ವಿಶ್ವ ರಾಮಕ್ಷತ್ರಿಯ ಮಹಾಸಂಘ (ರಿ )ಕುಂದಾಪುರ ಹೊಸನಗರದಲ್ಲಿ ರಾಮಕ್ಷತ್ರಿಯ ವೃತ್ತಿಪರರ ಸಮಾವೇಶದ ಪೂರ್ವಭಾವಿ ಸಭೆ ಯಶಸ್ವಿ

ವಿಶ್ವ ರಾಮಕ್ಷತ್ರಿಯ ಮಹಾಸಂಘ (ರಿ )ಕುಂದಾಪುರ ಇದರ ಆಶ್ರಯದಲ್ಲಿ ಸಮಸ್ತ ರಾಮಕ್ಷತ್ರಿಯ ಸಮಾಜದ ಒಗ್ಗೂಡುವಿಕೆಯಿಂದ ರಾಷ್ಟ್ರಮಟ್ಟದ ವ್ಯಾಪ್ತಿಯಲ್ಲಿ ವೃತ್ತಿಪರರ ಬೃಹತ್ ಸಮಾವೇಶವನ್ನು ಉಡುಪಿ ಜಿಲ್ಲೆ ಯ ಬ್ರಹ್ಮಾವರದ ದೇವಕಿ ಕೃಷ್ಣ ಕನ್ವೆನ್ಷನ್ ಸಭಾಂಗಣದಲ್ಲಿ 2026 ಡಿಸೆಂಬರ್ 20 ರಂದು ಆಯೋಜಿಸಲಾಗಿದೆ.

ಕರ್ನಾಟಕ ಕೇರಳ ಮಹಾರಾಷ್ಟ್ರ ಹಾಗೂ ಗಲ್ಫ್ ರಾಷ್ಟ್ರದ ದುಬೈ, ಶಾರ್ಜ್ ,ಕುವೈಟ್ ನ್ನು ಒಳಗೊಂಡ ಎಲ್ಲಾ ರಾಜ್ಯ ಜಿಲ್ಲಾ ಕೇಂದ್ರಗಳಲ್ಲಿ ರಾಮಕ್ಷತ್ರಿಯ ಸಮಾಜದ ವೈದ್ಯರು, ಇಂಜಿನಿಯರ್, ನ್ಯಾಯವಾದಿಗಳು ಚಾರ್ಟೆಡ್ ಅಕೌಂಟೆಂಟ್ ಹಾಗೂ ಉನ್ನತ ವ್ಯಾಸಂಗವನ್ನು ಪಡೆದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಗೈದ ಸಂಪನ್ಮೂಲ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ಅವರೊಂದಿಗೆ ಚಿಂತನ ಮಂಥನ ನಡೆಸುವ ಉದ್ದೇಶದಿಂದ ರಾಮಕ್ಷತ್ರಿಯ ವೃತ್ತಿಪರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆಯೆಂದು ವಿಶ್ವರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರು ಎಚ್. ಆರ್. ಶಶಿಧರ್ ನಾಯ್ಕ್ ಹೊಸನಗರ ಹೇಳಿದರು. ಅವರು ಹೊಸನಗರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಕೋಟೆಗಾರ್ ರಾಮಕ್ಷತ್ರಿಯ ಸಂಘದ ಆಶ್ರಯ ದಲ್ಲಿ ನಡೆದ ರಾಮಕ್ಷತ್ರಿಯ ವೃತ್ತಿಪರರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವರಾಮಕ್ಷತ್ರಿಯ ಮಹಾಸಂಘದ ಪ್ರಧಾನಕಾರ್ಯದರ್ಶಿ ಶ್ರೀಧರ್ ಪಿ. ಎಸ್. ಕಳೆದ ಮೂರು ದಶಕಗಳಿಂದ ಸಂಘ ನಡೆದು ಬಂದ ದಾರಿ ಕುರಿತು ಪ್ರಾಸ್ತಾವಿಸಿ ಸ್ವಾಗತಿಸಿದರು

ಎಸ್. ಜಿ. ಶೇರುಗಾರ ಬೃಂದಾವನ ಪ್ರವೀಣ್, ರಾಧಾಕೃಷ್ಣ ನಾಯ್ಕ್, ವಿಜೇಂದ್ರ, ಅನಿಲ್ ಕುಮಾರ್, ಭರತ್ ಗೋಪಾಲ್, ಅಕ್ಷಯ, ಅಶೋಕ್, ದೀಕ್ಷಿತ್, ನಾಗೇಂದ್ರ, ಪ್ರಕಾಶ ಶೇರುಗಾರ, ಶ್ರೀದೇವಿ,ವಸಂತಿ, ರಾಮರಾಜ್ ವೆಂಕಟೇಶ್ ಕೆ. ಜಿ, ಹಾಗೂ ಸಮಾಜದ ಹಿರಿಯರು ಗಣ್ಯರು ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹನೀಯರು ಮಹಿಳೆಯರು ಸಲಹೆ ಸೂಚನೆ ಗಳನ್ನು ಶಿವಮೊಗ್ಗ,ಕೊಪ್ಪ, ಚಿಕ್ಕ ಮಗಳೂರು ಹೊಸನಗರ ಪ್ರದೇಶಗಳಿಂದ ಬೃಹತ್ ಸಂಖ್ಯೆಯಲ್ಲಿ ಪ್ರತಿನಿಧಿಗಳು ಪಾಲ್ಗೊಳಲಿದ್ದಾರೆ. ವಿಶ್ವರಾಮಕ್ಷತ್ರಿಯ ಮಹಾಸಂಘ ದ ಉಪಾಧ್ಯಕ್ಷ ಕೆ. ನಾಗರಾಜ್ ರಾವ್ ಕಾಮಧೇನು, ರಾಮಕ್ಷತ್ರಿಯ ವೃತ್ತಿಪರರ ಸಮಾವೇಶ ಸಮಿತಿಯ ಅಧ್ಯಕ್ಷ ಅಶೋಕ್ ಬೆಟ್ಟಿನ್, ಕಾರ್ಯದರ್ಶಿ ಡಿ. ಸತೀಶ್, ಸೂರ್ಯಕಾಂತ್, ಜಿ. ಆರ್. ಪ್ರಕಾಶ್, ಸತೀಶ್ ಕಾವೇರಿ, ಪ್ರವೀಣ್ ಕುಮಾರ್, ಕೆ. ಜಿ ನಾಗೇಶ್, ಎಚ್. ಶ್ರೀನಿವಾಸ್ ನೋಂದಣಿ ಸಮಿತಿಯ ರಾಧಾಕೃಷ್ಣ ನಾಯಕ್ ಅನಿಲ್ ಕುಮಾರ್ ಮುಂತಾದ ಅನೇಕ ವಿಶೇಷ ಗಣ್ಯರು ಭಾಗವಹಿಸಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!