ಉಡುಪಿಯಲ್ಲಿ ಅ.9ರಿಂದ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮೇಳ

ಉಡುಪಿ: ಗುಡಿ ಕೈಗಾರಿಕೆ ಹಾಗೂ ಗೃಹ ಉತ್ಪನ್ನಗಳ ಮಾರಾಟಗಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಉಡುಪಿಯ ಅಜ್ಜರಕಾಡು ಮೈದಾನ ಬಳಿಯ ಟೌನ್‌ಹಾಲ್‌ನಲ್ಲಿ ಅ.9ರಿಂದ 11ರವರೆಗೆ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮೇಳ ಆಯೋಜಿಸಲಾಗಿದೆ ಎಂದು ವಸುದೈವ ಕುಟುಂಬಕಂ ಸಂಸ್ಥೆಯ ಪೂರ್ಣಿಮಾ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಹಲಸು ಹಾಗೂ ಸ್ವದೇಶಿ ಮೇಳಗಳನ್ನು ಆಯೋಜಿಸಿರುವ ಬೆನಕ ಇವೆಂಟ್ಸ್ ಸಹಕಾರದೊಂದಿಗೆ ಮೇಳ ನಡೆಯಲಿದೆ. ಬೆಳಗ್ಗೆ 10ರಿಂದ ರಾತ್ರಿ 9.30ರವರೆಗೆ ಮೇಳ ತೆರೆದಿರಲಿದ್ದು, ಸಂಪೂರ್ಣ ನೈಸರ್ಗಿಕ ಆಹಾರ ಪದಾರ್ಥಗಳನ್ನು ಸ್ಥಳದಲ್ಲೇ ತಯಾರಿಸಿ ನೀಡಲಾಗುವುದು ಎಂದರು.

ಕರಾವಳಿಯ ಭಟ್‌ & ಭಟ್‌, ಕೊಕೊಗುರು, ಆರ್‌ಕೆ ಪಿಕಲ್ಸ್‌, ಕಲ್ಪರಸ ಸೇರಿದಂತೆ ವಿವಿಧ ಸ್ವದೇಶಿ ಉತ್ಪನ್ನಗಳು, ಚೆನ್ನಪಟ್ಟಣದ ಬೊಂಬೆಗಳು, ಇಲ್ಕಲ್‌ ಸೀರೆಗಳು, ಮಕ್ಕಳ ಹಾಗೂ ಹಿರಿಯರ ಸಿದ್ಧ ಉಡುಪುಗಳು, ನಿತ್ಯ ಬಳಕೆಯ ಆಯುರ್ವೇದ ಉತ್ಪನ್ನಗಳು ಸೇರಿದಂತೆ ನೂರಾರು ಮಳಿಗೆಗಳು ಮೇಳದಲ್ಲಿ ಇರಲಿವೆ. ಒಂದೇ ಸೂರಿನಡಿ ವಿವಿಧ ಉತ್ಪನ್ನಗಳ ಖರೀದಿಗೆ ಅವಕಾಶವಿದ್ದು, ಪ್ರವೇಶ ಉಚಿತವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಬಾಲಕೃಷ್ಣ ಎಸ್. ಮುದ್ದೋಡಿ, ಗಣೇಶ್‌ ಶೆಟ್ಟಿ, ಭಾಸ್ಕರ್‌ ಪೂಜಾರಿ, ರಮೇಶ್‌ ತಿಂಗಳಾಯ, ದರ್ಶನ್‌ ಹಾಗೂ ಇತರರು ಉಪಸ್ಥಿತರಿದ್ದರು.

SHARE
Loading spinner

One thought on “ಉಡುಪಿಯಲ್ಲಿ ಅ.9ರಿಂದ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮೇಳ”

Leave a Reply

Your email address will not be published. Required fields are marked *

error: Content is protected !!