
ಮಂಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳ ಅನಿಲ ವ್ಯವಸ್ಥೆ ಎಂಜಿನಿಯರಿಂಗ್ನಲ್ಲಿ ಪರಿಣತಿ ಹೊಂದಿರುವ ಪುಣೆ ಗ್ಯಾಸ್ ಸಂಸ್ಥೆಯು ಮಂಗಳೂರಿನಲ್ಲಿ ತನ್ನ ನೂತನ ಎಕ್ಸ್ಪೀರಿಯನ್ಸ್ ಸೆಂಟರ್ ಆರಂಭಿಸಿದೆ. ಇದು ಸಂಸ್ಥೆಯ ಹತ್ತನೇ ಅನುಭವ ಕೇಂದ್ರವಾಗಿದ್ದು, ಕರ್ನಾಟಕದ ಎರಡನೇ ಕೇಂದ್ರವಾಗಿದೆ.

ಉರ್ವ ಮಾರಿಗುಡಿ ಸಮೀಪದ ಲೋಟಸ್ ಅಥರ್ವ ವಾಣಿಜ್ಯ ಸಂಕೀರ್ಣದಲ್ಲಿರುವ ವಿಂದ್ಯಾ ಅಪ್ಲಯನ್ಸಸ್ನಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿದೆ. ಪುಣೆ ಗ್ಯಾಸ್ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಜೇಸಲ್ ಸಂಪತ್ ಕೇಂದ್ರವನ್ನು ಉದ್ಘಾಟಿಸಿದರು. ವಿಂದ್ಯಾ ಅಪ್ಲಯನ್ಸಸ್ನ ನಿತ್ಯಾನಂದ ಪೈ ಸೇರಿದಂತೆ ಹೋಟೆಲ್ ಉದ್ಯಮದ ಪ್ರಮುಖರು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜೇಸಲ್ ಸಂಪತ್, ಅನಿಲ ಬಳಕೆಯ ಕ್ಷಮತೆ ಹೆಚ್ಚಿಸುವುದರಿಂದ ಉದ್ಯಮಗಳ ಕಾರ್ಯಾಚರಣೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಸಂಸ್ಥೆಯ ಎಂಜಿನಿಯರಿಂಗ್ ಪರಿಹಾರಗಳಿಂದ ದೇಶದ ಉದ್ಯಮಗಳಿಗೆ ವಾರ್ಷಿಕ 1,400 ಕೋಟಿ ರೂ.ಗೂ ಅಧಿಕ ಉಳಿತಾಯವಾಗುತ್ತಿದೆ. ಮಂಗಳೂರಿನಲ್ಲಿ ಈಗಾಗಲೇ ಹಲವು ಪ್ರಮುಖ ಉದ್ಯಮಗಳಿಗೆ ಸೇವೆ ನೀಡುತ್ತಿದ್ದು, ವಹಿವಾಟು ವಿಸ್ತರಣೆಯ ಉದ್ದೇಶದಿಂದ ನೂತನ ಕೇಂದ್ರ ಆರಂಭಿಸಲಾಗಿದೆ ಎಂದರು.

ವಿಂದ್ಯಾ ಅಪ್ಲಯನ್ಸಸ್ನ ನಿತ್ಯಾನಂದ ಪೈ ಮಾತನಾಡಿ, ಕರ್ನಾಟಕದಲ್ಲಿ ಪ್ರತಿದಿನ ಸುಮಾರು 850 ಮೆಟ್ರಿಕ್ ಟನ್ ಎಲ್ಪಿಜಿಗೆ ಬೇಡಿಕೆಯಿದ್ದು, ಇದು ಸುಮಾರು 44 ಸಾವಿರ ವಾಣಿಜ್ಯ ಸಿಲಿಂಡರ್ಗಳಿಗೆ ಸಮಾನವಾಗಿದೆ. ಅನಿಲ ಬಳಕೆಯ ಕ್ಷಮತೆ ಹೆಚ್ಚಿಸುವ ಹಾಗೂ ವ್ಯರ್ಥವಾಗುವುದನ್ನು ತಡೆಯುವ ಪುಣೆ ಗ್ಯಾಸ್ನ ತಂತ್ರಜ್ಞಾನಗಳು ಉದ್ಯಮಗಳಿಗೆ ಪ್ರಯೋಜನಕಾರಿಯಾಗಲಿವೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಡ್ರೈ ಟೈಪ್ ಎಲ್ಪಿಜಿ ವೆಪರೈಸರ್, ಎಲ್ಪಿ ಜೀನಿಯಸ್ ಸ್ಮಾರ್ಟ್ ಎಲ್ಪಿಜಿ ವ್ಯವಸ್ಥೆ, ಫ್ಯೂಯೆಲ್ ಫ್ಯೂಷನ್, ಲೀಕ್ ಚೆಕ್, ಹ್ಯಾಂಡ್ಹೆಲ್ಡ್ ಸ್ನಿಫರ್ ಹಾಗೂ ಗ್ಯಾಸ್ಟ್ರೈನ್ ಪ್ರೆಷರ್ ರೆಗ್ಯುಲೇಷನ್ ವ್ಯವಸ್ಥೆ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗಿದ್ದು, ಗ್ರಾಹಕರು ಅವುಗಳ ಕಾರ್ಯವೈಖರಿಯನ್ನು ನೇರವಾಗಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

