ಬಂಟ್ವಾಳ: ಶ್ರೀರಾಮ ನವಮಿ ಪ್ರಯುಕ್ತ ಶ್ರೀರಾಮ ಭಜನಾ ಮಂದಿರ ಟ್ರಸ್ಟ್ (ರಿ.) ಮತ್ತು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ, ಶಿವಾಜಿನಗರ–ಕಾಮಾಜೆ, ದೈಪಲ ವತಿಯಿಂದ 15ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀರಾಮ ತಾರಕ ಯಾಗ ಮಾ. 27ರಂದು ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ ಕೇಶವ ದೈಪಲ ತಿಳಿಸಿದ್ದಾರೆ.
ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಮೂರ್ತಿ ಶ್ರೀ ರಾಜಗೋಪಾಲಾಚಾರ್ಯ ಅವರ ನೇತೃತ್ವದಲ್ಲಿ ಒಂದು ಲಕ್ಷ ಶ್ರೀರಾಮ ತಾರಕ ಜಪ ನಡೆಯಲಿದೆ ಎಂದರು. ರಾತ್ರಿ 8 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಡಾ. ಪ್ರಭಾಕರ್ ಭಟ್, ಬ್ರಿಜೇಶ್ ಚೌಟ, ರಾಜೇಶ್ ನಾಯ್ಕ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರಿಗೆ ವಿಶೇಷ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದರು.
ಕಳೆದ 15 ವರ್ಷಗಳಿಂದ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಭಕ್ತರನ್ನು ಆಕರ್ಷಿಸುತ್ತಿವೆ ಎಂದರು. ಮುಂದಿನ ದಿನಗಳಲ್ಲಿ ಮಂದಿರದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳುವ ಯೋಜನೆ ಇದ್ದು, ಸೀತಾಮಾತ ಕಲ್ಯಾಣ ಮಂಟಪ ನಿರ್ಮಾಣದ ದೊಡ್ಡ ಯೋಜನೆಯನ್ನೂ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚಂದಪ್ಪ ಮೇಸ್ತ್ರಿ, ರಾಜೀವ ಪಲ್ಕೆ, ಹರೀಶ್ ದೈಪಲ, ನಾರಾಯಣ ಮಾಸ್ಟರ್, ವಾಣಿ ಕೇಶವ ದೈಪಲ, ಸುರೇಖ, ಅಶೋಕ್ ಕಾಮಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Alright folks, just wanted to give a shoutout to r86com. Been playing there for a bit now, and gotta say, it’s pretty solid. Good selection of games and payouts are smooth. Definitely worth checking out! r86com
Trying to find qk777gamedownload? Well I have! And gotta say, the download was smooth and I’ve been having a blast. Good times! qk777gamedownload
Feeling lucky? I was! Trying out luckynumber1.net and had a decent run. Not saying it’s a sure thing but hey, everyone deserves a little luck! luckynumber1