ದುಬೈಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಯುಎಇ ಬಂಟ್ಸ್‌ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನ

ದುಬೈ : ಅರಬ್ ಸಂಯುಕ್ತ ಸಂಸ್ಥಾನದ ಜಾತಿ ಸಂಘಟನೆಗಳಲ್ಲಿ ಹಿರಿಯ ಸಂಘಟನೆಯಾದ ಯುಎಇ ಬಂಟ್ಸ್ ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆಯು ಅಕ್ಟೋಬರ್ ಇಪ್ಪತೈದರಂದು ನಗರದ ಜೆ.ಎಸ್.ಎಸ್.ಇಂಟರ್ನ್ಯಾಷನಲ್ ಪ್ರೈವೇಟ್ ಶಾಲೆಯ ಸಭಾಂಗಣದಲ್ಲಿ ನಡೆಯಿತು.


ಯುಎಇ ಏಳು ಎಮಿರೇಟ್ಸ್ ಗಳ ಬಂಟ ಬಾಂಧವರು ಮತ್ತು ಯುಎಇಯ ವಿವಿಧ ತುಳು ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಹಸ್ರಾರು ಅಪಾರ ಸಂಖ್ಯೆಯಲ್ಲಿ ಭಕ್ತ ಜನಸಾಗರದೊಂದಿಗೆ ಯಶಸ್ವಿಯಾಗಿ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನಗೊಂಡಿತು.


ಶ್ರೀ ರಘು ಭಟ್ ಮತ್ತು ಶ್ರೀ ಸಂತೋಷ್ ಭಟ್ ರವರ ಪೌರೋಹಿತ್ಯದಲ್ಲಿ ನಡೆದ ಪೂಜಾ ವಿಧಿ ವಿಧಾನಗಳನ್ನು ಯುಎಇ ಬಂಟ್ಸ್ ನ ಸುಮಂಗಲೆಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಸಾವಿರಾರು ಸೇರಿದ ಭಕ್ತರ ಪೂಜೆಯ ಪ್ರತಿನಿಧಿಯಾಗಿ ದಿನೇಶ್ ಶೆಟ್ಟಿ ಕೊಟ್ಟಿಂಜ,ಆರತಿ ದಿನೇಶ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ, ಸಂಗೀತ ಸತೀಶ್ ಶೆಟ್ಟಿ ಪೂಜೆಯ ಕೈಂಕರ್ಯದಲ್ಲಿ ಭಾಗವಹಿಸಿದರು.


ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯ ಸದಸ್ಯೆಯರಿಂದ ಭಜನಾ ಸೇವೆ ನಡೆಯಿತು.ವಿಧೂಷಿ ಸ್ವಪ್ನ ಕಿರಣ್ ಮತ್ತು ವಿಧೂಷಿ ರೂಪ ಕಿರಣ್ ರವರ ನಿರ್ದೇಶನದಲ್ಲಿ ಮೂಡಿ ಬಂದ ಯುಎಇ ಬಂಟ್ಸ್ ನ ಮಕ್ಕಳ ನೃತ್ಯ ಭಜನೆ ಕಣ್ಮನ ಸೆಳೆಯಿತು.
ಶ್ರೀ ಸತ್ಯನಾರಾಯಣ ದೇವರ ಮಹಾಪೂಜೆಯ ನಂತರ ಯಶಸ್ವಿಯಾಗಿ ನಡೆದ ಪೂಜೆಗೆ ಸಹಕರಿಸಿದ ಎಲ್ಲಾ ಪೋಷಕರಿಗೆ ಸಂಘದ ಗೌರವ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಉಪಾಧ್ಯಕ್ಷರಾದ ಪ್ರೆಮ್ ನಾಥ ಶೆಟ್ಟಿ,ಕಾರ್ಯದರ್ಶಿ ರವಿರಾಜ್ ಶೆಟ್ಟಿ ಶಾಲು ಹೊದಿಸಿ ವಿಶೇಷ ಪ್ರಸಾದ ನೀಡಿ ಗೌರವಿಸಲಾಯಿತು.ಚಿತ್ರ ಪ್ರಸನ್ನ ಶೆಟ್ಟಿ ಮತ್ತು ಶಶಿ ರವಿರಾಜ್ ಶೆಟ್ಟಿ ಆರಂಭದಿಂದ ಅಂತ್ಯದವರೆಗೆ ಅಚ್ಚುಕಟ್ಟಾಗಿ ನಿರೂಪಿಸಿದರು.ಕೊನೆಗೆ ದೇವರ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಿತು.


ಕಾರ್ಯಕ್ರಮದ ಯಶಸ್ಸಿಗೆ ದುಡಿದ ಕೋರ್ ಕಮಿಟಿ ಸದಸ್ಯರಿಗೆ,2025-26ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯ ಸದಸ್ಯೆಯರಿಗೆ ಮತ್ತು ಯುಎಇ ಬಂಟ್ಸ್ ನ ಕಾರ್ಯಕರ್ತರಿಗೆ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಕೃತಜ್ಞತೆ ಸಲ್ಲಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!