ಕಾಸರಗೋಡು: ಕಾಸರಗೋಡು ಕನ್ನಡ ಭವನದ ವತಿಯಿಂದ 2013ರಿಂದ ಪ್ರತಿವರ್ಷ ಆಯೋಜಿಸಲಾಗುತ್ತಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ’ದ ಅಂಗವಾಗಿ ಅ.18ರಂದು ಅಂತರ್‌ರಾಜ್ಯ ‘ಕಾಸರಗೋಡು ದಸರಾ ಕವಿಗೋಷ್ಠಿ’ ನಡೆಯಲಿದೆ.


ಅ.18ರಂದು ಮಧ್ಯಾಹ್ನ 2 ಗಂಟೆಯಿಂದ ನಡೆಯಲಿರುವ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಕವಿಗಳು ತಮ್ಮ ಹೆಸರು, ಸ್ಥಳ, ವಿಳಾಸ ಹಾಗೂ ಜಿಲ್ಲೆ ವಿವರಗಳೊಂದಿಗೆ 9027173400 ಅಥವಾ 9746093552 ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ‘ಕಾಸರಗೋಡು ದಸರಾ ಕವಿಶ್ರೇಷ್ಠ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕನಿಷ್ಠ ಐದು ಕವನ ಸಂಕಲನಗಳನ್ನು ಪ್ರಕಟಿಸಿರುವ ಹಾಗೂ ರಾಜ್ಯಮಟ್ಟದ ಕನಿಷ್ಠ ಐದು ಪ್ರಶಸ್ತಿಗಳನ್ನು ಪಡೆದಿರುವ ಕವಿಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಒಟ್ಟು 21 ಮಂದಿ ಶ್ರೇಷ್ಠ ಕವಿಗಳಿಗೆ ಪ್ರಶಸ್ತಿ ನೀಡಲಾಗುವುದು.

ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಹಾಗೂ ‘ಚುಟುಕು ಬ್ರಹ್ಮ’ ಡಾ. ಎಂ.ಜಿ.ಆರ್. ಅರಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಭವನದ ಸಂಸ್ಥಾಪಕ ಹಾಗೂ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಮತ್ತು ಕವಿಗೋಷ್ಠಿಯ ಆಯೋಜಕ ಡಾ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

