“ಅತ್ಯುತ್ತಮ ಜನಮೆಚ್ಚಿದ ನಾಯಕಿ” ಪ್ರಶಸ್ತಿ ಸ್ವೀಕರಿಸಿದ ಕಾಂತಿ ಶೆಟ್ಟಿ

ಬೆಂಗಳೂರು: ಕರ್ನಾಟಕ ಟಿವಿ ವತಿಯಿಂದ ಆಯೋಜಿಸಲಾದ ಬೆಸ್ಟ್ ನಾಯಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ “ಅತ್ಯುತ್ತಮ ಜನಮೆಚ್ಚಿದ ನಾಯಕಿ” ಪ್ರಶಸ್ತಿಯನ್ನು ಕಾಂತಿ ಶೆಟ್ಟಿ ಸ್ವೀಕರಿಸಿದರು.

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಜನಪರ ಕಾರ್ಯಗಳು ಹಾಗೂ ಸಮಾಜದ ಅಭಿವೃದ್ಧಿಯತ್ತ ಕಾಂತಿ ಶೆಟ್ಟಿ ತೋರಿದ ಬದ್ಧತೆ ಮತ್ತು ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಾಣಿಗಳಾದ ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಕೃಷ್ಣ ಬೈರೇಗೌಡ, ಸಿ.ಎನ್. ಅಶ್ವತ್ಥನಾರಾಯಣ, ಡಾ. ಸಿ.ಎನ್. ಮಂಜುನಾಥ್, ಚಲವಾಡಿ ನಾರಾಯಣಸ್ವಾಮಿ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ , ಕರ್ನಾಟಕ ಟಿವಿಯ ಮುಖ್ಯಸ್ಥ ಶಿವಕುಮಾರ್ ಸಹಿತ ಮುಂತಾದ ಗಣ್ಯರು ಉಪಸ್ಥಿತರಿದ್ದರು .

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕಾಂತಿ ಶೆಟ್ಟಿ, ಈ ಗೌರವ ತಮ್ಮ ಸಾರ್ವಜನಿಕ ಜೀವನದ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು. ಜನಪರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ ಕರ್ನಾಟಕ ಟಿವಿ ಬಳಗಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.

ಅವಿಭಜಿತ ಉಡುಪಿ–ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಜನರು ತಮ್ಮ ಪರ ಮತ ಚಲಾಯಿಸಿ ಈ ಗೌರವಕ್ಕೆ ಪಾತ್ರರಾಗುವಂತೆ ಮಾಡಿದ ಎಲ್ಲರಿಗೂ ಕಾಂತಿ ಶೆಟ್ಟಿ ಹೃತ್ಪೂರ್ವಕ ಧನ್ಯವಾದ

SHARE
Loading spinner

Leave a Reply

Your email address will not be published. Required fields are marked *

error: Content is protected !!