ಉಡುಪಿ: ಆಕಾಶದಲ್ಲಿ ಸೂರ್ಯನ ಸುತ್ತ ವೃತ್ತಾಕಾರದ ‘ಸನ್ ಹ್ಯಾಲೋ’; ಗಮನ ಸೆಳೆದ ಅಪರೂಪದ ವಿದ್ಯಮಾನ!

ಉಡುಪಿ: ಆಕಾಶದಲ್ಲಿ ಬುಧವಾರ ಮಧ್ಯಾಹ್ನ ಸೂರ್ಯನ ಸುತ್ತ ವೃತ್ತಾಕಾರದ ಬೆಳಕಿನ ವಲಯವೊಂದು ಕಾಣಿಸಿಕೊಂಡು ಸಾರ್ವಜನಿಕರ ಗಮನ ಸೆಳೆಯಿತು.


ಸೂರ್ಯನ ಸುತ್ತ ಕಾಣಿಸಿಕೊಂಡ ಈ ವೃತ್ತಾಕಾರದ ಪ್ರಕಾಶಮಾನ ವಲಯವನ್ನು ‘ಸನ್ ಹ್ಯಾಲೋ’ (Sun Halo) ಎಂದು ಕರೆಯಲಾಗುತ್ತದೆ. ವಾತಾವರಣದ ಮೇಲ್ಭಾಗದಲ್ಲಿರುವ ಸಣ್ಣ ಹಿಮದ ಸ್ಫಟಿಕಗಳ ಮೂಲಕ ಸೂರ್ಯನ ಬೆಳಕು ವಕ್ರೀಭವನಗೊಂಡು ಈ ರೀತಿಯ ವಲಯ ಸೃಷ್ಟಿಯಾಗುತ್ತದೆ.
ಕೆಲಕಾಲ ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸಿದ ಈ ಅಪರೂಪದ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ಗಳಲ್ಲಿ ಸೆರೆಹಿಡಿದುಕೊಂಡರು. ಆಕಾಶದಲ್ಲಿ ಸೂರ್ಯನ ಸುತ್ತ ದೊಡ್ಡ ವೃತ್ತದಂತೆ ಗೋಚರಿಸಿದ ದೃಶ್ಯ ಕುತೂಹಲಕ್ಕೆ ಕಾರಣವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!