ಬಂಟ್ವಾಳ ಗುಪ್ತವಾರ್ತೆ ವಿಭಾಗದ ಇರ್ಷಾದ್‌ಗೆ ಮುಖ್ಯಮಂತ್ರಿ ಪದಕ ಗೌರವ

ಬಂಟ್ವಾಳ: 2025- 26 ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯ ಗುಪ್ತವಾರ್ತೆ ವಿಭಾಗದ ಇರ್ಷಾದ್ ಪಡಂಗಡಿ ಅವರು ಆಯ್ಕೆಯಾಗಿದ್ದಾರೆ.


ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿಯಾಗಿರುವ ಇರ್ಷಾದ್ ಅವರು 2008 ರಲ್ಲಿ ಪೋಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದಾರೆ.
ಬಳಿಕ ಮಂಗಳೂರು ವಿಶೇಷ ಘಟಕ, ಉಪ್ಪಿನಂಗಡಿ ಠಾಣೆ, ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು ಅನೇಕ ಕೊಲೆ ಪ್ರಕರಣಗಳ ಪತ್ತೆ , ದರೋಡೆ ,ಮನೆಕಳ್ಳತನ,ಗಾಂಜಾ ಹಾಗೂ ಖೋಟಾ ನೋಟು ಪ್ರಕರಣಗಳ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪೋಲೀಸ್ ಇಲಾಖೆಯ ಸಾಧನೆಗೆಗಾಗಿ ಗುರುತಿಸಿ ಇವರಿಗೆ ಮುಖ್ಯಮಂತ್ರಿ ಪದಕ ನೀಡಲಾಗಿದೆ.
ಸ್ನೇಹಜೀವಿಯಾಗಿರುವ ಇವರು ಸಾರ್ವಜನಿಕ ವಲಯದಲ್ಲಿ ಉತ್ತಮ ಸಂಬಂಧ ಇರಿಸಿಕೊಂಡು ಜನಸ್ನೇಹಿ ಪೋಲೀಸ್ ಯಾಗಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!