದರು.

Forging New Partnerships and Rebuilding International Solidarity’ ಅಧಿವೇಶನದಲ್ಲಿ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಮಾನವ ಜೀವ, ಆರ್ಥಿಕತೆ ಹಾಗೂ ಜಾಗತಿಕ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಸ್ಥಿತಿಯಲ್ಲೇ ಸಮುದ್ರ ಮಾರ್ಗಗಳ ಸುರಕ್ಷತೆ ಮತ್ತು ನಾಗರಿಕ ನಾವಿಕರ ರಕ್ಷಣೆಯ ಮಹತ್ವವನ್ನು ಮೋದಿ ಒತ್ತಿಹೇಳಿದರು. ಹಾರ್ಮುಜ್ ಜಲಸಂಧಿಯಲ್ಲಿನ ಅಶಾಂತಿಯಿಂದ ತೈಲ ಮತ್ತು ಸರಕು ಸಾಗಣೆಗೆ ತೊಂದರೆಯಾಗಿದ್ದು, ಜಾಗತಿಕ ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಉಂಟಾಗಿದೆ ಎಂದರು.

“ನಾವಿಕರು ಯಾವುದೇ ಭಯವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸುವಂತಹ ಸುರಕ್ಷಿತ ವಾತಾವರಣ ನಿರ್ಮಾಣವಾಗಬೇಕು” ಎಂದು ಅವರು ಆಗ್ರಹಿಸಿದರು.

ಇದೇ ವೇಳೆ, ದೇಶಗಳ ನಡುವಿನ ಪರಸ್ಪರ ವಿಶ್ವಾಸವೇ ಇಂದಿನ ಜಗತ್ತಿನ ಅತ್ಯಂತ ಅಮೂಲ್ಯ ಸಂಪತ್ತು ಎಂದು ಹೇಳಿದ ಮೋದಿ, ತಂತ್ರಜ್ಞಾನ ಹಾಗೂ ಸರಬರಾಜು ಸರಪಳಿಗಳನ್ನು ಜಾಗತಿಕ ಹಿತಕ್ಕಾಗಿ ಬಳಸಬೇಕೇ ಹೊರತು ಅವುಗಳನ್ನು ಆಯುಧಗಳಾಗಿ ಪರಿವರ್ತಿಸಬಾರದು ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿಶೀಲ ರಾಷ್ಟ್ರಗಳು ಕೇವಲ ನೆರವಿನ ಫಲಾನುಭವಿಗಳಲ್ಲ; ಜಾಗತಿಕ ಅಭಿವೃದ್ಧಿಯ ಸಮಾನ ಪಾಲುದಾರರಾಗಲು ಬಯಸುತ್ತಿವೆ ಎಂದು ‘ಗ್ಲೋಬಲ್ ಸೌತ್’ ರಾಷ್ಟ್ರಗಳ ಆಶಯಗಳನ್ನು ಅವರು ಪ್ರತಿಪಾದಿಸಿದರು.

ಭಾರತ ಅತಿಥಿ ರಾಷ್ಟ್ರವಾಗಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದು, ಮೋದಿ-ಟ್ರಂಪ್ ಸೇರಿದಂತೆ ವಿಶ್ವ ನಾಯಕರ ಮಾತುಕತೆಗಳತ್ತ ಜಾಗತಿಕ ಗಮನ ಕೇಂದ್ರೀಕೃತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!