ಬೆಂಗಳೂರು, ಜೂನ್ 3:
ಕನ್ನಡ ಸಾಹಿತ್ಯದ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ವತಿಯಿಂದ “ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2026” ಆರಂಭಿಸಲಾಗಿದೆ.
ಈ ಸ್ಪರ್ಧೆಗೆ “ವೈದ್ಯಲೋಕ” ಆರೋಗ್ಯ ಮಾಸಪತ್ರಿಕೆ ಮತ್ತು ಮೀಡಿಯಾ ಐಕಾನ್ ಸಂಸ್ಥೆಗಳು ಸಹಯೋಗ ನೀಡುತ್ತಿವೆ. ಬರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಹಾಗೂ ಸ್ವಾಸ್ಥ್ಯದ ಕುರಿತು ಅರಿವು ಮೂಡಿಸುವುದು ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಪ್ರೇರಣೆ ನೀಡುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ.
ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿದೆ – ಸಾರ್ವಜನಿಕರು, ವೈದ್ಯರು ಮತ್ತು ಆರೋಗ್ಯ ವೃತ್ತಿಪರರು, ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು. ಭಾಗವಹಿಸುವವರಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಲಭಿಸಲಿದೆ.
ಆಯ್ದ ಕವನ ಮತ್ತು ಕಥೆಗಳು ‘ವೈದ್ಯಲೋಕ’ ಮಾಸಪತ್ರಿಕೆ ಹಾಗೂ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದ್ದು, ವಿಜೇತರಿಗೆ ಪ್ರಶಸ್ತಿ, ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.
ಕಥೆ ಮತ್ತು ಕವನ ಕಳುಹಿಸಲು ಜೂನ್ 30, 2026 ಕೊನೆಯ ದಿನಾಂಕವಾಗಿದೆ. ಆಸಕ್ತರು ತಮ್ಮ ಬರಹಗಳನ್ನು ಇಮೇಲ್ (mediaicon@ymail.com) ಅಥವಾ ವಾಟ್ಸಪ್ (81975 54373) ಮೂಲಕ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಶ್ರೀ ಕೃಷ್ಣ ಎಂ (81975 54373) ಅಥವಾ ಎನ್.ವಿ. ರಮೇಶ್ (98455 65238) ಅವರನ್ನು ಸಂಪರ್ಕಿಸಬಹುದು.