ಗಾಂಜಾ ಸೇವಿಸಿದ ಐದು ನರ್ಸಿಂಗ್ ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಮಂಗಳೂರು ನಗರದ ನರ್ಸಿಂಗ್ ಕಾಲೇಜ್ ವೊಂದರ ವಿದ್ಯಾರ್ಥಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೇರಳದ ಅಜಿಲ್ ನಾಜಿ, ಸಾಜಿಲ್ ಅಬ್ದುಲ್ ಸಮದ್, ಅಬು ಥಾಮಸ್ ಹಾಗೂ ಮೆಲ್ಮನ್ ಟೆಲಿಸ್, ಅಶ್ವಿನ್ ಸಾಜಿ ವಿರುದ್ಧ ‌ಕೇಸ್ ದಾಖಲಾಗಿದೆ. ಮಂಗಳೂರು ನಗರದ ಉರ್ವ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ದಿನಾಂಕ 23.03 2026 ರಂದು ಐದು ಮಂದಿ ಯುವಕರು ಚಿಲಿಂಬಿ ಮಲರಾಯ ದೈವಸ್ಥಾನದ ಸಮೀಪವಿರುವ ಸ್ಟ್ರಿಂಗಫೀಲ್ಡ್ ಲೇಔಟ್ ಪ್ರದೇಶದಲ್ಲಿ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡುತ್ತಿರುವುದು ಕಂಡುಬಂದಿದೆ. ಇವರನ್ನು ವಿಚಾರಿಸಿದಾಗ ಇವರು ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಾಗಿದ್ದು, ಐದು ಮಂದಿ ವಿದ್ಯಾರ್ಥಿಗಳು ಸೇರಿಕೊಂಡು ಮಂಗಳೂರು ನಗರದಲ್ಲಿ ಪ್ರತ್ಯೇಕವಾಗಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ವಾಸ್ತವ್ಯವಿರುವುದು ತಿಳಿದುಬಂದಿದೆ. ಇವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಸದ್ರಿ ಯುವಕರು ನಿಷೇಧಿತ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿರುವುದಾಗಿ ದೃಢಪಟ್ಟಿದೆ. ಹೀಗಾಗಿ ಈ ಯುವಕರ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಮೇಲಿನಂತೆ ಪ್ರಕರಣ ದಾಖಲಿಸಲಾಗಿದೆ.


ಈ ಪ್ರಕರಣದಲ್ಲಿ ಆರೋಪಿತರು ಮಂಗಳೂರು ನಗರದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇವರು ಮೂಲತಃ ಕೇರಳ ರಾಜ್ಯದ ನಿವಾಸಿಗಳಾಗಿರುತ್ತಾರೆ, ಈ ಕುರಿತು ಸಂಬಂಧಪಟ್ಟ ಕಾಲೇಜು ಆಡಳಿತ ಮಂಡಳಿಗೆ ವಿದ್ಯಾರ್ಥಿಗಳ ವಿರುದ್ಧ ಅಗತ್ಯ ಸುಧಾರಣಾ ಕ್ರಮ ಕೈಗೊಳ್ಳಲು ಮಾಹಿತಿಯನ್ನು ನೀಡಲಾಗಿದೆ. ಹಾಗೂ ಯುವಕರುಗಳಿಗೆ ಮನೆ ಬಾಡಿಗೆಯನ್ನು ನೀಡುವಾಗ ಯುವಕರುಗಳ ಚಟುವಟಿಕೆಯ ಮೇಲೆ ನಿಗಾ ಇರಿಸಿ ಎಚ್ಚರಿಕೆಯನ್ನು ವಹಿಸಿಕೊಳ್ಳುವಂತೆ ಮನೆ ಮಾಲಿಕರಿಗೆ ಸೂಚಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!