ಇವತ್ತಿನ ಕರ್ನಾಟಕ ರಾಜ್ಯ ಹವಾಮಾನ ಮುನ್ಸೂಚನೆ

ಕರಾವಳಿ ಉ. ಒಳನಾಡಿನಲ್ಲಿ ನಿನ್ನೆ ಬಿಸಿಲಿನ ವಾತಾವರಣ – ಬಹುತೇಕ ಒಣಹವೆ ಇತ್ತು. ಕೊಡಗಿನ ಕೆಲವೆಡೆ ಸಾಮಾನ್ಯ ಮಳೆಯಾಗಿದ್ದು ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು – ಗ್ರಾಮಾಂತರ, ರಾಮನಗರ, ಚಾಮರಾಜನಗರ ಮೈಸೂರು ಮಂಡ್ಯ ತುಮಕೂರು ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಕೂಡ್ಲೂರಿನಲ್ಲಿ 145.50mm ಭಾರೀ ಮಳೆಯಾಗಿದೆ.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ. ದ.ಕ. ಉಡುಪಿಯ ಸುಳ್ಯ ಕಡಬ ಪುತ್ತೂರು ಬೆಳ್ತಂಗಡಿ ಕಾರ್ಕಳ ಹೆಬ್ರಿ ಕುಂದಾಪುರ ತಾಲ್ಲೂಕುಗಳ ಕೆಲವೆಡೆ ತುಂತುರು – ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ತಾಲ್ಲೂಕುಗಳಲ್ಲಿ ಕಾಸರಗೋಡು ಉಡುಪಿ ಜಿಲ್ಲೆಗಳಲ್ಲಿ ಸಂಜೆ – ನಾಳೆ ಮುಂಜಾನೆ ಮೋಡದ ವಾತಾವರಣ ಇರಬಹುದು. ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಸೆ 25 ತನಕ ಸಂಜೆ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ.

ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಸಂಜೆ ಗುಡುಗು ಸಹಿತ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಇನ್ನೊಂದು ವಾರ ಮಲೆನಾಡಿನ ಜಿಲ್ಲೆಗಳಲ್ಲಿ ಸಂಜೆ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ.

ದಕ್ಷಿಣ ಒಳನಾಡಿನಲ್ಲಿ ಇವತ್ತು ಮಳೆ ಪ್ರಮಾಣ ಕಡಿಮೆ ಆಗಬಹುದು. ಮೈಸೂರು ಚಾಮರಾಜನಗರ ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಮಂಡ್ಯ ಬೆಂಗಳೂರು – ಗ್ರಾಮಾಂತರ ತುಮಕೂರು ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಸಂಜೆ – ರಾತ್ರಿ ತುಂತುರು – ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ವಾಯುಭಾರಕುಸಿತದ ಪ್ರಭಾವದ ಮಳೆ ಒಂದು ವಾರ ಮುಂದುವರೆಯಲಿದ್ದು ಸೆ 19 ರಿಂದ ದಕ್ಷಿಣ ಒಳನಾಡಿನಲ್ಲಿ ಮತ್ತೆ ಉತ್ತಮ ಮಳೆಯಾಗಬಹುದು

ಉತ್ತರ ಒಳನಾಡಿನಲ್ಲಿ ಇವತ್ತು ಮೋಡ ಬರುವ ಮುನ್ಸೂಚನೆ ಇದೆ. ಬೆಳಗಾವಿ ಧಾರವಾಡ ಗದಗ ಹಾವೇರಿ ಬಾಗಲಕೋಟೆ ಬಿಜಾಪುರ ಕಲ್ಬುರ್ಗಿ ಬೀದರ್ ಯಾದಗಿರಿ ರಾಯಚೂರು ಜಿಲ್ಲೆಗಳಲ್ಲಿ ಸಂಜೆ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಬಹುದು. ಮುಂದಿನ 3-4 ದಿನ ಮಳೆ ಕಡಿಮೆ ಆಗಲಿದ್ದು ಉತ್ತರ ಒಳನಾಡಿನಲ್ಲಿ ಸೆ 18 ರಿಂದ ಗುಡುಗು ಮಳೆಯ ಮುನ್ಸೂಚನೆ ಇದೆ.

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಶ್ರೀಲಂಕಾ ಅಗ್ನೇಯದ ದುರ್ಬಲ ಸೈಕ್ಲೋನಿಕ್ ಸರ್ಕ್ಯುಲೇಷನ್ ಕಾರಣದಿಂದ ತಮಿಳುನಾಡು ಕೇರಳದ ಅಲ್ಲಲ್ಲಿ ಗುಡುಗು ಮಳೆಯಾಗುತ್ತಿದ್ದು ಈ ಟ್ರಫ್ (Trough) ಕರ್ನಾಟಕದ ಉತ್ತರ ಒಳನಾಡಿನ ತನಕ ಮುಂದುವರೆದಿದೆ. ಆದರೇ ಇದು ಶಿಥಿಲ ಆಗಲಿದ್ದು ಸೆಪ್ಟೆಂಬರ್ 19 ಕ್ಕೆ ಮಾಯನ್ಮಾರ್ ಸಮೀಪ ವಾಯುಭಾರಕುಸಿತ ಆಗಿ ಒರಿಸ್ಸಾ ಆಂಧ್ರದತ್ತ ಚಲಿಸುವ ಕಾರಣ
ಕರ್ನಾಟಕದ ದಕ್ಷಿಣ/ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಲೆನಾಡಿನಲ್ಲಿ ಸೆ 19 ರಿಂದ ಉತ್ತಮ ಮಳೆಯ ಮುನ್ಸೂಚನೆ ಇದೆ. ಆದರೇ ಕರಾವಳಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಇರಲಿದ್ದು ಪಶ್ಚಿಮದ ಮೋಡ ಬಂದರೇ ಮಾತ್ರ ಎಲ್ಲಾ ಕಡೆ ಉತ್ತಮ ಮಳೆಯಾಗಬಹುದು.

SHARE
Loading spinner

2 thoughts on “ಇವತ್ತಿನ ಕರ್ನಾಟಕ ರಾಜ್ಯ ಹವಾಮಾನ ಮುನ್ಸೂಚನೆ

Leave a Reply

Your email address will not be published. Required fields are marked *

error: Content is protected !!