ಮಕ್ಕಳೇ ಫನ್ ಸೈಕಲ್ ರೈಡ್ಗೆ ರೆಡಿಯಾಗಿ ಮಕ್ಕಳೇ …..! ಬರ್ತಿದ್ದೆ ಏಪ್ರಿಲ್ 6 ರಂದು ಪಿಲಿಕುಳ ಹೆರಿಟೇಜ್ ಹೌಸ್‌ನಲ್ಲಿ ಫನ್ ಸೈಕಲ್ ರೈಡ್ !

ಮಂಗಳೂರು: ಇಂದಿನ ಜನಾಂಗದ ಮಕ್ಕಳು ಹೆಚ್ಚಾಗಿ ಮೊಬೈಲ್ ಗುಂಗಲ್ಲೇ ಕಳೆಯುತ್ತಾರೆ ಅವರಿಗೆ ದೈಹಿಕ ಕ್ಷಮತೆ ಕಡಿಮೆ ಇರುತ್ತದೆ . ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ ಅಧಿಕವಾಗಬೇಕು ಎನ್ನುವ ನಿಟ್ಟಿನಲ್ಲಿ ಯುರೋಕಿಡ್ಸ್ ಕೊಡಿಯಾಲ್ ಬೈಲ್ ಸಂಸ್ಥೆ, ಮಂಗಳೂರು ಸೈಕಲ್ ಕೋ ಹಾಗೂ ಇನ್‌ಸ್ಟಾಗ್ರಾಂ ಸೈಕ್ಲಿಂಗ್ ಇನ್‌ಫ್ಲೂಯೆನ್ಸರ್ ಭಟ್ರು ಅವರ ಸಹಯೋಗದಲ್ಲಿ ಏಪ್ರಿಲ್ 6 ರಂದು ಬೆಳಿಗ್ಗೆ 9.00 ರಿಂದ 11.00 ಗಂಟೆಯವರೆಗೆ ಪಿಲಿಕುಳ ಹೆರಿಟೇಜ್ ಹೌಸ್‌ನಲ್ಲಿ ಫನ್ ಸೈಕಲ್ ರೈಡ್ ಕಾರ್ಯಕ್ರಮವನ್ನು 2 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಆಯೋಜಿಸಲಾಗಿದೆ ಎಂದು ನಗರದ ಯುರೋಕಿಡ್ಸ್ ಕೊಡಿಯಾಲ್ ಬೈಲ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಆರತಿ ಶೆಟ್ಟಿ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್.ವಿ ಉದ್ಘಾಟಿಸಲಿದ್ದಾರೆ. ಮಂಗಳೂರು ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡಲಾಗುತ್ತದೆ ಎಂದರು .

2 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳು ತಮ್ಮ ಸೈಕಲ್ ಮತ್ತು ಪೋಷಕರೊಂದಿಗೆ ಭಾಗವಹಿಸಬಹುದು. ಭಾಗವಹಿಸಿದ ಮಕ್ಕಳಿಗೆ ಹಣ್ಣು, ಪ್ರಮಾಣಪತ್ರ ಮತ್ತು ಉಡುಗೊರೆ ನೀಡಲಾಗುವುದು .ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಅರುಣ್ ಕುಮಾರ್ ಶೆಟ್ಟಿ ಹಾಗೂ ಪಿಲಿಕುಳ ನಿಸರ್ಗಧಾಮದ ತಂಡದ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದರು . ಪತ್ರಿಕಾಗೋಷ್ಠಿಯಲ್ಲಿ ಯುರೋಕಿಡ್ಸ್ ಕೊಡಿಯಾಲ್ ಬೈಲ್ ಸಂಸ್ಥೆಯ ಸದಸ್ಯರಾದ ಶ್ರೇಯಸ್ ನಾಯಕ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!