ಮಂಗಳೂರು:ಕೂಳೂರು ಬಳಿಯ ರಾಯಿಕಟ್ಟೆ ಪ್ರದೇಶದಲ್ಲಿ ಹರಿಯುವ ಪಲ್ಗುಣಿ ನದಿಗೆ ಸೇರುವ ಹಳ್ಳದಲ್ಲಿ ನೀರು ಕೊಳೆತು ನಾರುತ್ತಿದೆ. ಮೀನುಗಳು ಸತ್ತಿವೆ.ಕಳೆದ ಒಂದು ವಾರದಿಂದ ಈ ಸ್ಥಿತಿ ಇದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಈ ಭಾಗದ ಕೈಗಾರಿಕೆಗಳು ಹಲವು ವರ್ಷಗಳಿಂದ ತಮ್ಮ ಕೈಗಾರಿಕಾ ಮಾಲಿನ್ಯವನ್ನು ಆನಧಿಕೃತವಾಗಿ ಪಲ್ಗುಣಿಯನ್ನು ಸೇರುವ ಹಲವು ಹಳ್ಳಗಳಿಗೆ ನೇರವಾಗಿ ಹರಿಸುತ್ತಿವೆ. ಈ ಕುರಿತು ಪ್ರತಿಭಟನೆಗಳನ್ಜು ನಡೆಸಿದರೂ ಸೂಕ್ತವಾದ ಕ್ರಮಗಳು ಜರುಗುತ್ತಿಲ್ಲ. ಈಗ ಪರಿಸ್ಥಿತಿ ಅತಿರೇಕಕ್ಕೆ ತಲುಪಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.