ಉಡುಪಿ ಜಿಲ್ಲೆಯಲ್ಲಿ ಕನ್ನಡ ಭವನದ ” ಭರವಸೆಯ ಬೆಳಕು “ಯುವ ವಿದ್ಯಾರ್ಥಿ ಪ್ರಶಸ್ತಿ -ಪ್ರದಾನ 31ರಂದು

ಉಡುಪಿ: ಉಡುಪಿ ರಾಮಕ್ಷತ್ರಿಯ ಯುವ ಸಂಘ, ನೀಲಾವರ ಘಟಕದ ವತಿಯಿಂದ ಮೇ 31ರಂದು ನೀಲಾವರ ಶಾರದಾ ಸಭಾಭವನದಲ್ಲಿ ‘ರಾಮಕ್ಷತ್ರಿಯ ಜ್ಞಾನ-ಶಕ್ತಿ-ಅರ್ಥ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀ ರಮಾನಂದ ನೀಲಾವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮುದಾಯದಲ್ಲಿ ಜ್ಞಾನ, ಶಕ್ತಿ ಹಾಗೂ ಸಮೃದ್ಧಿಯ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಸಮಾಗಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ

ಕಾರ್ಯಕ್ರಮದ ಅಂಗವಾಗಿ ಡಾ ವಾಮನ್ ರಾವ್ ಬೇಕಲ್ ನೇತೃತ್ವದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ) ಸಹಯೋಗದಲ್ಲಿ ಪ್ರತಿಷ್ಠಿತ ‘ಭರವಸೆಯ ಬೆಳಕು – Light of Hopes’ ವಿದ್ಯಾರ್ಥಿ ಸಾಧನಾ ಪ್ರಶಸ್ತಿ – 2026 ಹಾಗೂ ‘ಭರವಸೆಯ ಶಿಕ್ಷಣ ರತ್ನ – Light of Hopes’ , ಶಿಕ್ಷಕ ಸಾಧನಾ ಪ್ರಶಸ್ತಿ – 2026 ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಸಮುದಾಯದ ಸದಸ್ಯರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಕರಿಗೆ ಪ್ರೋತ್ಸಾಹ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಸಮಾಜದ ಏಕತೆ ಮತ್ತು ಸಮುದಾಯ ನಿರ್ಮಾಣದ ದೃಷ್ಟಿಯಿಂದ ಈ ಸಮಾಗಮ ಮಹತ್ವದ್ದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!