ಮುನ್ನೂರು, ಜೂ. 8: ರಾಣಿಪುರ ನಿವಾಸಿ ಹಾಗೂ ದೇರಳಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿ ವೀಣಾ ಡಿಸೋಜಾ (49) ಅವರು ಜೂನ್ 7ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅವರು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ನಿಧನವು ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ಪತಿ ಅರ್ಬನ್ ಡಿಸೋಜ, ಪುತ್ರ ವಿನ್ಸ್ಟನ್ ಬ್ರಯಾನ್ ಡಿಸೋಜ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರು ಉಳ್ಳಾಲ ಕಾಪಿಕಾಡ್‌ನ ಜಾನ್ ಬೇಕರಿಯ ಜಾನ್ ಡಿಸೋಜ ಅವರ ಪುತ್ರಿಯಾಗಿದ್ದರು.
ಮೃತರ ಪುತ್ರಿ ವಿವಲ್ ಬಿಂದಿಯ ಡಿಸೋಜ ಅವರು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು.
ಅಂತ್ಯಕ್ರಿಯೆಯು ಜೂನ್ 9ರಂದು ಸಂಜೆ 4 ಗಂಟೆಗೆ ರಾಣಿಪುರದ ನಿವಾಸದಿಂದ ಹೊರಟು ರಾಣಿಪುರದ ಲೇಡಿ ಕ್ವೀನ್ ಆಫ್ ಯೂನಿವರ್ಸ್ ಚರ್ಚ್‌ನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.