ಅಧ್ಯಕ್ಷೀಯ ಅಧಿಕಾರ ವಿಸ್ತರಣೆ: ಟ್ರಂಪ್‌ಗೆ ಅಮೆರಿಕ ಸುಪ್ರೀಂ ಕೋರ್ಟ್ ಬೆಂಬಲ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ವತಂತ್ರ ಫೆಡರಲ್ ಸಂಸ್ಥೆಗಳ ಮುಖ್ಯಸ್ಥರನ್ನು ವಜಾಗೊಳಿಸುವ ಅಧಿಕಾರವನ್ನು ಮಾನ್ಯಗೊಳಿಸಿದೆ. ಆದರೆ, ಅಮೆರಿಕದ ಕೇಂದ್ರ ಬ್ಯಾಂಕ್‌ಗೆ ಸಂಬಂಧಿಸಿದ ವಿಷಯದಲ್ಲಿ ಮಾತ್ರ ವಿನಾಯಿತಿ ನೀಡಿದೆ.

ನ್ಯಾಯಾಲಯವು ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯೆ ಲಿಸಾ ಕುಕ್ ಅವರನ್ನು ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿದೆ. ಇದೇ ವೇಳೆ, ಅಧ್ಯಕ್ಷರು ತಮ್ಮ ಇಚ್ಛೆಯಂತೆ ಹಲವು ಸ್ವತಂತ್ರ ಸಂಸ್ಥೆಗಳ ಮುಖ್ಯಸ್ಥರನ್ನು ವಜಾಗೊಳಿಸಬಹುದೆಂದು ಬಹುಮತದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಈ ತೀರ್ಪಿನ ಪರಿಣಾಮವಾಗಿ ಫೆಡರಲ್ ವ್ಯಾಪಾರ ಆಯೋಗ, ರಾಷ್ಟ್ರೀಯ ಕಾರ್ಮಿಕ ಸಂಬಂಧ ಮಂಡಳಿ, ಮೆರಿಟ್ ವ್ಯವಸ್ಥೆ ಸಂರಕ್ಷಣಾ ಮಂಡಳಿ ಹಾಗೂ ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗ ಸೇರಿದಂತೆ ಹಲವು ಸ್ವತಂತ್ರ ಸಂಸ್ಥೆಗಳ ಮೇಲಿನ ಅಧ್ಯಕ್ಷೀಯ ಅಧಿಕಾರ ಮತ್ತಷ್ಟು ಬಲಗೊಂಡಿದೆ.

ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ ಟ್ರಂಪ್, “ಅಧ್ಯಕ್ಷೀಯ ಅಧಿಕಾರಗಳಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ತೀರ್ಪು ಇದಾಗಿದೆ. ಈ ಐತಿಹಾಸಿಕ ಪ್ರಕರಣದಲ್ಲಿ ಜಯ ಸಾಧಿಸಿರುವುದು ನನಗೆ ಹೆಮ್ಮೆಯ ಸಂಗತಿ” ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!