ಕೊಣಾಜೆಯಲ್ಲಿ ಬ್ಯಾರಿ ಜನಪದ–ವಚನ ಸಾಹಿತ್ಯ ಪ್ರಚಾರೋಪನ್ಯಾಸ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ, ನಡುಪದವಿನ ಪಿಎ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ‘ಬ್ಯಾರಿ ಜನಪದ ಮತ್ತು ವಚನ ಸಾಹಿತ್ಯ’ ಕುರಿತ ಪ್ರಚಾರೋಪನ್ಯಾಸ ಕಾರ್ಯಕ್ರಮ ಪೇಸ್ ನಾಲೆಜ್ ಸಿಟಿಯ ಮಲ್ಟಿಪರ್ಪಸ್ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಡಾ. ಧನಂಜಯ ಕುಂಬ್ಳೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಭಾಷೆ, ಸಂಸ್ಕೃತಿ ಮತ್ತು ಜನಾಂಗದ ಕುರಿತ ಸಂಶೋಧನೆಗಳು ನಿರಂತರವಾಗಿರಬೇಕು. ಸಂಶೋಧನೆಗಳು ಏಕಮುಖವಾಗದೆ, ಪ್ರಶ್ನೆ–ಉಪಪ್ರಶ್ನೆಗಳ ಮೂಲಕ ಜ್ಞಾನ ವಿಸ್ತಾರಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಯೆನೆಪೋಯ ಇನ್‌ಸ್ಟಿಟ್ಯೂಟ್‌ನ ಸಹಾಯಕ ಪ್ರಾಧ್ಯಾಪಕ ನಿಯಾಝ್ ಪಿ ಅವರು ‘ಬ್ಯಾರಿ ಜನಪದ ಮತ್ತು ವಚನ ಸಾಹಿತ್ಯ’ ವಿಷಯದ ಕುರಿತು ಉಪನ್ಯಾಸ ನೀಡಿದರು.ಪಿಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ್ರಾಝ್ ಜೆ. ಹಾಸಿಮ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಶರಫುದ್ದೀನ್ ಪಿ.ಕೆ., ಡಾ. ಸಯ್ಯಿದ್ ಅಮೀನ್ ಅಹ್ಮದ್ ಹಾಗೂ ಪ್ರೊ. ಡಾ. ಅಬ್ದುಲ್ ಶರೀಫ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ಯಾರಿ ಅಧ್ಯಯನ ಪೀಠದ ಸದಸ್ಯರಾದ ಖಾಲಿದ್ ತಣ್ಣೀರುಬಾವಿ, ಹಂಝ ಮಲಾರ್, ಮೊಯಿದಿನ್ ಬಾದ್‌ಷಾ ಸಂಬಾರತೋಟ, ಅಖಿಲ ಭಾರತ ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್, ಡಾ. ಇಸ್ಮಾಯೀಲ್ ಎನ್. ಹಾಗೂ ಕನ್ನಡ ಉಪನ್ಯಾಸಕಿ ಸಾರಾ ಮಸ್ಕರುನ್ನಿಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!