ಕೊರಿಂಗಿಲ ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ

ಪುತ್ತೂರು : ಅಶ್ಬಾಲುಲ್ ಇಸ್ಲಾಮ್ ವೆಲ್ಫೇರ್ ಅಸೋಸಿಯೇಷನ್ (AIWA) ಕೊರಿಂಗಿಲ ಇದರ ವತಿಯಿಂದ ಮಿಸ್ಬಾಹುಲ್ ಹುದಾ ಮದ್ರಸದ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.

ಅಶ್ಬಾಲುಲ್ ಇಸ್ಲಾಂ ವೆಲ್ಫೇರ್ ಅಸೋಸಿಯೇಷನ್ ಸಮಿತಿ ವತಿಯಿಂದ ಕೊರಿಂಗಿಲ ಮದ್ರಸದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಕೊಡುತ್ತಿದ್ದು ಉತ್ತಮ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಕಾರ್ಯಕ್ರಮದಲ್ಲಿ ಖತೀಬರಾದ ಬಹು | ಅಲ್ಹಾಜ್ GH ಅಯ್ಯೂಬ್ ವಹಬಿ, ಸಹ ಅಧ್ಯಾಪಕರಾದ ಬಹು | ಅಬೂಬಕ್ಕರ್ ಮದನಿ, ಕೊರಿಂಗಿಲ ಜಮಾತ್ ಆಡಳಿತ ಸಮಿತಿ ಪದಾಧಿಕಾರಿಗಳು, ಅಶ್ಬಾಲುಲ್ ಇಸ್ಲಾಂ ಸಮಿತಿಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.ಭಾಗವಹಿಸಿದ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!