ಮಂಗಳೂರು:ಮಾರ್ಚ್ 27 ಮತ್ತು 28ರಂದು ಬಂಟ್ವಾಳ ಬಿಸಿ ರೋಡ್ನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿರುವ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಚಿದಂಬರ ಬೈಕಂಪಾಡಿ ಇವರಿಗೆ ಮಂಗಳೂರು ಪ್ರೆಸ್ ಕ್ಲಬ್ , , ದ.ಕ.ಜಿಲ್ಲಾ ಕಾರ್ಯನಿರತ. ಪತ್ರಕರ್ತರ ಸಂಘ , ಪತ್ರಿಕಾ ಭವನ ಟ್ರಸ್ಟ್ ಜಂಟಿಯಾಗಿ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು . ಗೌರವಾರ್ಪಣೆಯನ್ನು ಹಿರಿಯ ಪತ್ರಕರ್ತರಾದ ಕೆ.ಆನಂದ ಶೆಟ್ಟಿ ನೆರವೇರಿಸಿದರು .
ನಗರದ ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು , ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸುವುದು ಈ ಭಾಗದ ಎಲ್ಲಾ ಪತ್ರಕರ್ತರಿಗೆ ಸಂದ ಗೌರವವಾಗಿದೆ . ನನಗೆ ಈ ಗೌರವ ಸಿಗುತ್ತೆ ಅಂತ ಅಂಧುಕೊಂಡಿರಲಿಲ್ಲ . ಪತ್ರಿಕೋದ್ಯಮಕ್ಕೆ ಸಮಂಧಿಸಿದ ಗೌರವಗಳು ಈ ಮೊದಲು ಸಿಕ್ಕಿತ್ತು ಆದರೆ ಇಂದು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಪಟ್ಟವನ್ನು ಕನಸು ನನಸಿನಲ್ಲಿ ನೆನೆಯುವುದು ಅಸಾಧ್ಯವಾಗಿದೆ ಎಂದರು .
ಈ ಜಿಲ್ಲೆಯ ಸಮಗ್ರ ಸಾಹಿತ್ಯದ ಹಿನ್ನಲೆಯಲ್ಲಿ ನನ್ನನು ಆಯ್ಕೆ ಮಾಡಿದ್ದಾರೆ ಇದನ್ನು ಕೃತಜ್ಞನಾಗಿ ಸ್ವೀಕರಿಸುತ್ತೇನೆ . ಪತ್ರಕರ್ತನಾಗಿ ದುಡಿದ ಅನುಭವ , ಕವಿಯಾಗಿ ಸಾಹಿತಿಯಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದೇನೆ. ಪತ್ರಕರ್ತನಿಗೂ ಮೊದಲು ನಾನು ಸಾಹಿತಿಯಾಗಿದೆ . ನನ್ನ ಸಾಹಿತ್ಯ ಜ್ಞಾನವು ಮುಂದೆ ಪತ್ರಕರ್ತನಾಗಲು ಸಹಕಾರಿ ಆಯಿತು ಎಂದು ತಮ್ಮ ವಿಚಾರವನ್ನು ಹಂಚಿಕೊಂಡರು .
ಈ ಸಂದರ್ಭದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ , ದ.ಕ.ಜಿಲ್ಲಾ ಕಾರ್ಯನಿರತ. ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್.ಬಿ.ಎನ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು , ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ , , ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು .