ಕಳೆದ ವರ್ಷ ತುಂಬಿ ಹರಿದ ನದಿ, ಈ ವರ್ಷ ಮರಳುಗಾಡು: ಉಪ್ಪಿನಂಗಡಿಯಲ್ಲಿ ಆತಂಕ

ಸಂಗಮ‌ ತಾಣವೆಂದು ಪ್ರಸಿದ್ಧಿ ಪಡೆದಿರುವ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹರಿಯುತ್ತಿರುವ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿತ ಕಂಡಿದ್ದು, ಮರಳು ಕಾಣುತ್ತಿರುವ ಪೋಟೋ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದೆ.
ಕಳೆದ ವರ್ಷ 2025 ರ ಜೂನ್ ತಿಂಗಳ 15 ರಂದು ನದಿಯ ನೀರನ ಮಟ್ಟ ಹಾಗೂ 2026 ರ ಜೂನ್ ತಿಂಗಳ 15 ರಂದು ನದಿಯ ನೀರಿನ‌ ಮಟ್ಟವನ್ನು ತುಲನೆ ಮಾಡಿದ ಪೋಟೋ ಸಖತ್ ವೈರಲ್ ಆಗಿದೆ.


ನೇತ್ರಾವತಿ – ಕುಮಾರದಾರ ಸಂಗಮ ಕ್ಷೇತ್ರ ಎಂದೇ ಖ್ಯಾತಿ ಪಡೆದ ನದಿ ಈ ವರ್ಷ ನೀರಿಲ್ಲದೆ ಸೊರಗಿ ಹೋಗಿರುವ ದೃಶ್ಯ ಇಡೀ ಜನತೆಗೆ ಆತಂಕ ಉಂಟು ಮಾಡಿದೆ.
ಮೇ. 17 ರಂದು ಆರಂಭವಾದ ಮಳೆ ಬಳಿಕ ನಿರಂತರವಾಗಿ ಸುರಿಯುತ್ತಲೇ ಇದ್ದು, ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ನೇತ್ರಾವತಿ – ಕುಮಾರದಾರ ಸಂಗಮವಾಗಿತ್ತು.


‌ಅಂತದರಲ್ಲಿ ಈ ಬಾರಿ ಮಳೆರಾಯನ ಆಗಮನವಾಗಿದ್ದೇ ತಡವಾಗಿ,ಅಬಳಿಕ ಬೇಸಿಗೆ ಕಾಲದ ಬಿಸಿಲಿನಂತೆ ಸುಡುತ್ತಿರುವ ಬಿಸಿಲಿನ ತಾಪಕ್ಕೆ ನದಿಯಲ್ಲಿ ನೀರು ಬತ್ತಿ ಹೋಗಿರುವುದು ಕೃಷಿಕರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ.
ನಿಗದಿತ ಸಮಯದಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆರಾಯ ಆಗಮನವಾಗದೆ ಇದ್ದ ಕಾರಣದಿಂದ ಭತ್ತದ ಕೃಷಿ ಕಾರ್ಯ ವಿಳಂಭವಾಗಿದೆ.ಹೀಗಾಗಿ ಕೃಷಿಕರು ಸಂಕಷ್ಟದಲ್ಲಿದ್ದಾರೆ.
ಪಕೃತಿಯ ವೈಪರೀತ್ಯದಿಂದ ಭತ್ತದ ಕೃಷಿ ಜೊತೆ ಪ್ರಾಣಿ ಪಕ್ಷಿ ಹಾಗೂ ಇತರ ಜೀವಜಂತುಗಳ ವಂಶವಾಹಿಗಳ ಸಂಖ್ಯೆಯಲ್ಲಿ ಏರುಪೇರು ಕಾಣುವ ಲಕ್ಷಣಗಳು ಇವೆ ಎಂದು ಹೇಳಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!