ನವದೆಹಲಿ: ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಸಾರ್ವಜನಿಕರ ಮೇಲೆ ಬಿದ್ದಿದ್ದು, ಸೋಮವಾರ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಏರಿಕೆಯಾಗಿದೆ ಮತ್ತೊಮ್ಮೆ ಹೆಚ್ಚಾಯಿತು. ಪೆಟ್ರೋಲ್ ದರವನ್ನು ಲೀಟರ್ಗೆ ರೂ.2.61 ಮತ್ತು ಡೀಸೆಲ್ ದರವನ್ನು ರೂ.2.71 ಏರಿಕೆಯಾಗಿದೆ, ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿ ನಡೆದ ದರ ಪರಿಷ್ಕರಣವಾಗಿದೆ.
ಮೇ 15ರಿಂದ ಆರಂಭವಾದ ಸರಣಿ ದರ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟಾರೆ ರೂ.7.50ರಷ್ಟು ಹೆಚ್ಚಳವಾಗಿದೆ, ಇದರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗುತ್ತದೆ. ಇಂಧನ ದರ ಏರಿಕೆಯ ಪರಿಣಾಮ ಸಾರಿಗೆ ವೆಚ್ಚ, ಆಹಾರ ಪದಾರ್ಥಗಳ ಬೆಲೆ ಮತ್ತು ಕೈಗಾರಿಕಾ ಉತ್ಪಾದನಾ ವೆಚ್ಚಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ದರ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ ರೂ.102.12 ಹಾಗೂ ಡೀಸೆಲ್ ರೂ.95.20ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ರೂ.111.21 ಮತ್ತು ಡೀಸೆಲ್ ರೂ.97.83ಕ್ಕೆ ಮಾರಾಟವಾಗುತ್ತಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ರೂ.113.51 ಹಾಗೂ ಡೀಸೆಲ್ ರೂ.99.82 ದರಕ್ಕೆ ಲಭ್ಯವಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ.108.09ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ರೂ.107.77 ಹಾಗೂ ಡೀಸೆಲ್ ರೂ.99.55ಕ್ಕೆ ತಲುಪಿದೆ.
ರಾಜ್ಯ ಸರ್ಕಾರಗಳು ವಿಧಿಸುವ ಸ್ಥಳೀಯ ತೆರಿಗೆಗಳು ಮತ್ತು ವ್ಯಾಟ್ ದರಗಳಲ್ಲಿ ವ್ಯತ್ಯಾಸ ಪ್ರತಿ ರಾಜ್ಯದಲ್ಲೂ ಇಂಧನ ದರಗಳಲ್ಲಿ ಬದಲಾವಣೆ ಕಂಡು ಬರುತ್ತಿದೆ.
ಮೇ 15 ರಂದು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ ರೂ.3ರಷ್ಟು ಹೆಚ್ಚಿಸಲಾಗಿದೆ. ಬಳಿಕ ಮೇ 19 ರಂದು ಸುಮಾರು 90 ಪೈಸೆ ಏರಿಕೆ ಮಾಡಲಾಗಿದೆ. ಮೇ 23ರಂದು ಪೆಟ್ರೋಲ್ಗೆ 87 ಪೈಸೆ ಹಾಗೂ ಡೀಸೆಲ್ಗೆ 91 ಪೈಸೆ ಆಗಿತ್ತು. ಇದೀಗ ಮತ್ತೊಮ್ಮೆ ದರ ಏರಿಕೆ ಮಾಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.