ಬೋಳಂತೂರಿನಲ್ಲಿ ಘಟನೆ; ಪ್ರಾಣಾಪಾಯದಿಂದ ಪಾರಾದ ಅಂಗಡಿ ಮಾಲೀಕ
ಬಂಟ್ವಾಳ, ಜುಲೈ 6: ಬಂಟ್ವಾಳ ತಾಲೂಕಿನ ಮಂಚಿ ಸಮೀಪದ ಬೋಳಂತೂರಿನಲ್ಲಿ ಭಾರೀ ಗಾಳಿ-ಮಳೆಯ ಪರಿಣಾಮ ಮರವೊಂದು ಅಂಗಡಿಯ ಛಾವಣಿಯ ಮೇಲೆ ಬಿದ್ದು ಹಾನಿಗೊಳಗಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಬೋಳಂತೂರು ಕೊಕ್ಕಪುಣಿ ನಿವಾಸಿ ರಹೀಂ ಅವರಿಗೆ ಸೇರಿದ ಹಂಚಿನ ಅಂಗಡಿಯ ಮಧ್ಯಭಾಗದ ಮೇಲೆ ಮರ ಬಿದ್ದ ಪರಿಣಾಮ ಛಾವಣಿ ಜಖಂಗೊಂಡಿದ್ದು, ಅಂಗಡಿಯೊಳಗೂ ಹಾನಿಯಾಗಿದೆ.

ಘಟನೆ ಸಂಭವಿಸಿದ ವೇಳೆ ಅಂಗಡಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ-ಮಳೆಯ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳೀಯರು ಹಾನಿಗೊಳಗಾದ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


