ಮೋದಿ ಅವರ 25 ವರ್ಷದ ಜನಸೇವೆಯ ಅಂಗವಾಗಿ ‘ಸೇವಾ ಸಂಕಲ್ಪ’ ಅಭಿಯಾನ

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ 25 ವರ್ಷದ ಸಾರ್ಥಕ ಜನಸೇವೆಯ ಅಂಗವಾಗಿ ​ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ಸೆಂಟ್ರಲ್ ವಾರ್ಡಿನ, ಸೆಂಟ್ರಲ್ ಮಾರ್ಕೆಟ್ ಕಟ್ಟಡದಲ್ಲಿ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಜಿಲ್ಲಾ ಕಾರ್ಯದರ್ಶಿ ಹಾಗೂ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಪೂರ್ಣಿಮಾ ರವರ ನೇತೃತ್ವದಲ್ಲಿ ಏರ್ಪಡಿಸಲಾಯಿತು.

ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ರವರು ಮಾತನಾಡಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಮೋದಿಯವರ ಸಾಧನೆ ಬಿಜೆಪಿ ಕಾರ್ಯಕರ್ತರೆಲ್ಲರಿಗೂ ಮಾದರಿ. ಒಬ್ಬ ಜನಸೇವಕ ಪ್ರಾಮಾಣಿಕನಾಗಿದ್ದಾಗ ದೇಶದ ಜನತೆ ಹೇಗೆ ಬೆಂಬಲ ನೀಡುತ್ತಾರೆ ಎಂಬುದಕ್ಕೆ ಅವರೇ ಸಾಕ್ಷಿ ಎಂದರು.

ಶಾಸಕ ವೇದವ್ಯಾಸ್ ಕಾಮತ್ ರವರು ಮಾತನಾಡಿ, ಮಾನ್ಯ ಪ್ರಧಾನಿಗಳ 25 ವರ್ಷಗಳ ಸಾರ್ವಜನಿಕ ಸೇವೆಗೆ ಸಾಟಿಯಿಲ್ಲ. ಅವರು ದೇಶವಾಸಿಗಳಿಗೆ ನೀಡಿರುವ ಕರೆಯಂತೆ ವಿಕಸಿತ ಭಾರತಕ್ಕಾಗಿ ನಾವೆಲ್ಲರೂ ಧೃಡ ಸಂಕಲ್ಪ ಕೈಗೊಳ್ಳೋಣ ಎಂದರು.

ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಕಾರ್ಯಕ್ರಮದ ಜಿಲ್ಲಾ ಪ್ರಭಾರಿ ಯತೀಶ್ ಆರ್ವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಹಾಗೂ ರಮೇಶ್ ಹೆಗ್ಡೆ, ಶಕ್ತಿಕೇಂದ್ರ ಅಧ್ಯಕ್ಷ ಮುರಳಿಧರ್ ನಾಯಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ವಕ್ತಾರರು ಜೀವನ್, ಹಾಗೂ ಪಕ್ಷದ ಪ್ರಮುಖರಾದ , ಗುರುಚರಣ್, ಪ್ರಮೋದ್ ಆಚಾರ್ಯ, ಪಿ.ಸಿ ಗುರು, ಗಿರೀಶ್ ಪೈ, ಕೃಷ್ಣಾನಂದ ಪೈ, ಪ್ರವೀಣ್ ನಿಡ್ಡೆಲ್, ಎಂ.ಪಿ ಗಣೇಶ್, ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಮೇಲ್ವಿಚಾರಕರಾದ ಪೃಥ್ವಿರಾಜ್, ಡಾಕ್ಟರ್ ಸೌಭಾಗ್ಯ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

One thought on “ಮೋದಿ ಅವರ 25 ವರ್ಷದ ಜನಸೇವೆಯ ಅಂಗವಾಗಿ ‘ಸೇವಾ ಸಂಕಲ್ಪ’ ಅಭಿಯಾನ”

Leave a Reply

Your email address will not be published. Required fields are marked *

error: Content is protected !!