ಹೀಗೊಂದು ಪ್ರೇಮ ಪತ್ರ

” ‘ ಸುಮ’ ನ “….. ಐ ಲವ್ ಯು.
‍‌
ಸಾರಿ ಕಣೇ, ನಿನ್ನಲ್ಲಿ ಪರ್ಮಿಶನ್ ಕೇಳ್ದೇನೇ ಬರೆದಿದ್ದೀನಿ. ನಿನಗೆ ಕೋಪ ಬಂದಿದೆ ಅಂತಾನು ಗೊತ್ತು ಯಾಕೆಂದ್ರೆ ನೀನು ನನಗೆ ಕೊಟ್ಟ ಸ್ಥಾನ ಇದಲ್ಲ ಅಲ್ವಾ ?

ಆದ್ರೆ ಪ್ಲೀಸ್….. ದಯವಿಟ್ಟು ಓದುವ ಮುಂಚೆಯೇ ಈ ಪತ್ರವನ್ನು ಹರಿದಾಕ್ಬೇಡ. ತಾಳ್ಮೆಯಿಂದ ನನಗೋಸ್ಕರ ಒಮ್ಮೆ ಈ ಪತ್ರವನ್ನೋದು. ಆಮೇಲೆ ನಿನ್ನಿಷ್ಟ ಕಣೇ….. ಇನ್ನೂ ಹೆಚ್ಚು ಪೀಠಿಕೆ ಹಾಕಲ್ಲ ನಿನ್ನಲ್ಲಿ ಓದುವ ತಾಳ್ಮೆನು ಇಲ್ಲ, ಅದಕ್ಕೆ ನೇರವಾಗಿ ವಿಷಯಕ್ಕೆ ಬರುತ್ತೀನಿ…. ಆಯ್ತಾ ‘ಸುಮ’?


ಪ್ರೇಯಸಿ , ನಾ ಇಷ್ಟೆಲ್ಲಾ ಬರೆಯುತ್ತ ಇದ್ದೀನಿ ಅಂದ್ರೆ ಅದಕ್ಕೆ ಕಾರಣ ನೀನೆ ಕಣೇ. ಹೌದು ನೀನೇ ! …. ನಾನು ನಿನ್ನಲ್ಲಿ ಇಟ್ಟಿರುವ ಹುಚ್ಚು ಪ್ರೀತಿ. ಈ ಪ್ರೀತಿನೇ ನನಗೆ ಇಷ್ಟು ಧೈರ್ಯ ತಂದು ಕೊಟ್ಟಿದ್ದು. ‘ ಪ್ರೀತಿ ,ಈ ಪ್ರೀತಿಯಿಂದ್ಲೆ ಅಲ್ವೇನೆ ಇನ್ನೂ ಈ ಜೀವಸಂಕೋಲೆಗಳು ನಶಿಸಿ ಹೋಗದೆ ಹಾಗೆ ಉಳಿದಿರುವುದು ‘. ಈ ಪ್ರೀತಿ ಬಗ್ಗೆ ಏನಂತ ಹೇಳಲಿ , ಹಾಗಲ್ಲ ಪ್ರೀತಿ ಬಗ್ಗೆ ಏನೇನೋ ಹೇಳಲಿಕ್ಕಾಗೋದಿಲ್ಲ ಅಲ್ವಾ ?

    

ಯಾಕಂದ್ರೆ ,

  “True love is eternal, infinite, and always like       itself.”    
  “Love is a game that two can play and both win.”
  “Love is life. And if you miss love, you miss life.”

ಹೀಗೆಯೆ ಏನೇನೋ…..ಈ ಲವ್ ಎನ್ನುವ ಪದಕ್ಕೆ ಎಷ್ಟೊಂದು ಅರ್ಥ ಅಲ್ವಾ ?

ನನ್ನ ಫೀಲಿಂಗ್ಸ್ ನ ನಿನ್ನಲ್ಲಿ ಹೇಗೆ ಹೇಳ್ಬೇಕು ಅಂತಾನೆ ಗೊತ್ತಾಗ್ತ ಇಲ್ಲ . ನಾನಂತು ಸ್ಪಷ್ಟವಾಗಿದ್ದೀನಿ , ನಾ ನಿನ್ನ ಪ್ರೀತಿಸ್ತಿರೋದು ನಿಜ . ನಿನ್ನ ಮೇಲೆ ಅಟ್ರಾಕ್ಷನ್ ಇರಬಹುದೇನೋ ಅಂತ ಅದೆಷ್ಟೋ ಬಾರಿ ನನ್ನೇ ನಾ ಕೇಳ್ಕೊಂಡಿದ್ದೆ . ಉಹುಂ , ಖಂಡಿತ ಅಟ್ರಾಕ್ಷನ್ ಆಗಿರೋದಕ್ಕೆ ಸಾಧ್ಯ ಇಲ್ಲ . ಯಾಕೆ ಯಾರಮೇಲೂ ಮೂಡದೇ ಇರೋ ಭಾವನೆ ನಿನ್ಮೇಲೆ ? ಕಾಲೇಜ್ ಅಲ್ಲಿ ನಿಂಗಿಂತ ಚೆನ್ನಾಗಿರೋ ಹುಡ್ಗಿರಿದ್ರು ನಿನ್ ಮೇಲಿದ್ದ ಭಾವನೆ ಉಳಿದವರಮೇಲೆ ಯಾಕ್ ಆಗ್ತಿಲ್ಲ ?. ಬೇರೆ ಹುಡ್ಗಿರ್ ಜೊತೆ ನಿರರ್ಗಳವಾಗಿ ಮಾತಾಡೋ ನಂಗೆ ನಿನ್ನಲ್ಲಿ ಯಾಕ್ ಮಾತಾಡೋಕಾಗ್ತಿಲ್ಲ ?

     

ನಿನ್ನ ಸನಿಹ ತಳಮಳ ಏಕೆ ?
ಕಾಣದ ದಿನ ಚಡಪಡಿಕೆ ಏಕೆ ?
ನಗುವ ತರದಿ ಖಚಗುಳಿ ಏಕೆ ?
ಕಣ್ಣೊದ್ದೆಯಾದರೆ ಯಾತನೆ ಏಕೆ ?
ಮಾತನಾದಡೆಯೂ ಭಾವನೆಯ ಹಂಚಿಕೊಂಡಂತೆ ;
ತಿಳಿಯದ ನೋಟ ಪ್ರೀತಿಯ ಉಣಬಡಿಸಿದಂತೆ ;
ಯಾಕೆ ಹೀಗೆ?

ಯಾಕಂದ್ರೆ , ನನ್ನದು ರೀಲ್ ಅಲ್ಲ ಕಣೇ ….. ರಿಯ ಲ್ ಲವ್ . ಅದಕ್ಕೆ ಅನ್ಸುತ್ತೆ , ಈ ರಿಯಲ್ ಲವ್ ಗೆ ನೇರವಾಗಿ ಬಂದು ನಿನ್ನನ್ನೇ ಪ್ರೀತಿಸ್ತಿದ್ದೀನಿ ಅಂತ ಹೇಳೋ ಧೈರ್ಯ ಇರಲ್ಲ . ” ಪ್ರೀತಿ ತಡವರಿಸುತ್ತೆ , ಕಾಯುತ್ತೆ , ತನ್ನಷ್ಟಕ್ಕೆ ವೇದನೆಪಡುತ್ತೆ . ಹೀಗೆ ವೇದನೆಯಲ್ಲೂ ಕೂಡ ಸುಖಪಡುತ್ತೆ “. ಅದೇ ಅಲ್ವೇನೆ ನಿಜವಾದ ಪ್ರೀತಿ ?

ಪ್ಲೀಸ್ ಕಣೇ , ಈ ಪ್ರೀತಿ ಅನ್ನೋದು ನದಿ ತರಹ ಯಾವಾಗಲೂ ಹರೀತಾನೆ ಇರುತ್ತೆ . ಈ ಪ್ರೀತಿ ಅನ್ನೋ ನದಿಗೆ ಈಜು ಬಾರದ ನಾನಂತು ಬಿದ್ದಾಗಿದೆ . ನೀನು ಅಂಬಿಗನಾಗಿ ಬಂದು ನನ್ನನ್ನು ಕಾಪಾಡ್ತೀಯೋ ? ಅಥವಾ ತಿರಸ್ಕಾರದ ಸುಳಿಯಂತೆ ನನ್ನನ್ನು ಮುಳುಗಿಸ್ತಿಯೋ ? ನಿನಗೆ ಬಿಟ್ಟಿದ್ದೀನಿ ಕಣೇ


” ಇದು ಕೇವಲ ಪ್ರೇಯಸಿಗಾಗಿ , ನಿರೀಕ್ಷೆಯ ಪ್ರೇಮಿಯಿಂದ ಪ್ರೇಯಸಿಗೆ ” – ಹೀಗೊಂದು ಪ್ರೇಮಪತ್ರ .

‘ ಸುಮ ‘ , ಪ್ಲೀಸ್ ನಂಗೊಂದು ಹೆಲ್ಪ್ ಮಾಡ್ತಿಯಾ ? ಈ ಪತ್ರವನ್ನು ನೀನು ಓದಿದ ನಂತರ ನಿನ್ನ ಲವ್ಲಿ ಫ್ರೆಂಡ್ ‘ ಸುಮನ’ ಳಿಗೆ ಕೊಡು ಆಯ್ತಾ . ಕೊಡ್ತೀಯಾ ತಾನೇ ?. Yes , ಕೊಡ್ಲೇಬೇಕು . ನಾನು ‘ಸುಮನ’ ಳನ್ನ ಪ್ರೀತಿಸ್ತಿರುವ ವಿಷಯ ನಾನೆ ನೇರವಾಗಿ ಹೇಳಬಹುದು . ಆದ್ರೂ , ಏನೋ ಒಂಥರಾ …..ಹೇಳ್ಬೇಕು ಅಂದ್ಕೋತೀನಿ …..ಆಗ್ತಾನೆ ಇಲ್ಲ ಕಣೇ .

 
        


          

Once Again Please ಸುಮ , ನಾನು ನಿನ್ನನ್ನೇ ನಂಬ್ಕೊಂಡಿದ್ದೀನಿ . ನೀನೇ ತಾನೇ ನನಗೆ ಗೆಳತೀ – ತಂಗಿ – ಬಂಧು ಏಲ್ಲವೂ ….. ಹಾಗಾದ್ರೆ , ಹೆಲ್ಪ್ ಮಾಡ್ತಿಯಾ ಅಲ್ವಾ ? ಮಾಡ್ತಿಯಾ , ಮಾಡ್ಲೆ ಬೇಕು .

ಏನು ದಬಾಯ್ಸ್ತಿದ್ದೀನಿ ಅಂದ್ಕೊಂಡ್ಯಾ ? ಇಲ್ಲ ಕಣೇ…. ಆದ್ರೂ , ಯಾಕ್ ಹೇಳ್ದೆ ಗೊತ್ತ ? ರಕ್ಷಾ ಬಂಧನದ ದಿನ ನೀನೆ ಅಲ್ವ ನಂಗೆ ರಕ್ಷಾ ಬಂಧನ ಕಟ್ಟಿ , ಅಣ್ಣಾ ……ಯಾವ್ ಕೆಲಸ ಆದ್ರೂನು ಸರಿನೆ ಹೇಳಿದಾಕ್ಷಣ ಮಾಡ್ತೀನಿ ಅಂತ ವಚನ ಕೊಟ್ಟಿದ್ದು . ಮರೆತಿಲ್ಲ ನಾನು . ನಿನಗೂ ನೆನಪಿರಬೇಕಲ್ವಾ ? ಹಾಗಾದ್ರೆ , ಪ್ಲೀಸ್ ಹೆಲ್ಪ್ ಮೀ ಸುಮ .

       

ರಕ್ಷಾ ಬಂಧನದ ದಿನ ನನ್ನ ನೀ ಅಣ್ಣನಾಗಿ ಮಾಡ್ಕೊಂಡ ತಪ್ಪಿಗಾಗಿ , ನಿನಗೆ ಈ ಶಿಕ್ಷೆ ಅಂದ್ಕೊಂಡ್ರು ಪರವಾಗಿಲ್ಲ . ತಂಗಿ ‘ಸುಮ’ , ನಿನ್ನ ಪ್ರೀಯ ಗೆಳತಿ ‘ಸುಮನ’ ಳನ್ನು ಓಲೈಸುವ ಜವಾಬ್ದಾರಿ ನಿನ್ನ ಮೇಲಿದೆ .

……………….ಇಂತೀ ನಿರೀಕ್ಷೆಯ ಪ್ರೇಮಿ .

✍️. ರಾಘವೇಂದ್ರ ನಾರಾಯಣ ದೇವಾಡಿಗ
ಕಾಳಿಕಾ ನಿಲಯ,ಉಳ್ಳೂರು-೧೧
ಮೂಡುಮಠ, ಬೈಂದೂರು – 576219
+91 9743059880
k.raghu794@gmail.com

SHARE
Loading spinner

Leave a Reply

Your email address will not be published. Required fields are marked *

error: Content is protected !!