ತುಳುಕೂಟ ಬಂಟ್ವಾಳ ಮತ್ತು ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಬಿ.ಸಿ.ರೋಡು ಇದರ ಆಡಳಿತ ಮಂಡಳಿಯ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಆಟಿ ಅಮವಾಸ್ಯೆಯ “ಸಾರ್ವಜನಿಕ ಪಾಲೆದ ಕೆತ್ತೆ ಕಷಾಯ ವಿತರಣೆ”ಯು ಇಂದು ಬಿ.ಸಿ.ರೋಡು ರಕ್ತೇಶ್ವರಿ ಸನ್ನಿದಿಯಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ತುಳುಕೂಟ ಬಂಟ್ವಾಳದ ಅಧ್ಯಕ್ಷರಾದ ಶ್ರೀ ಸುದರ್ಶನ್ ಜೈನ್, ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ.ಬಿ.ಮೋಹನ್, ಹಿರಿಯರಾದ ಶಿವಶಂಕರ್ .ಎನ್. ಕೆ.ಸೀತಾರಾಮ್ ಶೆಟ್ಟಿ,ಸುಭಾಶ್ಚಂದ್ರ ಜೈನ್, ಸೇಷಪ್ಪ ಮಾಸ್ಟರ್, ಸುಕುಮಾರ್ ಬಂಟ್ವಾಳ, ನಾರಾಯಣ್ ಪೆರ್ನೆ, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ವಿಶ್ವನಾಥ್ ಬಿ. ಪರಮೇಶ್ವರ್ ಮೂಲ್ಯ, ದೇವಪ್ಪ ಕುಲಾಲ್ ಪಂಜಿಕಲ್ಲು,ಮಧುಸೂದನ್ ಶೆಣೈ, ಸತೀಶ್ ಕುಮಾರ್, ದಾಮೋದರ್ ಮಾಸ್ಟ್ರ್ ಏರ್ಯ, ದೇಗುಲದ ಮೆನೇಜರ್ ಸುಧಾಕರ್ ಉಪಸ್ಥಿತರಿದ್ದರು.

ಈ ವರ್ಷ ಪ್ರಥಮ ಬಾರಿಗೆ ಮೆಂತೆ ಗಂಜಿಯನ್ನು ಮಮತೇಶ್ ಕುಲಾಲ್ ವ್ಯವಸ್ಥೆ ಮಾಡಿದ್ದರು. ಅಸಂಖ್ಯ ಭಕ್ತರು ಕಷಾಯ ಸ್ವೀಕರಿಸಿದರು. ಇದೇ ಸಂಧರ್ಭದಲ್ಲಿ ಪ್ರತೀ ವರ್ಷ ಕಷಾಯ ತಯಾರಿಸುವ ಶ್ರೀ ಉದಯ ಕುಮಾರ್ ಭಟ್ ಕಂದೂರು ಮತ್ತು ಪಾಲೆದ ಕೆತ್ತೆ ಸಂಗ್ರಹಿಸಿ ತಂದು ಸಹಕರಿಸುವ ಆನಂದ ಪೂಜಾರಿ ಪಂಜಿಕಲ್ಲು ಮತ್ತು ಲೋಕೇಶ್ ಪೂಜಾರಿ ಪಂಜಿಕಲ್ಲು ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ತುಳುಕೂಟ ಬಂಟ್ವಾಳದ ಕಾರ್ಯದರ್ಶಿ ಎಚ್ಕೆ ನಯನಾಡು ಸ್ವಾಗತಿಸಿ ವಂದಿಸಿದರು.

