ಇತಿಹಾಸದಲ್ಲೇ ಮೊದಲ ಬಾರಿಗೆ ಶಿ–ಟ್ರಂಪ್–ಪುಟಿನ್ ತ್ರಿರಾಷ್ಟ್ರ ಶೃಂಗಸಭೆ; ಶೆನ್ಜೆನ್‌ನಲ್ಲಿ ಜಗತ್ತಿನ ಕುತೂಹಲದ ಭೇಟಿ

ಶೆನ್ಜೆನ್: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು ಸಂಜೆ ಚೀನಾದ ಶೆನ್ಜೆನ್‌ನಲ್ಲಿ ತ್ರಿರಾಷ್ಟ್ರ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಜಗತ್ತಿನಾದ್ಯಂತ ಹೆಚ್ಚುತ್ತಿರುವ ಸಂಘರ್ಷಗಳ ನಡುವೆ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಮೂರು ರಾಷ್ಟ್ರಗಳು ಮಹತ್ವದ ಕಾರ್ಯತಂತ್ರದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ಅಂಗವಾಗಿ ಗುರುವಾರ ಸಂಜೆ ದಕ್ಷಿಣ ಚೀನಾದ ಶೆನ್ಜೆನ್‌ನಲ್ಲಿ ಈ ಮಹತ್ವದ ಮಾತುಕತೆ ನಡೆಯಲಿದೆ ಎಂದು ವರದಿಯಾಗಿದೆ.

ಚೀನಾ, ರಷ್ಯಾ ಮತ್ತು ಅಮೆರಿಕದ ರಾಷ್ಟ್ರದ ನಾಯಕರು ಈ ಹಿಂದೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ, ಈ ಮೂವರು ಮಾತ್ರ ಒಂದೇ ಮೇಜಿನ ಸುತ್ತ ಕುಳಿತು ತ್ರಿಪಕ್ಷೀಯ ಮಾತುಕತೆ ನಡೆಸುತ್ತಿರುವುದು ಇತಿಹಾಸದಲ್ಲೇ ಮೊದಲು ಎಂಬ ಹೇಳಿಕೆ ಕೇಳಿಬಂದಿದೆ.

2013ರಲ್ಲಿ ಷಿ ಜಿನ್‌ಪಿಂಗ್ ಚೀನಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಷಿ ಮತ್ತು ಪುಟಿನ್ ಪರಸ್ಪರ 40ಕ್ಕೂ ಹೆಚ್ಚು ಬಾರಿ ನೇರವಾಗಿ ಭೇಟಿಯಾಗಿದ್ದಾರೆ. ಜಾಗತಿಕ ರಾಜಕೀಯದಲ್ಲಿ ಮಹತ್ವದ ಪ್ರಭಾವ ಹೊಂದಿರುವ ಈ ಮೂರು ರಾಷ್ಟ್ರಗಳ ನಾಯಕರ ಭೇಟಿಯು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಯಾವ ರೀತಿಯ ಬದಲಾವಣೆ ತರಲಿದೆ ಎಂಬ ಕುತೂಹಲ ಜಗತ್ತಿನಾದ್ಯಂತ ಮೂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!