ಭಾರತೀಯ ರೈಲ್ವೆ, ಸೌತ್ ಸ್ಟಾರ್ ರೈಲ್ ಇಂಡಿಯಾ ಹಾಗೂ ಟೂರ್ ಟೈಮ್ಸ್ ಸಹಯೋಗದಲ್ಲಿ ‘ಭಾರತ್ ಗೌರವ್’ ರೈಲು ಯೋಜನೆಯಡಿ ಈಶಾನ್ಯ ಭಾರತಕ್ಕೆ ಬೇಸಿಗೆ ವಿಶೇಷ ಪ್ರವಾಸಿ ರೈಲನ್ನು ಘೋಷಿಸಲಾಗಿದೆ. ಈ ವಿಶೇಷ ರೈಲು ಏಪ್ರಿಲ್ 25ರಂದು ಪ್ರಯಾಣ ಆರಂಭಿಸಲಿದ್ದು, 14 ದಿನಗಳ ಕಾಲ ನಡೆಯುವ ಈ ಪ್ರವಾಸದಲ್ಲಿ ವಿಶಾಖಪಟ್ಟಣಂ ಮತ್ತು ಕೋಲ್ಕತ್ತಾ ಸೇರಿದಂತೆ ಪ್ರಮುಖ ತಾಣಗಳನ್ನು ಒಳಗೊಂಡ ಮೂರು ವಿಭಿನ್ನ ಪ್ಯಾಕೇಜ್ಗಳನ್ನು ಒಳಗೊಂಡಿದೆ ಎಂದು ರೈಲ್ವೆ ಭಾರತ್ ಗೌರವ್ ರೈಲು ಸೌತ್ಸ್ಟಾರ್ ರೈಲು & ಟೂರ್ ಟೈಮ್ ನಿರ್ದೇಶಕ ವಿಘ್ನೇಶ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ , ಪ್ರವಾಸದ ಮೊದಲ ಪ್ಯಾಕೇಜ್ನಲ್ಲಿ ಗ್ಯಾಂಗ್ಟಾಕ್ ಮತ್ತು ಡಾರ್ಜಿಲಿಂಗ್ ತಾಣಗಳಿಗೆ ಭೇಟಿ ನೀಡುವ ಅವಕಾಶವಿದೆ. ಎರಡನೇ ಪ್ಯಾಕೇಜ್ನಲ್ಲಿ ಗುವಾಹಟಿ, ಶಿಲ್ಲಾಂಗ್, ಚಿರಾಪುಂಜಿ, ಮಾವ್ಲಿನ್ನಾಂಗ್ ಮತ್ತು ದಾವ್ಕಿ ಮೊದಲಾದ ಈಶಾನ್ಯ ಭಾರತದ ಸುಂದರ ಸ್ಥಳಗಳನ್ನು ಒಳಗೊಂಡಿದೆ. ಮೂರನೇ ಪ್ಯಾಕೇಜ್ ಭೂತಾನ್ ದೇಶಕ್ಕೆ ಅಂತಾರಾಷ್ಟ್ರೀಯ ಪ್ರವಾಸವಾಗಿದ್ದು, ಥಿಂಪು, ಪುನಾಖಾ, ಪಾರೋ ಹಾಗೂ ಚೆಲೆ ಲಾ ಪಾಸ್ ತಾಣಗಳನ್ನು ಒಳಗೊಂಡಿದೆ ಎಂದರು .
ಈ ವಿಶೇಷ ಪ್ರವಾಸಿ ರೈಲಿನ ಟಿಕೆಟ್ಗಳನ್ನು ಸಾಮಾನ್ಯ ರೈಲುಗಳಂತೆ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಬುಕ್ ಮಾಡಲು ಅವಕಾಶವಿಲ್ಲ. ಟೂರ್ ಟೈಮ್ಸ್ ಅನ್ನು ನೇರವಾಗಿ 7305858585 ಕ್ಕೆ ಸಂಪರ್ಕಿಸುವ ಮೂಲಕ ಅಥವಾ www.tourtimes.in ಗೆ ಭೇಟಿ ನೀಡುವ ಮೂಲಕ ಮಾತ್ರ ಕಾಯ್ದಿರಿಸಬಹುದಾಗಿದೆ.
ಈ ರೈಲು ಮಧುರೈಯಿಂದ ಹೊರಡಲಿದ್ದು, ಮಂಗಳೂರಿನಿಂದ ಪ್ರಯಾಣಿಸುವವರಿಗೆ ಪಾಲಕ್ಕಾಡ್, ಒತ್ತಪಾಲಂ ಅಥವಾ ತ್ರಿಶೂರ್ ತನಕ ಪೂರಕ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ .ಪ್ರವಾಸದಲ್ಲಿ ಮನರಂಜನಾ ವ್ಯವಸ್ಥೆ, ಪ್ರವಾಸ ಮಾರ್ಗದರ್ಶಕರು, ವಿಶೇಷ ಕೋಚ್ ಭದ್ರತೆ, ರೈಲಿನೊಳಗೆ ಹಾಗೂ ಹೊರಗೆ ಅನಿಯಮಿತ ದಕ್ಷಿಣ ಭಾರತೀಯ ಊಟ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಒಂದು ಫಸ್ಟ್ ಎಸಿ, ಮೂರು 2ಎಸಿ, ಐದು 3ಎಸಿ, ಎರಡು ಸ್ಲೀಪರ್ ಕ್ಲಾಸ್ ಹಾಗೂ ಪ್ಯಾಂಟ್ರಿ ಕಾರ್ ಹೊಂದಿರುವ ಈ ರೈಲಿನಲ್ಲಿ ಒಟ್ಟು 650 ಪ್ರಯಾಣಿಕರಿಗೆ ಅವಕಾಶವಿದೆ ಎಂದರು
ಸೌತ್ ಸ್ಟಾರ್ ರೈಲ್ ಮತ್ತು ಟೂರ್ ಟೈಮ್ಸ್ ಸಂಸ್ಥೆಗಳು ಈಗಾಗಲೇ 53 ಪ್ರಯಾಣಗಳನ್ನು ಯಶಸ್ವಿಯಾಗಿ ನಡೆಸಿದ್ದು, ಒಟ್ಟು 2,90,229 ರೈಲು ಕಿಲೋಮೀಟರ್ಗಳನ್ನು ಕ್ರಮಿಸಿವೆ. ಸುಮಾರು 24,402 ಯಾತ್ರಿಕರು ಮತ್ತು ಪ್ರವಾಸಿಗರಿಗೆ ಸೇವೆ ಒದಗಿಸಲಾಗಿದೆ ಎಂದರು .
ಹೋಟೆಲ್ ವಾಸ್ತವ್ಯ, ಸ್ಥಳೀಯ ಸಂಚಾರ, ದೃಶ್ಯ ವೀಕ್ಷಣೆ ಹಾಗೂ ಪ್ರಯಾಣ ವಿಮೆ ಈ ಪ್ಯಾಕೇಜ್ನಲ್ಲಿ ಒಳಗೊಂಡಿದ್ದು, ಪ್ರವಾಸಿಗರು ಎಲ್ಟಿಸಿ/ಎಲ್ಎಫ್ಸಿ ಸೌಲಭ್ಯಗಳಿದೆ ಎಂದರು .