ಕಾಸರಗೋಡು, ತಲಕ್ಕೇರಿ ರೈಲು ನಿಲ್ದಾಣಗಳ ಪಾರ್ಸೆಲ್ ಸೇವೆಗೆ ಜುಲೈ 25ರಿಂದ ತೆರೆ

ಕಾಸರಗೋಡು: ಪರಿಷ್ಕೃತ ರೈಲ್ವೇ ನಿಯಮಾವಳಿಗಳ ಅನ್ವಯ ಕಾಸರಗೋಡು ಹಾಗೂ ತಲಕ್ಕೇರಿ ರೈಲು ನಿಲ್ದಾಣಗಳ ಪಾರ್ಸೆಲ್ ಸೇವೆ ಜುಲೈ 25ರಿಂದ ರದ್ದುಗೊಳ್ಳಲಿದೆ.

ಮಂಗಳೂರು-ಶೋರ್ನೂರು ನಡುವಿನ 307 ಕಿ.ಮೀ ದೂರದಲ್ಲಿ ಇನ್ನುಮುಂದೆ ಮಂಗಳೂರು, ಕಣ್ಣೂರು, ಕೋಝಿಕ್ಕೋಡ್, ತಿರೂರ್ ಮತ್ತು ಶೋರ್ನೂರ್ ನಿಲ್ದಾಣಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಿರಲಿದೆ.

​ಪಾರ್ಸೆಲ್ ಲೋಡಿಂಗ್ ಹಾಗೂ ಅನ್‌ಲೋಡಿಂಗ್‌ಗೆ ರೈಲುಗಳಿಗೆ ಕನಿಷ್ಠ ಐದು ನಿಮಿಷಗಳ ನಿಲುಗಡೆ ಕಡ್ಡಾಯವಾಗಿದ್ದು, ಹೆಚ್ಚಿನ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯಿಲ್ಲದಿರುವುದೇ ಸೇವೆ ಸ್ಥಗಿತಗೊಳ್ಳಲು ಮುಖ್ಯ ಕಾರಣವಾಗಿದೆ.

ಈ ಹಿಂದೆ ಕಾಞಂಗಾಡು ಮತ್ತು ಪಯ್ಯನ್ನೂರು ನಿಲ್ದಾಣಗಳ ಪಾರ್ಸೆಲ್ ಸೇವೆಯನ್ನೂ ಹಿಂಪಡೆಯಲಾಗಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!