ಕಾವೂರು: ಮಹಿಳಾ ಗೃಹ ಕಾರ್ಮಿಕರ ಸಬಲೀಕರಣ ಯೋಜನೆ-ಸೇವಕ ಮಂಗಳೂರು ಇದರ ವತಿಯಿಂದ ಅಂತರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವು ಕಾವೂರು ಸೊಸೈಟಿ ಹಾಲ್ನಲ್ಲಿ ನಡೆಯಿತು.
ಅಂತರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಮನೆ ಚೆನ್ನಾಗಿದ್ದರೆ ನಮ್ಮ ಮನಸ್ಸು ಇಡೀ ಪ್ರಪಂಚ ಚೆನ್ನಾಗಿರುತ್ತೆ ಇದಕ್ಕೆಲ್ಲ ಕಾರಣ ಗೃಹ ಕಾರ್ಮಿಕರು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಮಾನಸ ಹೆಗಡೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಕಾನೂನು ಮಾಹಿತಿ ಮತ್ತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಗೃಹ ಕಾರ್ಮಿಕರ ಬೇಡಿಕೆಗಳನ್ನು ಮತ್ತು ದೂರು ನಿವಾರಣ ಕೇಂದ್ರವನ್ನು ಸ್ಥಾಪಿಸಲು ಒತ್ತಾಯಿಸಿ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ರವರಿಗೆ ಮನವಿ ಸಲ್ಲಿಸಿದರು.
ಸಮಾಜ ಸೇವಕಿ ನಂದಪಾಯಸ್, ನಂದಿನಿ ಮಹಿಳಾ ಮಂಡಲ ಅಧ್ಯಕ್ಷೆ ಗೀತಾ ಶೇಖರ್ , ಸ್ತ್ರೀ ಜಾಗ್ರತಿ ಸಮಿತಿ, ಸೇವಕ-ಮಹಿಳಾ ಗೃಹ
ಕಾರ್ಮಿಕರ ಸಬಲೀಕರಣ ಯೋಜನೆಯ ಸಂಚಾಲಕಿ ಡಾ. ಸಂಶದ್, ಸಂಘದ ಅಧ್ಯಕ್ಷೆ ಸೀತಮ್ಮ, ಕಾರ್ಯದರ್ಶಿ ಕವಿತಾ ಶ್ರೀರಾಮ್
ಉಪಸ್ಥಿತರಿದರು.
ಹನಿಷ ಸವಾದ್ ನಿರೂಪಿಸಿದರು. ಗೃಹ ಕಾರ್ಮಿಕರ ಸದಸ್ಯೆ ಮಲಾರ್ ಸ್ವಾಗತಿಸಿದರು. ಕವಿತಾ ರಾಜೇಂದ್ರ ವಂದಿಸಿದರು.