ಮಂಗಳೂರು: ಮಂಗಳೂರು ಜಂಕ್ಷನ್ ಮತ್ತು ಸೂರತ್ ನಡುವಿನ ವಿಶೇಷ ರೈಲು ಸೇವೆಯನ್ನು ಖಾಯಂಗೊಳಿಸಲು ರೈಲ್ವೇ ಸಚಿವಾಲಯ ಒಪ್ಪಿಗೆ ನೀಡಿದೆ. ಈ ನಿರ್ಧಾರದಿಂದ ಪ್ರಯಾಣಿಕರಿಗೆ ದೀರ್ಘಾವಧಿಯ ಅನುಕೂಲ ಸಿಗಲಿದೆ.
ಖಾಯಂ ಸೇವೆಯ ಭಾಗವಾಗಿ ರೈಲಿನ ಸಂಖ್ಯೆಯಲ್ಲಿಯೂ ಬದಲಾವಣೆ ಮಾಡಲಾಗಿದೆ. ನಂ. 19057 ಸೂರತ್–ಮಂಗಳೂರು ಎಕ್ಸ್‌ಪ್ರೆಸ್ ಪ್ರತೀ ಬುಧವಾರ ಮತ್ತು ರವಿವಾರ ರಾತ್ರಿ 7.35ಕ್ಕೆ ಸೂರತ್‌ನಿಂದ ಹೊರಡಲಿದ್ದು, ಗುರುವಾರ ಹಾಗೂ ಸೋಮವಾರ ಮಂಗಳೂರಿಗೆ ತಲುಪಲಿದೆ.
ಅದೇ ರೀತಿಯಾಗಿ, ನಂ. 19058 ಮಂಗಳೂರು–ಸೂರತ್ ಎಕ್ಸ್‌ಪ್ರೆಸ್ ಗುರುವಾರ ಮತ್ತು ಸೋಮವಾರ ಮಂಗಳೂರಿನಿಂದ ಹೊರಟು, ಶುಕ್ರವಾರ ಹಾಗೂ ಮಂಗಳವಾರ ಸೂರತ್ ತಲುಪಲಿದೆ.
ಈ ರೈಲು ಉದ್ಘಾ, ವಲ್ಸಾಡ್, ವಾಪಿ, ಪಾಲ್ಗರ್, ವಸಾಯ್ ರೋಡ್, ಭಿವಂಡಿ ರೋಡ್, ಪನ್ವೆಲ್, ಪೆನ್, ರೋಹ, ಮನಗಾಂವ್, ಖೇಡ್, ಚಿಪ್ಲುನ್, ಸಾವರ್ದಾ, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಾಪುರ್ ರೋಡ್, ವೈಭವವಾಡಿ ರೋಡ್, ಕಂಕಾವಲಿ, ಕುಡಾಳ್, ಸಾವಂತವಾಡಿ ರೋಡ್, ತಿವಿಂ, ಕರ್ಮಾಲಿ, ಮಡಗಾಂವ್, ಕಾನಕೋನ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್-ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.