ಬಂಟ್ವಾಳ:ಕೂಡಿಬೈಲು ಶ್ರೀ ಮಹಾದೇವಿ ಮಹಮ್ಮಾಯಿ ದೇವಿಯ ಮೂರು ದಿನಗಳ ಜಾತ್ರೋತ್ಸವ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.ದಿವ್ಯ ಸನ್ನಿಧಿಯಲ್ಲಿ ದೇವಪ್ರಾರ್ಥನೆ ಹಾಗೂ ಮಹಾಗಣಪತಿ ಹವನದೊಂದಿಗೆ ಪ್ರಾರಂಭಗೊಂಡು, ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನೆರವೇರಿದ ವಾರ್ಷಿಕ ಜಾತ್ರೋತ್ಸವದಲ್ಲಿ ರಕ್ತೇಶ್ವರಿ ದೈವದ ನೇಮೋತ್ಸವ, ಪಾವನ ವಿಧಿಗಳೊಂದಿಗೆ ಸಂಪನ್ನಗೊಂಡಿತು.
ಶ್ರೀ ದೇವಿಯ ಸನ್ನಿಧಿಯಲ್ಲಿ ಹೂವಿನ ಪೂಜೆ, ಕುಂಕುಮಾರ್ಚನೆ, ನಿತ್ಯ ಬಲಿ, ಮಹಾರಂಗಪೂಜೆ, ದೀಪಾರಾಧನೆ, ಉತ್ಸವಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಅಗ್ನಿಸೇವೆಯಂತಹ ವಿಧಿವಿಧಾನಗಳು ನೆರವೇರಿದವು.