
ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಬಾಲಕೃಷ್ಣ ಎಸ್. ಮದ್ದೋಡಿ ಅವರು ಜರ್ಮನಿಯ ಬರ್ಲಿನ್‌ನಲ್ಲಿ ನವೆಂಬರ್ 6 ಮತ್ತು 7ರಂದು ನಡೆಯಲಿರುವ ಜರ್ಮನಿ–ಇಂಡಿಯಾ GICITE 2026 ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ.

‘ಮೆಷಿನ್ ಲರ್ನಿಂಗ್ ಆಧಾರಿತ ಭೌಗೋಳಿಕ ಮಾಹಿತಿ ವ್ಯವಸ್ಥೆ ಮತ್ತು ಉಪಗ್ರಹ ಚಿತ್ರಗಳ ಮೂಲಕ ಮೂಲಸೌಕರ್ಯಗಳ ಸ್ಥಿತಿಗತಿ ಮೌಲ್ಯಮಾಪನ’ (Machine Learning-Driven Infrastructure Condition Assessment Using Geographic Information Systems and Satellite Imagery) ವಿಷಯದ ಕುರಿತು ಅವರು ಪ್ರಬಂಧ ಮಂಡಿಸಲಿದ್ದಾರೆ.

IEEE ಸಹಯೋಗದಲ್ಲಿ ಬರ್ಲಿನ್‌ನ ಟೆಕ್ನಿಷೆ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಅವರ ಸಂಶೋಧನೆಗೆ ಅಂತಾರಾಷ್ಟ್ರೀಯ ವೇದಿಕೆ ದೊರೆಯಲಿದೆ. ಈ ಸಾಧನೆಗೆ ಗಣ್ಯರು ಶುಭಹಾರೈಸಿದ್ದು, ಪ್ರಬಂಧ ಮಂಡನೆ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.


