ಜಾಗತಿಕ ಯುದ್ಧ ಭೀತಿ ವಿರುದ್ಧ ಮಂಗಳೂರಿನಲ್ಲಿ ಮೌನ ಕೂಗು

“ಭೂಮಿಗೆ ಶಾಂತಿ ಬೇಕು” ಸಂದೇಶದೊಂದಿಗೆ ಹಂಪನಕಟ್ಟೆಯಲ್ಲಿ ಮೌನ ಧರಣಿ

ಮಂಗಳೂರು: ಜಾಗತಿಕ ಯುದ್ಧ ಭೀತಿ, ಮಾನವೀಯ ಮೌಲ್ಯಗಳ ಕುಸಿತ ಹಾಗೂ ಪರಿಸರ ಹಾನಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಶನಿವಾರ ಮಂಗಳೂರು ಹಂಪನಕಟ್ಟೆಯ ಕ್ಲಾಕ್ ಟವರ್ ಎದುರು ಮೌನ ಧರಣಿ ನಡೆಸಲಾಯಿತು.

ನಮ್ಮ ಭೂಮಿ ಕುಂದಾಪುರ ಸಂಸ್ಥೆಯ ಪ್ರಮುಖರಾದ ರಾಮಾಂಜಿ ಅವರ ನೇತೃತ್ವದಲ್ಲಿ “ಈ ಶಾಂತಿ ಅಭಿಯಾನದಲ್ಲಿ ಭೂಮಿ ಮೇಲೆ ಶಾಂತಿ ನೆಲೆಸಬೇಕು, ಮಾನವೀಯ ಸಂಬಂಧಗಳು ಉಳಿಯಬೇಕು, ಪ್ರಕೃತಿ ಸಂಪನ್ಮೂಲಗಳ ಸಂರಕ್ಷಣೆ ಆಗಬೇಕು ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಸುರಕ್ಷಿತ ವಾತಾವರಣ ನಿರ್ಮಾಣವಾಗಬೇಕು” ಎಂಬ ಸಂದೇಶಗಳನ್ನು ಒಳಗೊಂಡ ಫಲಕಗಳನ್ನು ಪ್ರದರ್ಶಿಸಲಾಯಿತು.

ಯುದ್ಧ ಮತ್ತು ಪರಿಸರದಿಂದ ವಿಶ್ವದ ಭವಿಷ್ಯಕ್ಕೆ ಎದುರಾಗುತ್ತಿರುವ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಈ ಧರಣಿ ನಡೆದ ಮೌನ.

ಇದಕ್ಕೂ ಮೊದಲು ಉಡುಪಿ ಮತ್ತು ಕುಂದಾಪುರ ನಗರಗಳಲ್ಲಿ ಇದೇ ರೀತಿಯ ಶಾಂತಿ ಅಭಿಯಾನವನ್ನು ರಾಮಾಂಜಿ ನಡೆಸಿದ್ದರು.

ಮೌನ ಧರಣಿಗೆ ಸಾಮಾಜಿಕ ಹೋರಾಟಗಾರರಾದ ಮಮತಾ ಕೆ ಎಸ್ , ರೆಹಮಾನ್ ಖಾನ್ ಕುಂಜತ್ತಬೈಲ್ , ನಾಗೇಶ್ ಕಲ್ಲೂರು , ಇಸ್ಮಾಯಿಲ್ , ಬಶೀರ್ ಬೈಕಂಪಾಡಿ ವಿ. ವಿ ಕಾಲೇಜಿನ ವಿದ್ಯಾರ್ಥಿಗಳಾದ ಐರೆಲ್, ಮೋನಿಶಾ, ಸುಮಿತ್ರಾ, ಅಕ್ಷಯ್, ಅಶ್ವಿನಿ, ಧನ್ಯಾ ಸಹಿತ ಮುಂತಾದವರು ಸಾಥ್ ನೀಡಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!