ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಉತ್ತರದ ಆಶ್ರಯದಲ್ಲಿ ರೋಟರಿ ಜಿಲ್ಲೆ 3181ರ ‘ನಮ್ಮ ಹಬ್ಬ–ನಮ್ಮ ಸೇವೆ’ ಜಿಲ್ಲಾ ಯೋಜನೆಯ ಅಂಗವಾಗಿ ಆವಿಷ್ಕಾರ್ ಯೋಗ ಮಂಗಳೂರು ಸಹಯೋಗದಲ್ಲಿ ಸಾರ್ವಜನಿಕರಿಗಾಗಿ ‘ಉಚಿತ ದಸರಾ ಯೋಗ ಸಪ್ತಾಹ’ ಅ.11ರಿಂದ 18ರವರೆಗೆ ನಡೆಯಲಿದೆ.

ಮಣ್ಣಗುಡ್ಡ ರೋಟರಿ ಬಾಲಭವನದಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ 7 ಗಂಟೆಯವರೆಗೆ ಯೋಗ ಶಿಬಿರ ನಡೆಯಲಿದ್ದು, ಅ.11ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ರೋಟರಿ ಸಂಸ್ಥೆಯ ಗೋಪಾಲಕೃಷ್ಣ ಉದ್ಘಾಟಿಸುವರು. ಅ.18ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ರೋಟರಿ ಕ್ಲಬ್ ಉಪಾಧ್ಯಕ್ಷ ಶಿವಪ್ರಸಾದ್ ಕೆ. ತಿಳಿಸಿದ್ದಾರೆ.

ವಿವಿಧ ಯೋಗಾಸನಗಳು, ಪ್ರಾಣಾಯಾಮ, ಮುದ್ರಾ ಹಾಗೂ ಧ್ಯಾನದ ತರಬೇತಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆವಿಷ್ಕಾರ್ ಯೋಗದ ಯೋಗ ಚಿಕಿತ್ಸಕ ಕುಶಾಲಪ್ಪ ಗೌಡ , ಕ್ಲಬ್ ಕೋಶಾಧಿಕಾರಿ ಬಿ. ದಿನೇಶ್, ಸಮುದಾಯ ಸೇವಾ ನಿರ್ದೇಶಕ ಎಂ.ಕೆ. ಸುಬ್ರಾಯ ಪ್ರಭು, ಜಿಲ್ಲಾ ಯೋಗ ಚೇರ್ಮನ್ ಜಿ.ವಿ. ಶೆಟ್ಟಿ ಹಾಗೂ ಶಾಂಭವಿ ಪ್ರಭು ಉಪಸ್ಥಿತರಿದ್ದರು.


