ತೆರೆದ ಬಾವಿಗೆ ಬಿದ್ದು ಇಬ್ಬರು ಬಾಲಕಿಯರ ದಾರುಣ ಸಾವು; ತಂದೆಗಾಗಿ ಶೋಧ

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆಯಲ್ಲಿ ಇಬ್ಬರು ಮಕ್ಕಳು ಕಾಲು ಜಾರಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತರನ್ನು 9ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ಹಾಗೂ ರಕ್ಷಿತಾ ಎಂದು ಗುರುತಿಸಲಾಗಿದೆ. ಇಬ್ಬರೂ ಬಾವಿಗೆ ಬಿದ್ದ ಘಟನೆ ನಿನ್ನೆ ನಡೆದಿದ್ದು, ತಡರಾತ್ರಿ ಮಕ್ಕಳ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ.

ಮಕ್ಕಳನ್ನು ರಕ್ಷಿಸಲು ಅವರ ತಂದೆ ಸಾಬಣ್ಣ (40) ಕೂಡ ಬಾವಿಗೆ ಜಿಗಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಾಬಣ್ಣ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಘಟನೆಯ ಕುರಿತು ನಿಡಗುಂದಿ ಪೊಲೀಸರು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

SHARE
Loading spinner

One thought on “ತೆರೆದ ಬಾವಿಗೆ ಬಿದ್ದು ಇಬ್ಬರು ಬಾಲಕಿಯರ ದಾರುಣ ಸಾವು; ತಂದೆಗಾಗಿ ಶೋಧ”

  1. [8848]okok লগইন এবং অ্যাপ ডাউনলোড | সেরা অনলাইন স্লট গেমস,okok লগইন করুন এবং বিকাশ দিয়ে ক্যাসিনো ডিপোজিট করে লাইভ ক্যাসিনো খেলার নিয়ম জেনে নিন। আজই okok app download করে গেম শুরু করুন। visit: okok

    Loading spinner

Leave a Reply

Your email address will not be published. Required fields are marked *

error: Content is protected !!