ಜನಗಣತಿ: ಮನೆಗಣತಿಗೆ ಸ್ಪೀಕರ್ ಚಾಲನೆ

ಮಂಗಳೂರು: ಜನಗಣತಿಯ ಪೂರ್ವಭಾವಿಯಾಗಿ ಮನೆಗಣತಿ ಕಾರ್ಯಕ್ಕೆ ನಗರದಲ್ಲಿ ಇಂದು ಚಾಲನೆ ನೀಡಲಾಯಿತು.
ನಗರದ ಬಾವುಟಗುಡ್ಡೆಯಲ್ಲಿರುವ ಸ್ಪೀಕರ್ ಯು ಟಿ ಖಾದರ್ ಅವರ ನಿವಾಸದಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತು ಗಣತಿದಾರರು ಆಗಮಿಸಿ ಮಾಹಿತಿ ಪಡೆದರು.


ಮನೆ ಮಾಹಿತಿಯನ್ನು ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ದಾಖಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಅವರು, ಜನಗಣತಿಯು ದೇಶದ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ದೇಶದ ಪ್ರತಿಯೊಂದು ಮನೆ ಮತ್ತು ನಾಗರಿಕರ ಮಾಹಿತಿ ಒಳಗೊಳ್ಳಲಿದೆ. ದೇಶದ ಅಭಿವೃದ್ಧಿಗೆ ಈ ಮಾಹಿತಿ ಅತ್ಯಗತ್ಯವಾಗಿದೆ ಎಂದರು.
ನಾಗರಿಕರು ಸ್ವಯಂ ಆಗಿ ಆನ್ ಲೈನ್ ನಲ್ಲಿ ತಮ್ಮ ಮನೆಯ ಮಾಹಿತಿ ದಾಖಲಿಸಬಹುದು ಅಥವಾ ಗಣತಿದಾರರು ಮನೆಗೆ ಬಂದಾಗ ಮಾಹಿತಿ ನೀಡಿ ಸಹಕರಿಸಬೇಕು ಎಂದು ಅವರು ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!