ಬೆಸೆಂಟ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಸಂತ ರವಿದಾಸರ 650ನೇ ಜನ್ಮ ವರ್ಷಾಚರಣೆಯ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಾಹಿತ್ಯ ಕೇಂದ್ರದ ವಿಶ್ವಸ್ಥರಾದ ಶ್ರೀ ಅರವಿಂದ ಜಿಜೂರು ದೀಪ ಬೆಳಗಿಸಿ ಉದ್ಘಾಟಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನ ನಿವೃತ್ತ ಹಿರಿಯ ಪ್ರಬಂಧಕರಾದ ಶ್ರೀ ಬಿ.ಕೆ ಕುಮಾರ್ ರವರು ಅಸಮಾನತೆ, ಅಮಾನವೀಯತೆ, ಜಾತಿ, ಹಾಗೂ ಸಾಮಾಜಿಕ ಭೇದ ಭಾವಗಳನ್ನು ಮೀರಿ ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ ಗುರು ರವಿದಾಸರ ಆದರ್ಶಗಳನ್ನು ಸಮಾಜದಲ್ಲಿ ಅಳವಡಿಸಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಸೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಶೆಟ್ಟಿ ವಹಿಸಿದರು. ಕೆ.ಆರ್. ಎಮ್. ಎಸ್. ಎಸ್ ಮಾದ್ಯಮ ಪ್ರಮುಖರಾದ ಶ್ರೀಮತಿ ಮಮತಾ ಶೆಟ್ಟಿ ಮತ್ತು ಹಿರಿಯ ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಹರಿಣಿಯವರು ಸಂಯೋಜಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಸುಶೀಲಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಗೈದರು.

